ಕೆಜಿಎಫ್ ತಾತನಿಗೆ ಒಲಿದು ಬಂದ ಅದೃಷ್ಟ. ಇನ್ಯಾವ ಕಲಾವಿದರಿಗೂ ಇಂತಹ ಚಾನ್ಸ್ ಸಿಕ್ಕಿಲ್ಲ, ಅದೃಷ್ಟ ಅಂದ್ರೆ ಇದೆ ಅಂದ್ರು ನೆಟ್ಟಿಗರು. ಯಾಕೆ ಗೊತ್ತೇ?
ಕೆಜಿಎಫ್2 ಸಿನಿಮಾ ಇಂದು ವಿಶ್ವಮಟ್ಟದಲ್ಲಿ ಸುದ್ದಿಯಾಗುವ ಸಿನಿಮಾ. ಈ ಸಿನಿಮಾ ಇಂದು ನಾಯಕ ಯಶ್, ನಾಯಕಿ ಶ್ರೀನಿಧಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಮಾತ್ರ ಒಳ್ಳೆಯ ಅವಕಾಶಗಳನ್ನು ತಂದುಕೊಟ್ಟಿಲ್ಲ. ಸಿನಿಮಾದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ಒಳ್ಳೆಯ ಅವಕಾಶಗಳನ್ನು ಕೆಜಿಎಫ್ ಸಿನಿಮಾ ತಂದುಕೊಟ್ಟಿದೆ. ಇದೀಗ ಕೆಜಿಎಫ್2 ಸಿನಿಮಾದಲ್ಲಿ ಸರಿಯಾಗಿ ದೃಷ್ಟಿ ಕಾಣಿಸದ ತಾತನ ಪಾತ್ರದಲ್ಲಿ ನಟಿಸಿದ್ದಾ ಕೃಷ್ಣ ಜಿ ರಾವ್ ಅವರ ಅದೆಷ್ಟವೇ ಬದಲಾಗಿದ್ದು, ಇದೀಗ ಇವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಕೃಷ್ಣ ಜಿ ರಾವ್ ಅವರು ಇದೀಗ ನಾಯಕನಾಗಿದ್ದಾರೆ. ಇವರು ನಾಯಕನಾಗಿರುವ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ.
ಕೃಷ್ಣ ಜಿ ರಾವ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಸಹಾಯಕ ನಿರ್ದೇಶಕನಾಗಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು ಸಹ, ಯಾರು ಇವರನ್ನು ಗುರುತಿಸರಿಲ್ಲ. ಅಷ್ಟು ವರ್ಷಗಳಲ್ಲಿ ಹಣ ಸಂಪಾದನೆ ಮಾಡಲು ಸಹ ಸಾಧ್ಯವಾಗಿರಲಿಲ್ಲ. ಆದರೆ ಕೆಜಿಎಫ್ ಸಿನಿಮಾ ಬಳಿಕ ಕೃಷ್ಣ ಜಿ ರಾವ್ ಅವರಿಗೆ ಸಾಲು ಸಾಲು ಅವಕಾಶಗಳು ಸಿಗುತ್ತಿವೆ ಎನ್ನಲಾಗಿದೆ. ಕೃಷ್ಣ ಅವರು ಈಗ ಮುದುಕನ ಲವ್ ಸ್ಟೋರಿ ಎಂದು ಹೆಸರಿಟ್ಟಿರುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯರೊಬ್ಬರು ಮದುವೆಯಾಗುವ ಪ್ರಯತ್ನ ಪಟ್ಟಾಗ, ಎಷ್ಟು ಹೆಣಗಾಡುತ್ತಾರೆ, ಏನೆಲ್ಲಾ ಪಾಡು ಪಡುತ್ತಾರೆ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದ್ದು, ಇದೊಂದು ಕಾಮಿಡಿ ಸಿನಿಮಾ ಆಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದು, ಸೆನ್ಸಾಸ್ ಸಹ ಆಗಿದ್ದು, ಬಿಡುಗಡೆ ದಿನಾಂಕ ನಿಗದಿಯಾಗಬೇಕಿದೆ.
ಇಂದು ತಮಗೆ ಇಷ್ಟು ಒಳ್ಳೆಯ ಅವಕಾಶಗಳು ಬರುತ್ತಿರುವುದಕ್ಕೆ ಕಾರಣ ಕೆಜಿಎಫ್ ಸಿನಿಮಾ ಎನ್ನುತ್ತಾರೆ ಕೃಷ್ಣ ರಾವ್ ಅವರು. ಕೆಜಿಎಫ್ ಚಾಪ್ಟರ್1 ಬಿಡುಗಡೆ ಬಳಿಕ 30ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕೆಜಿಎಫ್ ಚಾಪ್ಟರ್2 ಬಳಿಕ 15ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಸಿನಿಮಾ ಅವಕಾಶಗಳು ಬಂದರು ಸಹ ಒಳ್ಳೆಯ ಕತೆ ಮತ್ತು ಪಾತ್ರಗಳಂಮು ಆರಿಸಿಕೊಳ್ಳುತ್ತಿದ್ದಾರಂತೆ ಕೃಷ್ಣ ಜಿ ರಾವ್.. ಕೆಜಿಎಫ್ ಸಿನಿಮಾದ ಆ ಒಂದು ಸಣ್ಣ ಪಾತ್ರದಿಂದ ಅವರಿಗೆ ಅವಕಾಶಗಳು ಸಿಗುತ್ತಿದ್ದು, ಜೀವನವೇ ಬದಲಾಗಿದೆ. ಸಹಾಯಕ ನಿರ್ದೇಶಕನಾಗಿ ಹಣ ಸಂಪಾದನೆ ಮಾಡಿರಲಿಲ್ಲ, ಯಾರು ಗುರುತಿಸುತ್ತಲೂ ಇರಲಿಲ್ಲ. ಆದರೆ ಕೆಜಿಎಫ್ ಸಿನಿಮಾದ ಸಣ್ಣ ಪಾತ್ರದಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಕೃಷ್ಣ ಜಿ ರಾವ್ ಅವರು. ಮುದುಕನ ಲವ್ ಸ್ಟೋರಿ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷೆ ಇದ್ದು, ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಬೇಕಿದೆ.
Comments are closed.