ಪ್ರಭಾಸ್ ರವರಿಗಾಗಿ ಹೊಸ ಫೈಟ್ ಪ್ಲಾನ್ ಮಾಡುತ್ತಿರುವ ಪ್ರಶಾಂತ್ ನೀಲ್. ಎಷ್ಟೆಲ್ಲಾ ಪ್ಲಾನ್ ಮಾಡಿ ಎಲ್ಲಿ ಮಾಡುತ್ತಿದ್ದಾರೆ ಗೊತ್ತೇ??
ಬಾಹುಬಲಿ ಸಿನಿಮಾ ಮೂಲಕ ಪ್ಯಾನ್-ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಿದರು ನಟ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್. ನಂತರ ನಟಿಸಿದ ಸಾಹೋ ಮತ್ತು ರಾಧೇಶ್ಯಾಮ್ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ನಲ್ಲಿ ದುರಂತಗಳನ್ನು ನೋಡಿದರು. ಇದರೊಂದಿಗೆ ಪ್ರಭಾಸ್ ತಮ್ಮ ಮುಂದಿನ ಚಿತ್ರದ ಮೂಲಕ ಯಶಸ್ಸು ಕಾಣಲೇಬೇಕು ಎಂದು ನಿರ್ಧಾರ ಮಾಡಿದ್ದಾರೆ ಈ ಹಿನ್ನಲೆಯಲ್ಲಿ ಅವರು ತಮ್ಮ ಮುಂದಿನ ಸಿನಿಮಾ ಆಗಿರುವ ಸಲಾರ್ ಬಗ್ಗೆಯೂ ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದ್ದಾರೆ..
ಆದರೆ ಇತ್ತೀಚೆಗಷ್ಟೇ ಸಲಾರ್ ಸಿನಿಮಾ ಬಗ್ಗೆ ಕುತೂಹಲಕಾರಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಬಗ್ಗೆ ಸಿಕ್ಕಿರುವ ಕುತೂಹಲಕಾರಿ ಅಪ್ಡೇಟ್ ಈಗ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್ ಪೂರ್ತಿ ಸಮುದ್ರದಲ್ಲಿ ನಡೆಯುತ್ತದೆ. ಅದರಲ್ಲೂ ಸಮುದ್ರದೊಳಗೆ ಮಾಡುವ ಚೇಸಿಂಗ್ ದೃಶ್ಯಗಳು ಬೇರೆಯದೇ ರೇಂಜ್ ನಲ್ಲಿ ಮೂಡಿಬರಲಿದೆಯಂತೆ.
ಕೆಜಿಎಫ್ ನಂತೆಹ ಹೈವೋಲ್ಟೇಜ್ ಸಿನಿಮಾ ನಿರ್ದೇಶನ ಮಾಡಿರುವ ಪ್ರಶಾಂತ್ ನೀಲ್ ಅವರು, ಸಲಾರ್ ನಲ್ಲಿ ಪ್ರಭಾಸ್ ಅವರ ಜೊತೆಗೆ ಯಾವ ರೀತಿಯ ಮ್ಯಾಜಿಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಲಾರ್ ಸಿನಿಮಾ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಈ ಸಿನಿಮಾದಲ್ಲಿ ಶ್ರುತಿಹಾಸನ್ ನಾಯಕಿಯಾಗಿ ಆಯ್ಕೆಯಾಗಿದ್ದು, ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿ ಸಹ ಪಾಲ್ಗೊಂಡಿದ್ದರು. ಸಲಾರ್ ಜೊತೆಗೆ ಪ್ರಭಾಸ್ ಅವರು ಮತ್ತೊಂದೆಡೆ ಓಂ ರೌತ್ ನಿರ್ದೇಶನದ ಆದಿ ಪುರುಷ್, ನಾಗ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ, ಮತ್ತು ಸಂದೀಪ್ ವಂಗಾ ನಿರ್ದೇಶನದ ಸ್ಪಿರಿಟ್ ಸಿನಿಮಾಗಳನ್ನು ಸಹ ಪ್ರಭಾಸ್ ಅವರು ಒಪ್ಪಿಕೊಂಡಿದ್ದು, ಅವುಗಳ ಕೆಲಸದಲ್ಲಿ ಬ್ಯುಸಿ ಇದ್ದಾರೆ.
Comments are closed.