ಮಹಿಳೆಯರ ಈ 6 ಕೆಟ್ಟ ಅಭ್ಯಾಸಗಳಿಂದಾಗಿ ಮನೆ ಹಾಳಾಗುತ್ತದೆ; ಸ್ವತಃ ಆಚಾರ್ಯ ಚಾಣಕ್ಯರೇ ಹೇಳಿರುವ ಮಾತಿನ ಹಿಂದಿನ ಅಭ್ಯಾಸಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರಾಚೀನಕಾಲದಿಂದಲೂ ಕೂಡ ಚಾಣಕ್ಯ ರವರ ಕುರಿತಂತೆ ನಮ್ಮ ಭಾರತೀಯರಲ್ಲಿ ವಿಶೇಷವಾದ ಗೌರವ ಹಾಗೂ ಪ್ರೀತಿ ಇದೆ. ಯಾಕೆಂದರೆ ಅವರ ಬುದ್ಧಿವಂತಿಕೆ ಹಾಗೂ ಜೀವನಕ್ರಮದ ನೀತಿ ಅಂದಿನಿಂದ ಇಂದಿನವರೆಗೂ ಕೂಡ ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ಜೀವನದಲ್ಲಿ ಹೇಗೆ ಇರಬೇಕು ಎನ್ನುವುದರ ಕುರಿತಂತೆ ತಮ್ಮ ಜೀವನದ ಅನುಭವವನ್ನು ಒಳಗೊಂಡಂತಹ ಚಾಣಕ್ಯ ನೀತಿ ಎನ್ನುವ ಗ್ರಂಥವನ್ನು ಬರೆದಿದ್ದಾರೆ.
ಇನ್ನು ಚಾಣಕ್ಯನೀತಿ ಗ್ರಂಥದಲ್ಲಿ ಆಚಾರ್ಯ ಚಾಣಕ್ಯರು ಹೆಣ್ಣು ಮಕ್ಕಳು ಯಾವ ರೀತಿ ಇರಬೇಕು ಎಂಬುದನ್ನು ಕೂಡ ಉಲ್ಲೇಖಿಸಿದ್ದಾರೆ. ಇನ್ನು ಮಹಿಳೆಯರಲ್ಲಿ ಇರುವಂತಹ ಆರು ಅಭ್ಯಾಸಗಳು ಅವರ ಮನೆಯನ್ನೇ ಹಾಳುಗೆಡವುತ್ತದೆ ಎಂಬುದಾಗಿ ಕೂಡಾ ಉಲ್ಲೇಖಿಸಿದ್ದಾರೆ. ಹಾಗಿದ್ದರೆ ಚಾಣಕ್ಯ ನೀತಿಯಲ್ಲಿ ಇರುವಂತಹ ಮಹಿಳೆಯರ ಆ 6 ಕೆಟ್ಟ ಅಭ್ಯಾಸಗಳು ಯಾವುವು ಎನ್ನುವುದನ್ನು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದುವುದರ ಮೂಲಕ ತಿಳಿಯೋಣ.
ಹಣದ ದುರಾಸೆ; ಕೆಲವೊಮ್ಮೆ ಮಹಿಳೆಯರು ಹಣದ ಕುರಿತಂತೆ ಎಷ್ಟು ದುರಾಸೆಯನ್ನು ಹೊಂದಿರುತ್ತಾರೆ ಎಂದರೆ ಹಣಕ್ಕಾಗಿ ಯಾವ ಕೆಲಸವನ್ನು ಕೂಡ ಮಾಡಲು ಸಿದ್ಧರಾಗಿರುತ್ತಾರೆ. ಈ ಸಂದರ್ಭದಲ್ಲಿ ಅವರು ಕೆಲವೊಂದು ಕಷ್ಟಗಳಿಗೆ ಕೂಡ ಸಿಲುಕಿಕೊಳ್ಳುವುದು ಅವರಿಗೆ ಮುಂದೆ ತೊಂದರೆಯನ್ನು ಮಾಡಬಹುದು. ಹಣದ ಮೇಲೆ ದುರಾಸೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಒಳ್ಳೆಯದಲ್ಲ. ಹಣ ಮಹಿಳೆಯರಿಂದ ಅತೀವ ಕೆಟ್ಟ ಕೆಲಸಗಳನ್ನು ಕೂಡ ಮಾಡಿಸಿಕೊಳ್ಳಬಹುದಾಗಿದೆ.
ಪೂಜಾ ಕಾರ್ಯಗಳಲ್ಲಿ ಭಾಗಿಯಾಗದೆ ಇರುವುದು; ಪ್ರಾಚೀನಕಾಲದಿಂದಲೂ ಕೂಡ ಮಹಿಳೆಯರು ಪೂಜಾ ಕಾರ್ಯಗಳಲ್ಲಿ ಅದರಲ್ಲೂ ಕೂಡ ಹಿಂದೂ ಮಹಿಳೆಯರು ಪೂಜಾ ಕಾರ್ಯಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಂಡು ಬಂದಿರುತ್ತಾರೆ. ಆದರೆ ಇತ್ತೀಚಿನ ಆಧುನಿಕ ದಿನಗಳಲ್ಲಿ ಮಹಿಳೆಯರು ಇಂತಹ ಆಚಾರ ವಿಚಾರಗಳ ಕುರಿತಂತೆ ನಂಬಿಕೆಯನ್ನು ಕೂಡ ಇಟ್ಟುಕೊಂಡಿರುವುದಿಲ್ಲ. ಇದರಿಂದಾಗಿ ಮನೆಯ ಪರಿಸ್ಥಿತಿಯಲ್ಲಿ ನಕಾರಾತ್ಮಕತೆಯನ್ನು ವುದು ಹೆಚ್ಚಾಗುತ್ತದೆ. ಮನೆಯ ನೆಮ್ಮದಿಗಳು ಕೂಡ ಮಹಿಳೆಯರ ಈ ಕಾರ್ಯದಿಂದಾಗಿ ಹಾಳಾಗುತ್ತವೆ ಎನ್ನುವುದು ಸಾಬಿತಾಗಿರುವಂತಹ ವಿಚಾರ.
