Neer Dose Karnataka
Take a fresh look at your lifestyle.

ಕೇವಲ ಕೃಷಿಯ ಮೇಲೆ ಅವಲಂಬಿತವಾಗಿರುವ ರೈತರು ಈ ಐಡಿಯಾ ಬಳಸಿದ್ರೆ ಬದುಕಿಗೆ ಮತ್ತೊಂದು ದಾರಿ ಸೃಷ್ಟಿಯಾಗುತ್ತದೆ. ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ರೈತನನ್ನು ದೇಶದ ಬೆನ್ನೆಲುಬು ಎನ್ನುವುದಾಗಿ ಕರೆಯುತ್ತಾರೆ. ನಾವೆಷ್ಟು ದುಡಿದರೂ ಕೂಡ ಅದು ರೈತ ಮಾಡುವ ದುಡಿಮೆಗೆ ಸರಿಸಮವಲ್ಲ. ಯಾಕೆಂದರೆ ರೈತ ಕಷ್ಟ ಪಟ್ಟು ದುಡಿದು ನಾವು ಊಟಮಾಡುವ ಧಾನ್ಯಗಳನ್ನು ಬೆಳೆಯುತ್ತಾನೆ. ಆತನಿಂದಲೇ ನಾವು ಇಂದು ಹಸಿವು ಮುಕ್ತರಾಗಿ ಇರಲು ಸಾಧ್ಯವಾಗುತ್ತಿರುವುದು ಎಂದು ಹೇಳಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಅನಾವೃಷ್ಟಿಯಿಂದಾಗಿ ರೈತರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹೀಗಾಗಿ ಅವರು ಜೀವನೋಪಾಯಕ್ಕಾಗಿ ಪರ್ಯಾಯ ದಾರಿಯನ್ನು ಕಂಡು ಹಿಡಿಯಬೇಕಾಗಿದೆ. ಅಂತಹವರಿಗೆ ಕಕ್ಕುಟೋದ್ಯಮ ಸರಿಯಾದದ್ದು ಎನ್ನಬಹುದಾಗಿದೆ.

ಯಾಕೆಂದರೆ ಈ ಉದ್ಯಮವನ್ನು ಕಡಿಮೆ ಬಂಡವಾಳದಲ್ಲಿ ಹಾಗೂ ಕಡಿಮೆ ಸ್ಥಳಾವಕಾಶದಲ್ಲಿ ಮಾಡಬಹುದು. ಕೋಳಿಯಲ್ಲಿ ಹಲವಾರು ತಳಿಗಳಿರುತ್ತವೆ. ಇನ್ನು ವೈದ್ಯರು ಕೂಡ ಕೋಳಿಯ ನಿಯಮಿತ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಹೀಗಾಗಿ ಕೋಳಿ ಮಾತ್ರವಲ್ಲದೇ ಕೋಳಿಯ ಮೊಟ್ಟೆ ಕೂಡ ಮಾರಾಟ ಮಾಡಬಹುದಾಗಿದೆ. ಬನ್ನಿ ಈ ಕುಕ್ಕುಟೋದ್ಯಮದ ಕುರಿತಂತೆ ವಿವರವಾಗಿ ತಿಳಿಯೋಣ ಬನ್ನಿ.

