ರಸ್ತೆಬದಿಯ ಪಾನಿ ಪುರಿ ತಿನ್ನಲು ಕಾರು ಇಳಿದು ಲಕ್ಷ ರೂಪಾಯಿ ಕಳೆದುಕೊಂಡ ನಟಿ, ಪಾನೀಪುರಿಯವನು ಮಾಡಿದ್ದೇನು ಗೊತ್ತೇ??
ಪ್ರಪಂಚ ಈಗ ಸ್ವಾರ್ಥದಿಂದ ಕೂಡಿದೆ. ಹಣ ಮತ್ತು ಮಣ್ಣಿನ ಆಸೆಎಲ್ಲರಲ್ಲೂ ಇರುವುದು ಹೆಚ್ಚು. ಬಿಟ್ಟಿಯಾಗಿ ಹಣ ಸಿಕ್ಕರೆ, ಬಿಡುವಂತಹ ಜನರು ಈಗ ಇಲ್ಲಿಲ್ಲ. ದಾರಿಯಲ್ಲಿ ಓಡಾಡುವಾಗ, 10 ರೂಪಾಯಿ ಬಿದ್ದಿರುವುದನ್ನು ನೋಡಿದರೆ ಜನರು ಬಿಡುವುದಿಲ್ಲ, ಅದನ್ನು ಎತ್ತಿಕೊಂಡು ಹೋಗುತ್ತಾರೆ. ಅಂಥದ್ರಲ್ಲಿ, ಒಂದು ಲಕ್ಷ ರೂಪಾಯಿ ಸಿಕ್ಕಿದ್ರೆ ಜನರು ಬಿಡ್ತಾರ? ಒಂದು ಲಕ್ಷ ರೂಪಾಯಿಯನ್ನು ರಸ್ತೆ ಬದಿಯಲ್ಲಿ ಪಾನಿಪೂರಿ ತಿನ್ನುತ್ತಾ ಕಳೆದುಕೊಂಡರು ಖ್ಯಾತ ಹಿಂದಿ ಕಿರುತೆರೆ ನಟಿ.. ನಂತರ ಆಗಿದ್ದೇನು ಗೊತ್ತಾ? ಆ ಹಣ ಅವರಿಗೆ ವಾಪಸ್ ಸಿಕ್ತಾ? ತಿಳಿಸುತ್ತೇವೆ ನೋಡಿ..
ಸಾಮಾನ್ಯವಾಗಿ ಹುಡುಗಿಯರಿಗೆ ಪಾನಿಪೂರಿ ಅಂದ್ರೆ ತುಂಬಾ ಇಷ್ಟ. ನಟಿಯರು ಸಹ ಅದೇ ರೀತಿ, ರೋಡ್ ಸೈಡ್ ಸ್ಟ್ರೀಟ್ ಫುಡ್ ತಿನ್ನಲು ಇಷ್ಟಪಡುತ್ತಾರೆ. ಹಿಂದಿ ಕಿರುತೆರೆ ನಟಿ ಕಾಮ್ಯ ಪಂಜಾಬಿ ಸಹ ನಟಿ ಸಹ ಕಾರ್ಯಕ್ರಮ ಒಂದನ್ನು ಮುಗಿಸಿಕೊಂಡು ಬರುವಾಗ, ರಸ್ತೆಯಲ್ಲಿ ಪಾನಿಪೂರಿ ಅಂಗಡಿ ನೋಡಿ,ದಾರಿ ಮಧ್ಯೆ ಕಾರ್ ನಿಲ್ಲಿಸಿ, ಪಾನಿಪೂರಿ ತಿಂದಿದ್ದಾರೆ. ಪಾನಿಪೂರಿ ತಿನ್ನುವುದನ್ನು ಬಹಳ ಎಂಜಾಯ್ ಮಾಡುತ್ತಿದ್ದ ಈ ನಟಿ, ತಿಂದ ಬಳಿಕ ತನ್ನ ಬಳಿ ಇದ್ದ ಬ್ಯಾಗ್ ಅನ್ನು ಅಂಗಡಿಯಲ್ಲೇ ಬಿಟ್ಟುಬಿಟ್ಟಿದ್ದಾರೆ. ಮತ್ತೆ ಕಾರ್ ನಲ್ಲಿ ಹೋಟೆಲ್ ಗೆ ವಾಪಸ್ ಬಂದ ಬಳಿಕ, ತಾವು ಜೊತೆಗೆ ತಂದಿದ್ದ ಬ್ಯಾಗ್ ಇಲ್ಲ ಎಂದು ಅರಿವಿಗೆ ಬಂದಿದೆ. ಕಾಮ್ಯ ಅವರು ಬಿಟ್ಟುಬಂದಿದ್ದ ಬ್ಯಾಗ್ ನಲ್ಲಿ ಇದ್ದದ್ದು ಕಡಿಮೆ ಹಣವಲ್ಲ, ಬರೋಬ್ಬರಿ 1 ಲಕ್ಷ ರೂಪಾಯಿ ಅದರೊಳಗಿತ್ತು. ಅಷ್ಟು ಹಣವನ್ನು ಹಿಂದಿರುಗಿಸಿ ಕೊಡುತ್ತಾರಾ ಎಂದು ಕಾಮ್ಯ ಅವರಿಗೆ ಭಯ ಆಗಿತ್ತಂತೆ..