ಮಾತುಮಾತಿಗೂ ಸೊಕ್ಕನ್ನು ತೋರಿಸುವುದು; ಮಹಿಳೆಯರು ಮಾತನಾಡುವಾಗ ಸೌಜನ್ಯವನ್ನು ಹೊಂದಿರಬೇಕು. ಮಾತುಮಾತಿಗೂ ಸೊಕ್ಕನ್ನು ಮಹಿಳೆಯರು ತೋರಿಸಿದರೆ ಎದುರು ಮಾತನಾಡುತ್ತಿರುವ ಅವರಿಗೆ ಇದರಿಂದ ಕೋಪ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಅವರ ಕೋಪ ಖಂಡಿತವಾಗಿ ನಿಮ್ಮನ್ನು ಕಷ್ಟಕ್ಕೆ ಸಿಲುಕಿ ಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಯಾವುದೇ ಯೋಚನೆ ಮಾಡದೆ ಕಾರ್ಯಪ್ರವೃತ್ತರಾಗುವುದು; ಈ ವಿಚಾರದಲ್ಲಿ ಮಹಿಳೆಯರು ಸ್ವಾರ್ಥಿ ಆಗಿರುತ್ತಾರೆ ಅದಕ್ಕಾಗಿಯೇ ಕೇವಲ ತಾವು ಮಾಡುವ ಕೆಲಸದಲ್ಲಿ ಲಾಭವನ್ನು ಹುಡುಕುತ್ತಾರೆ. ಆ ಕೆಲಸದಿಂದ ಬೇರೆಯವರಿಗೆ ತೊಂದರೆ ಆಗುತ್ತದೆ ಎನ್ನುವ ಪರಿಜ್ಞಾನ ಕೂಡ ಅವರಲ್ಲಿ ಇರುವುದಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಇದರ ಪ್ರತಿಫಲವನ್ನು ಖಂಡಿತವಾಗಿ ಅವರು ಪಡೆದೇ ಪಡೆಯುತ್ತಾರೆ.
ಪ್ರತಿಬಾರಿ ಮಾತಿನಲ್ಲಿ ಸುಳ್ಳು ಹೇಳುವುದು; ಪ್ರತಿ ಮಾತಿನಲ್ಲಿ ಸುಳ್ಳು ಹೇಳುವ ಮಹಿಳೆಯರಿಂದ ಅವರ ಮನೆತನ ಹಾಳಾಗುತ್ತದೆ ಎಂಬುದಾಗಿ ಕೂಡ ಹೇಳುತ್ತಾರೆ. ಅಲ್ಲಿನ ಮಾತನ್ನು ಇಲ್ಲಿಗೆ ತಂದು ಹೇಳುವುದು ಇಲ್ಲಿನ ಮಾತನ್ನು ಅಲ್ಲಿಗೆ ತಂದು ಹೇಳುವ ಮಹಿಳೆಯರು ಕೂಡ ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುತ್ತಾರೆ. ಅವರನ್ನು ಎಲ್ಲರೂ ಕೂಡ ನೀಚ ದೃಷ್ಟಿಯಲ್ಲಿ ಕಾಣುತ್ತಾರೆ. ಇದರಿಂದಾಗಿ ಅವರ ಕಾರಣದಿಂದಾಗಿ ಅವರ ಮನೆಯವರು ಕೂಡ ಅದೇ ಪರಿಸ್ಥಿತಿಗೆ ಬರುತ್ತಾರೆ.
ಹಿರಿಯರಿಗೆ ಮರ್ಯಾದೆ ನೀಡದಿರುವುದು; ಹೆಣ್ಣುಮಗಳಾದವಳು ಹಿರಿಯವರಿಗೆ ಗೌರವವನ್ನು ನೀಡುವುದನ್ನು ಕಲಿಯಬೇಕು. ಹಿರಿಯರಿಗೆ ಗೌರವ ನೀಡದೆ ಇರುವುದು ಹಾಗೂ ಮಾತುಮಾತಿಗೂ ದೊಡ್ಡವರೊಂದಿಗೆ ಜಗಳ ಮಾಡಿಕೊಳ್ಳುವುದು ನಿಜವಾಗಲೂ ಕೂಡ ಮಹಿಳೆಯರು ಮಾಡುವಂತಹ ತಪ್ಪು ಕೆಲಸ. ಮನೆಯ ಶಾಂತಿ ನೆಲೆಸುವುದಕ್ಕೆ ಇಂತಹ ಮಹಿಳೆಯರು ಬಿಡುವುದಿಲ್ಲ ಹಾಗೂ ಮದುವೆಯಾಗಿ ಹೋದ ಮನೆಗೂ ಕೂಡ ಇವರು ಶೋಭೆ ತರುವುದಿಲ್ಲ. ಹೀಗಾಗಿ ಮಹಿಳೆಯರು ಇಂತಹ ಕೆಟ್ಟ ಅಭ್ಯಾಸಗಳನ್ನು ತೊರೆದು ಜೀವನದಲ್ಲಿ ಆರೋಗ್ಯಕರ ವಾತಾವರಣದಲ್ಲಿ ಇದ್ದರೆ ಖಂಡಿತವಾಗಿ ಉತ್ತಮ ಮಹಿಳೆಯಾಗಿ ಸಮಾಜದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವಿಚಾರಗಳ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.
Comments are closed.