ಬೆಳೆಯನ್ನು ಬೆಳೆಯುವ ಸಂದರ್ಭದಲ್ಲಿ ರೈತರು 3 ತಿಂಗಳ ಹಾಗೂ 6 ತಿಂಗಳ ಬೆಳೆ ಎನ್ನುವುದಾಗಿ ಬೆಳೆಯ ಲಾಭವನ್ನು ಪಡೆಯುತ್ತಾರೆ. ಆದರೆ ಇಲ್ಲಿ ಹಾಗಲ್ಲ ಮೊಟ್ಟೆ ಹಾಗೂ ಕೋಳಿಯ ಮಾಂಸದಿಂದಾಗಿ ತಿಂಗಳ ಆದಾಯ ವನ್ನು ಆರಾಮವಾಗಿ ಸಂಪಾದಿಸಬಹುದಾಗಿದೆ. ಹೌದು ಗೆಳೆಯರೇ ಯಾಕೆಂದರೆ ಭಾರತದಲ್ಲಿ ಬೇರೆ ಮಾಂಸಗಳಿಗೆ ಹೋಲಿಸಿದರೆ ಕೋಳಿಮಾಂಸಕ್ಕೆ ಗ್ರಾಹಕರು 36% ಜನರಿದ್ದಾರೆ. ಅಂದರೆ ಕೋಳಿಮಾಂಸಕ್ಕೆ ಗ್ರಾಹಕರು ಹೆಚ್ಚಿದ್ದಾರೆ. 75 ಸಾವಿರ ಕೋಟಿ ಮೌಲ್ಯದ ಕೋಳಿ ಮಾಂಸದ ಮಾರುಕಟ್ಟೆ ಭಾರತದಲ್ಲಿದ್ದು ಕೇವಲ 140 ಕೋಟಿ ರೂಪಾಯಿ ಕೋಳಿಮಾಂಸವನ್ನು ಮಾತ್ರ ವಿದೇಶಿ ರಫ್ತಿಗಾಗಿ ಕಳುಹಿಸುತ್ತಿದ್ದೇವೆ. ಹೀಗಾಗಿ ಇದಕ್ಕಾಗಿ ಇರುವಂತಹ ಸಂಘ ಸಂಸ್ಥೆಗಳಲ್ಲಿ ಸೇರಿದಂತೆ ಕೊಂಡರೆ ಸಾಕು ಅವರೇ ನಿಮಗೆ ಕೋಳಿ ಸಾಕಾಣಿಕೆಗಾಗಿ ಹಾಗೂ ಮಾರಾಟಕ್ಕಾಗಿ ಸಹಾಯ ಮಾಡುತ್ತಾರೆ. ಇದಕ್ಕಾಗಿ ಕೋಳಿಮರಿಗಳನ್ನು ಕೂಡ ನೀಡುತ್ತಾರೆ. ಹೀಗಾಗಿ ನೀವು ಅದಕ್ಕಾಗಿ ಸುಸಜ್ಜಿತ ಕೋಣೆಯನ್ನು ಹಾಗೂ ಆಹಾರವನ್ನು ಹಾಕಿ ನೋಡಿಕೊಳ್ಳುವುದನ್ನು ಮಾತ್ರ ನೋಡಬೇಕು. ಇದನ್ನು ನೀವು ನಿರ್ವಹಣೆ ಮಾಡಿಕೊಂಡು ಬಂದರೆ ಅತ್ಯಂತ ಕಡಿಮೆ ಬಂಡವಾಳದಲ್ಲಿ ಅತ್ಯಂತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಇವುಗಳಲ್ಲಿ 5 ತಳಿಗಳಿದ್ದು 5 ತಳಿಗಳ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ಕಡಕನಾಥ ತಳಿಯ ಕೋಳಿ. ಈ ಕೋಳಿಯನ್ನು ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರು ಸಾಕುತ್ತಾರೆ. ವಿರಾಟ್ ಕೊಹ್ಲಿ ಅವರಂತಹ ಕ್ರಿಕೆಟಿಗರು ಕೂಡ ಈ ಕೋಳಿಯನ್ನು ಸೇವಿಸುತ್ತಾರೆ. ಯಾಕೆಂದರೆ ಇದರಲ್ಲಿ ಕೊಬ್ಬಿನಂಶ ಕಡಿಮೆ ಇರುತ್ತದೆ ಹಾಗೂ ಪ್ರೋಟಿನ್ ಅಧಿಕವಾಗಿ ಸಿಗುತ್ತದೆ. ಈ ಕೋಳಿಯ ಮಾಂಸಕ್ಕೆ ಅಧಿಕವಾದ ಬೇಡಿಕೆಯಿದ್ದು ಕೆಜಿಗೆ 800ರಿಂದ 900 ರೂಪಾಯಿ ರವರೆಗೆ ಮಾರಾಟ ಆಗುತ್ತದೆ. ಸಾವಿರ ಕೋಳಿಯನ್ನು ಸಾಕಿದರೆ 6 ತಿಂಗಳ ಒಳಗಡೆ ಗಾಗಿ 8 ಲಕ್ಷ ರೂಪಾಯಿ ಹೊರಗೆ ಲಾಭವನ್ನು ಗಳಿಸಬಹುದಾದಂತಹ ಸಾಧ್ಯತೆಯಿದೆ. ಇದು ನೋಡಲು ಕಪ್ಪು ಇರುತ್ತದೆ ಹಾಗೂ ಇದರ ಮಾಂಸದ ಬಣ್ಣವು ಕೂಡ ಕಪ್ಪಾಗಿರುತ್ತದೆ. ಆದರೆ ಇದರ ಮೊಟ್ಟೆ ಮಾತ್ರ ಬೆಳ್ಳಗೆ ಇರುತ್ತದೆ. ಹೆಣ್ಣು ಕೋಳಿ ತನ್ನ ಜೀವಿತಾವಧಿಯಲ್ಲಿ ಗರಿಷ್ಠ 90 ಮೊಟ್ಟೆ ಇಡುತ್ತದೆ. ಇನ್ನು ಈ ಕೋಳಿಯ ಮೊಟ್ಟೆ ಗೂ ಕೂಡ ಮೂವತ್ತರಿಂದ ಐವತ್ತು ರೂಪಾಯಿವರೆಗೆ ಬೆಲೆ ಇದೆ. ಒಂದು ಕೋಳಿ 1.5 ಕೆಜಿ ಇಂದ 1.8 ಕೆಜಿಯ ವರೆಗೆ ಬೆಳೆಯುತ್ತದೆ. ಬೇರೆ ಯವರ ಒಪ್ಪಂದದೊಂದಿಗೆ ಮಾರಾಟ ಮಾಡಿದರೆ 350 ರೂಪಾಯಿ ಗಳಿಸಬಹುದು ನೀವೇ ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ 800 ರೂಪಾಯಿ ಪಡೆಯುತ್ತೀರಿ.