ಈ ಘಟನೆಯನ್ನು ಮಾಧ್ಯಮದ ಎದುರು ಹೇಳಿದ್ದಾರೆ ಕಾಮ್ಯ.. ಇಂದೋರ್ ನಲ್ಲಿ ಕಾರ್ಯಕ್ರಮ ಒಂದನ್ನು ಅಟೆಂಡ್ ಮಾಡಿ ಬರುವಾಗ, ದಾರಿ ಮಧ್ಯೆ ಪಾನಿಪೂರಿ ತಿನ್ನಲು ಇಳಿದು, ಪಾನಿಪೂರಿಯನ್ನು ಎಂಜಾಯ್ ಮಾಡುತ್ತಾ ತಿಂದ ಕಾಮ್ಯ, 1 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಬಿಟ್ಟು ಬಂದಿದ್ದರು.. ಇದರ ಬಗ್ಗೆ ಮಾತನಾಡಿ, “ಆ ಬ್ಯಾಗ್ ನಲ್ಲಿ ಕಡಿಮೆ ಹಣವೇನು ಇರಲಿಲ್ಲ. 1 ಲಕ್ಷ ರೂಪಾಯಿ ಇತ್ತು. ಹಾಗಾಗಿ ನನಗೆ ತುಂಬಾ ಭಯ ಆಗಿತ್ತು. ಹಣ ಕಳೆದುಕೊಂಡಿದ್ದೀನಿ, ವಾಪಸ್ ಸಿಗುವುದಿಲ್ಲ ಎಂದುಕೊಂಡಿದ್ದೆ. ಸ್ವಲ್ಪ ಹಣ ಇದ್ದಿದ್ದರೆ ವಾಪಸ್ ಕೊಡುತ್ತಿದ್ದರು, ಅಷ್ಟು ಹಣವನ್ನು ವಾಪಸ್ ಕೊಡುವುದಿಲ್ಲ ಎಂದುಕೊಂಡಿದ್ದೆ. ಆದರೆ ಅಂಗಡಿಯವನು ತುಂಬಾ ಒಳ್ಳೆಯ ಮನುಷ್ಯನಾಗಿದ್ದನು. ತನ್ನ ಜೊತೆ ಇದ್ದ ಸ್ನೇಹಿತನ ಕೈಯಲ್ಲಿ ಹಣವಿದ್ದ ಬ್ಯಾಗ್ ಅನ್ನು ಹಿಂದಿರುಗಿಸಿ ಕಳಿಸಿದ್ದಾನೆ. ಇಷ್ಟು ಒಳ್ಳೆಯ ಮನಸ್ಸಿನ ಜನರು ಈಗಲೂ ಇದ್ದಾರೆ ಎನ್ನುವುದೇ ಆಶ್ಚರ್ಯ ತರಿಸಿತು..” ಎಂದಿದ್ದಾರೆ ಕಾಮ್ಯ.
Comments are closed.