ಹೆಸರಿನ ಮೇಲಿನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೆಂಡತಿಯರನ್ನು ಮಹಾರಾಣಿಯಂತೆ ನೋಡಿಕೊಳ್ಳುವ ಪುರುಷರ ಹೆಸರು ಯಾವ್ಯಾವ ಅಕ್ಷರದಿಂದ ಶುರುವಾಗುತ್ತದೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿದುಕೊಳ್ಳಲು ಸಾಕಷ್ಟಿದೆ. ಇದೆಲ್ಲದರ ಬಗ್ಗೆ ತಿಳಿಯುತ್ತಾ ಹೋದಷ್ಟು, ವಿಚಾರಗಳು ಸಿಗುತ್ತಲೇ ಹೋಗುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಒಬ್ಬ ವ್ಯಕ್ತಿಯ ಬಗ್ಗೆ ಅನೇಕ ವಿಚಾರಗಳನ್ನು ಆತನ ಹೆಸರಿನಿಂದಲೇ ತಿಳಿದುಕೊಳ್ಳಬಹುದು. ಒಬ್ಬ ವ್ಯಕ್ತಿಯ ಗುಣ, ಸ್ವಭಾವ, ಭವಿಷ್ಯ, ಇದೆಲ್ಲವು ಅವನ ಜೀವನದಲ್ಲಿ ಹೇಗಿರುತ್ತದೆ ಎನ್ನುವವುದು ಹೆಸರಿನಿಂದ ಗೊತ್ತಾಗುತ್ತದೆ. ಹೆಸರು ಒಬ್ಬ ವ್ಯಕ್ತಿಯ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜೊತೆಗೆ ಕೆಲವು ಅಕ್ಷರಗಳಿಂದ ಶುರುವಾಗುವ ವ್ಯಕ್ತಿಗಳು ತಮ್ಮ ಮದುವೆ ಬಳಿಕ ತಮ್ಮ ಪತ್ನಿಯರನ್ನು ರಾಣಿಯ ಹಾಗೆ ನೋಡಿಕೊಳ್ಳುತ್ತಾರೆ. ಹಾಗೂ ಪತ್ನಿಯ ಪ್ರೀತಿಯನ್ನು ಸಂಪಾದಿಸುತ್ತಾರೆ. ಹಾಗಿದ್ದರೆ ಆ ಅಕ್ಷರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
A ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗರು :- A ಅಕ್ಷರದಿಂದ ಶುರುವಾಗುವ ಹೆಸರನ್ನು ಇಟ್ಟುಕೊಂಡಿರುವ ಹುಡುಗರು ತಮ್ಮ ಪತ್ನಿಯನ್ನು ತುಂಬಾ ಪ್ರೀತಿಸುತ್ತಾರೆ. ಪತ್ನಿಯ ಪ್ರೀತಿಗೋಸ್ಕರ ಏನನ್ನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ಪತ್ನಿಯ ಭಾವನೆಯನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಗೌರವ ನೀಡುತ್ತಾರೆ. ಹಾಗೂ ತಮ್ಮಿಬ್ಬರ ಸಂಬಂಧ ಗಟ್ಟಿಯಾಗಿ ಬಲವಾಗಿ ಇರಿಸಿಕೊಳ್ಳಲು, ಸ್ವತಃ ತಲೆಬಾಗಲು ಸಿದ್ಧವಾಗಿರುತ್ತಾರೆ. ಸಂಬಂಧಗಳ ಪ್ರಾಮುಖ್ಯತೆ ಕೊಡುತ್ತಾರೆ ಇವರು, ಹಾಗಾಗಿ ಇವರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.
D ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗರು :- ಈ ಅಕ್ಷರದಿಂದ ಶುರುವಾಗುವ ಹುಡುಗರು ಕಾಳಜಿ ಇರುವ ಸ್ವಭಾವ ಉಳ್ಳವರು, ಹಾಗಾಗಿ ತಮ್ಮ ಹೆಂಡತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಜೀವನದಲ್ಲಿ ಎಲ್ಲಾ ಪ್ರಮುಖವಾದ ನಿರ್ಧಾರ ತೆಗೆದುಕೊಳ್ಳುವಾಗ ಪತ್ನಿಯ ಸಲಹೆ ಪಡೆದೇ ತೆಗೆದುಕೊಳ್ಳುತ್ತಾರೆ. ಹೆಂಡತಿಯನ್ನು ಸಂತೋಷವಾಗಿ ಇಡಲು ಏನು ಬೇಕೋ ಎಲ್ಲವನ್ನು ಮಾಡುತ್ತಾರೆ.
K ಅಕ್ಷರದಿಂದ ಶುರುವಾಗುವ ಹೆಸರಿರುವ ಹಡುಗರು :- ಈ ಹೆಸರಿನ ಹುಡುಗರು ಸಹ ಕಾಳಜಿಯ ಸ್ವಭಾವ ಇರುವವರು. ಕಷ್ಟ ಹಾಗೂ ಸಂಕಟದ ಸಮಯದಲ್ಲಿ ಇದ್ದಾಗ ಹೆಂಡತಿ ಮತ್ತು ಹೆಂಡತಿಯ ಕಡೆಯವರನ್ನು ಬಿಟ್ಟುಕೊಡುವುದಿಲ್ಲ. ಹೆಂಡತಿಯ ಭಾವನೆಯನ್ನು ಗೌರವಿಸುವ ಇವರು, ಹೆಂಡತಿಗಾಗಿ ಯಾರ ಜೊತೆ ಬೇಕಾದರೂ ಮದುವೆಯಾಗಲು ತಯಾರಾಗಿರುತ್ತಾರೆ.
R ಅಕ್ಷರದಿಂದ ಶುರುವಾಗುವ ಹೆಸರಿರುವ ಹುಡುಗರು :- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, R ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗರು ಬಹಳ ರೊಮ್ಯಾಂಟಿಕ್ ಆಗಿರುತ್ತಾರೆ. ಈ ಹುಡುಗರು ಸಹ ತಮ್ಮ ಪತ್ನಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುವುದಿಲ್ಲ. ಇವರಿಗೆ ಸಂಗಾತಿಯ ಜೊತೆಗೆ ಟ್ರಾವೆಲ್ ಮಾಡುವುದು ತುಂಬಾ ಇಷ್ಟ.
Comments are closed.