ಎರಡನೆಯದು ಬಿವಿ 380 ತಳಿ. ಬಹುತೇಕ 25 ಮಿಲಿಯನ್ ಗೂ ಅಧಿಕ ಜನ ಈ ಕೋಳಿಯನ್ನು ಸಾಕಾಣಿಕೆ ಮಾಡಿ ಹಣವನ್ನು ಗಳಿಸುತ್ತಿದ್ದಾರೆ. ಅದರಲ್ಲೂ ಅಧಿಕವಾಗಿ ಇದರ ಕೋಳಿ ಮೊಟ್ಟೆಯನ್ನು ಮಾರಾಟ ಮಾಡಿ ಲಾಭವನ್ನು ಗಳಿಸುತ್ತಿರುವ ಅವರು ಹಲವಾರು ಮಂದಿ ಇದ್ದಾರೆ. ವೈದ್ಯರು ಕೂಡ ಈ ಕೋಳಿ ಮೊಟ್ಟೆಯನ್ನು ತಿನ್ನಲು ಸಲಹೆ ನೀಡುತ್ತಾರೆ. ಈ ಕೋಳಿ ವರ್ಷಕ್ಕೆ 320 ಮೊಟ್ಟೆಗಳನ್ನು ಇಡುತ್ತದೆ. ಈ ತಳಿಯ 500 ಕೋಳಿ ಸಾಕಿದರೆ ತಿಂಗಳಿಗೆ 60000 ಆದಾಯ ಹಾಗೂ 12500 ಮೊಟ್ಟೆಗಳನ್ನು ಪಡೆಯಬಹುದಾಗಿದೆ. ಎಲ್ಲಾ ಸೇರಿ ಲಕ್ಷ ರೂಪಾಯಿ ಆದಾಯ ಗಳಿಸಿದರೆ ಕನಿಷ್ಠಪಕ್ಷ 40000 ಸಾವಿರ ರೂಪಾಯಿ ತಿಂಗಳಿಗೆ ಲಾಭವನ್ನು ಗಳಿಸುತ್ತೀರಿ.

ಮೂರನೇದಾಗಿ ನಾಟಿ ಕೋಳಿ. ಇದರ ಕುರಿತಂತೆ ಬಹುತೇಕ ಎಲ್ಲ ಮಂದಿಗೂ ಕೂಡ ತಿಳಿದಿದೆ ಇದೊಂದು ಲಾಭದಾಯಕ ತಳಿಯಾಗಿದೆ. ಇದಕ್ಕೆ ಓಡಾಡಲು ಸರಿಯಾದ ಜಾಗದ ವ್ಯವಸ್ಥೆ ಹಾಗೂ ಆಹಾರ ವ್ಯವಸ್ಥೆಯನ್ನು ಪೂರೈಸ ಬೇಕಾಗಿರುತ್ತದೆ. ನಿಮಗೆ ಒಂದು ನಾಟಿ ಕೋಳಿ ಮರಿ ಎನ್ನುವುದು 35 ರೂಪಾಯಿಗೆ ಸಿಗುತ್ತದೆ. 500 ಕೋಳಿ ಮರಿಗಳನ್ನು 120 ದಿನಗಳವರೆಗೆ ಸಾಕಬೇಕಾಗುತ್ತದೆ. ಇದರಲ್ಲಿ ಗರಿಷ್ಠವೆಂದರೆ 15 ರಿಂದ 20 ಸಾವಿರ ರೂಪಾಯಿ ಖರ್ಚಾಗಬಹುದಾಗಿದೆ. ಒಂದು ಕೋಳಿಗೆ 350 ಇದ್ದರೂ ಕೂಡ ತಿಂಗಳಿಗೆ 1.5ಲಕ್ಷದಿಂದ 2 ದಕ್ಷದವರೆಗೆ ಆದಾಯವನ್ನು ಗಳಿಸಬಹುದಾಗಿದೆ. ಮೊಟ್ಟೆಯನ್ನು ಕೂಡ ಮಾರಾಟ ಮಾಡಬಹುದಾಗಿದೆ. ನಾಟಿ ಕೋಳಿ ಏನು ದೊಡ್ಡಮಟ್ಟದಲ್ಲಿ ಉದ್ಯಮವನ್ನಾಗಿ ಇರಿಸಿಕೊಂಡವರು ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವವರು ಕೂಡ ನಮ್ಮ ಕಣ್ಣ ಮುಂದಿದ್ದಾರೆ.

