ಸಿಂಪಲ್ ನಟನೆಯ ಮೂಲಕವೇ ಎಲ್ಲರ ಮನಗೆದ್ದಿರುವ ಕನ್ನಡತಿ ಬಿಂದು ಪಾತ್ರದಲ್ಲಿ ನಟಿಸುತ್ತಿರುವ ನಿಜಕ್ಕೂ ಯಾರು ಗೊತ್ತೇ?? ಹಿನ್ನೆಲೆಯೇನು ಗೊತ್ತೇ??
ಕನ್ನಡತಿ, ಎಲ್ಲಾ ಕನ್ನಡ ಕಿರುತೆರೆ ವೀಕ್ಷಕರು ಬಹಳ ಪ್ರೀತಿಯಿಂದ ನೋಡುತ್ತಿರುವ ಧಾರವಾಹಿ. ಈಗ ಕನ್ನಡತಿಯಲ್ಲಿ ವೀಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದಂತಹ ಘಳಿಗೆ ಬಂದಿದೆ. ಹರ್ಷ ಭುವಿ ಮದುವೆಯ ತಯಾರಿ ಭರದಿಂದ ಸಾಗುತ್ತಿದೆ. ಮದುವೆ ಏನೋ ಕನ್ನಡದ ಮದುವೆ ಸ್ಪೆಶಲ್ ಆಗಿರುತ್ತದೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ, ಆದರೆ ಸಾನಿಯಾ ಮತ್ತು ವರು ಏನು ತೊಂದರೆ ಮಾಡುತ್ತಾರೆ ಎನ್ನುವ ಆತಂಕ ಸಹ ವೀಕ್ಷಕರಲ್ಲಿದೆ. ಕನ್ನಡತಿ ಧಾರಾವಾಹಿಯ ಪಾತ್ರಗಳ ವಿಚಾರಕ್ಕೆ ಬಂದರೆ, ಈ ಧಾರಾವಾಹಿಯ ಎಲ್ಲಾ ಪಾತ್ರಗಳ ಸಹ ಜನರಿಗೆ ಅಚ್ಚುಮೆಚ್ಚು. ಅಮ್ಮಮ್ಮ, ವರುಧಿನಿ, ಹರ್ಷನ ತಂಗಿ, ಭುವಿ ತಂಗಿ ಎಲ್ಲಾ ಪಾತ್ರಗಳನ್ನು ಸಹ ವೀಕ್ಷಕರು ಮೆಚ್ಚಿಕೊಂಡಿದ್ದಾರೆ..
ಅದರಲ್ಲೂ ಭುವಿ ತಂಗಿ ಬಿಂದು ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದೆ ಎಂದರೆ ತಪ್ಪಾಗುವುದಿಲ್ಲ. ಯಾಕಂದ್ರೆ ಆ ಪಾತ್ರವೇ ಅಷ್ಟು ಸುಂದರವಾಗಿದೆ. ಸದಾ ಲವಲವಿಕೆಯಿಂದ ಕೂಡಿರುವ ಪಾತ್ರ ಬಿಂದು. ಅಕ್ಕ ತನ್ನ ಮಲತಾಯಿಯ ಮಗಳೇ ಆಗಿದ್ದರು, ಸ್ವಂತ ಅಕ್ಕನ ಜಾಗೆ ಪ್ರೀತಿಯಿಂದ ಇರುತ್ತಾಳೆ ಬಿಂದು. ಎಂಥವರಿಗೂ ಇಂಥ ಒಬ್ಬ ಸಪೋರ್ಟಿವ್ ತಂಗಿ ಇರಬೇಕ್ ಎಂದು ಅನ್ನಿಸುವುದರಲ್ಲಿ ಸಂಶಯ ಇಲ್ಲ. ಯಾವಾಗಲೂ ಅಕ್ಕನ ಜೊತೆ ತಮಾಷೆ ಮಾಡುತ್ತಾ, ಇತ್ತ ಅಕ್ಕನ ಪ್ರೀತಿ ಪಡೆಯಲು ಹರ್ಷನಿಗೂ ಸಪೋರ್ಟ್ ಮಾಡುತ್ತಾಳೆ ಬಿಂದು. ಈ ಬಿಂದು ಪಾತ್ರದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಬಿಂದು ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆಯ ನಿಜವಾದ ಹೆಸರು ಮೋಹಿರ ಆಚಾರ್ಯ. ಇವರು ಹುