ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ಗೆ ಸಂದೇಶ ರವಾನೆ ಮಾಡಿದ ಬ್ರೆಟ್ ಲೀ. ಈ ಕೂಡ ಈ ಕೆಲಸ ಮಾಡಿ ಎಂದದ್ದು ಯಾಕೆ ಗೊತ್ತೇ?
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪರಿಸ್ಥಿತಿ ಈಗ ಹೇಗಿದೆ ಎಂಬುದು ಬಹುತೇಕರಿಗೆ ಗೊತ್ತಿದೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೂರಕ್ಕೆ ನೂರರಷ್ಟು ಶತಕ ಸಿಡಿಸಿರುವ ಕೊಹ್ಲಿ ಅವರು, ಈ ಮಧ್ಯೆ ಶತಕ ಸಿಡಿಸಿ ಎರಡು ವರ್ಷಗಳೇ ಕಳೆದು ಹೋಗಿದೆ. ಈ ವರ್ಷ, ಐಪಿಎಲ್ 2022ಕ್ಕಿಂತ ಮೊದಲು ಒಳ್ಳೆಯ ರನ್ ಗಳಿಸುತ್ತಿದ್ದ ಕೊಹ್ಲಿ ಅವರು ಆವೃತ್ತಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಯುವ ಆಟಗಾರರು ಮಿಂಚಿದರೆ ಕೊಹ್ಲಿ ಡಕ್ ಔಟ್ ಆಗಿದ್ದಾರೆ. ಆದರೆ, ಈ ಬಾರಿಯ ಐಪಿಎಲ್ ಬಳಿಕ ಕೊಹ್ಲಿಗೆ ವಿಶ್ರಾಂತಿ ಸಿಕ್ಕಿದೆ..
ಬಿಸಿಸಿಐ ಆಯ್ಕೆಗಾರರು ಈ ಐಪಿಎಲ್ ಸೀಸನ್ ಮುಗಿದ ನಂತರ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗಿ ಬೌಲರ್ ಬ್ರೆಟ್ ಲೀ ಅವರು ಕೋಹ್ಲಿ ಅವರು ಕ್ರಿಕೆಟ್ ನಿಂದ ಹೊರಬರಲು ಇದು ಉತ್ತಮ ಸಮಯ ಎಂದು ಹೇಳಿಕೆ ನೀಡಿದ್ದಾರೆ. ಇತ್ತೀಚೆಗಷ್ಟೇ ಕೋಹ್ಲಿ ಅವರ ಬಗ್ಗೆ ಬ್ರೆಟ್ ಲೀ ಅವರು ಮಾತನಾಡಿದ್ದು, ಕೋಹ್ಲಿ ಸ್ಕೋರ್ ಮಾಡದಿದ್ದರೆ ಅವರ ತಂಡವು ಕೂಡ ಅದೇ ರೀತಿ ಮಾಡುತ್ತದೆ. 2016ರಲ್ಲಿ ಕೊಹ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದರು, ಅವರ ತಂಡ ಅದನ್ನು ಸಂಭ್ರಮಿಸಿತು. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದರು..
ಈ ವರ್ಷ ಕೊಹ್ಲಿ ಉತ್ತಮವಾಗಿ ಆಡಲಿಲ್ಲ.. ಅದೇ ರೀತಿ ತಂಡ ಕೂಡ ಉತ್ತಮವಾದ ಪ್ರದರ್ಶನ ನೀಡಲಿಲ್ಲ. ಹೀಗಿದ್ದಾಗ, ತಂಡದ ಮೇಲೆ ಅವರ ಪ್ರಭಾವ ಹೇಗಿರುತ್ತದೆ ಎನ್ನುವುದನ್ನು ಕೋಹ್ಲಿ ಅವರು ಅರ್ಥ ಮಾಡಿಕೊಳ್ಳಬೇಕು. ಅಭಿಮಾನಿಗಳು ಯಾವಾಗಲೂ ಕೋಹ್ಲಿ ಅವರಿ ಹೆಚ್ಚಿನ ರನ್ ಗಳಿಸಬೇಕೆಂದು ಬಯಸುತ್ತಾರೆ. ಆದರೆ ಈಗ ಕೋಹ್ಲಿ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಹಾಗಾಗಿ ಕೊಹ್ಲಿ ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೆಲವು ದಿನಗಳಲ್ಲಿ ಅವರು ತಮ್ಮ ಆಲೋಚನೆಗಳನ್ನು ಕ್ರಿಕೆಟ್‌ನಿಂದ ಹೊರಗಿಡಬೇಕಾಗುತ್ತದೆ. ಹಾಗೆ ಮಾಡುವುದರಿಂದ ಕೋಹ್ಲಿ ತಮ್ಮ ಹಳೆಯ ಫಾರ್ಮ್ ಗೆ ಮರಳಲು ಉತ್ಸುಕರಾಗುತ್ತಾರೆ ಎಂದು ಬ್ರೆಟ್ ಲೀ ಹೇಳಿದ್ದಾರೆ. ಆದರೆ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಕೋಹ್ಲಿ ಪ್ರಮುಖ ಆಟಗಾರ ಎಂಬುದು ಎಲ್ಲರಿಗೂ ಗೊತ್ತು. ಆಗ ಕೋಹ್ಲಿ ಅವರ ಫಾರ್ಮ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ..
Comments are closed.