ನಾಲ್ಕನೇದಾಗಿ ಸ್ವರ್ಣಧರ ಕೋಳಿ. ನೋಡಲು ನಾಟಿಕೋಳಿ ಹಾಗೆ ಇರುವಂತಹ ಈ ತಳಿಯ ಕೋಳಿ ವರ್ಷಕ್ಕೆ 200 ಮೊಟ್ಟೆಯನ್ನು ನೀಡುತ್ತದೆ. ಒಂದು ಮರಿಯನ್ನು 20 ರೂಪಾಯಿ ನೀಡಿ ಖರೀದಿಸಬಹುದಾಗಿದೆ. ಮಾಂಸಕ್ಕೆ ಒಂದು ಕೆಜಿಗೆ 150 ರೂಪಾಯಿ ಸಿಗುತ್ತದೆ. ಇನ್ನೊಂದು ಕೋಳಿ ಏನಿಲ್ಲವೆಂದರೂ ಮೂರರಿಂದ ನಾಲ್ಕು ಕೆಜಿ ತೂಗುತ್ತದೆ. ಮೊಟ್ಟೆಯಿಂದ ಕೂಡ ಹಣವನ್ನು ಗಳಿಸಬಹುದಾಗಿದೆ. ಇನ್ನು ಈ ಕೋಳಿಯ ಹಿಕ್ಕೆಯನ್ನು ಕೂಡ ಗೊಬ್ಬರವನ್ನಾಗಿ ಮಾರಾಟ ಮಾಡಬಹುದಾಗಿದೆ. ಇನ್ನು ಇದರ ಮೊಟ್ಟೆಗೆ ಕೂಡ ಎಂಟು ರೂಪಾಯಿ ಬೇಡಿಕೆ ಇದೆ. ಹೀಗಾಗಿ ಮೊಟ್ಟೆ ಮಾಂಸ ಹಾಗೂ ಹಿಕ್ಕೆಯಿಂದ ತಿಂಗಳಿಗೆ ದೊಡ್ಡಮಟ್ಟದ ಲಾಭವನ್ನು ಪಡೆಯಬಹುದಾಗಿದೆ.

ಕೊನೆದಾಗಿ ಕೇಳಿಬರುವುದು ಗಿರಿರಾಜ ಕೋಳಿ. ಈ ತಳಿಯ ಕೋಳಿಯ ಕುರಿತಂತೆ ನಿಮಗೂ ಕೂಡ ತಿಳಿದಿದೆ. ಗಿರಿರಾಜ ಕೋಳಿ ವರ್ಷಕ್ಕೆ 120 ಮೊಟ್ಟೆಯನ್ನು ಇಡುತ್ತದೆ. ಗಿರಿರಾಜ ಕೋಳಿ ಗೆ ಇರುವಷ್ಟು ಬೇಡಿಕೆ ಬೇರೆ ಯಾವ ಕೋಳಿಗೂ ಇಲ್ಲ ಎಂದು ಹೇಳಬಹುದಾಗಿದೆ. ನಾಟಿಕೋಳಿಯ ಹಾಗಿದ್ದರೂ ಕೂಡ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಮಾಂಸವನ್ನು ನೀಡುವಂತಹ ಕೋಳಿ ಗಿರಿರಾಜ ಆಗಿದೆ. 500 ಕೋಳಿಗಳಿಗೆ ನೀವು ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಏನಿಲ್ಲವೆಂದರೂ ನೀವು 2 ಲಕ್ಷದವರೆಗೆ ಆದಾಯ ಸಿಗಲಿದೆ. ಇದಕ್ಕಾಗಿಯೇ ರೈತರು ಕೇವಲ ಒಂದೇ ಆದಾಯ ಮೂಲವನ್ನು ಅಥವಾ ಕೃಷಿಯನ್ನು ಮಾತ್ರ ಅವಲಂಬಿತವಾಗಿ ಇಟ್ಟುಕೊಂಡರೆ ಅದು ಆತನಿಗೆ ಆದಾಯ ಮೂಲದಲ್ಲಿ ಹಿನ್ನಡೆಯನ್ನು ತರಬಹುದಾಗಿದೆ. ಕೃಷಿಯ ಜೊತೆಗೆ ಇಂತಹ ಉದ್ಯಮವನ್ನು ಕೂಡ ಇಟ್ಟುಕೊಂಡರೆ ಆತನಿಗೆ ಆರ್ಥಿಕವಾಗಿ ಸಾಕಷ್ಟು ಸಹಾಯಕವಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ

Comments are closed.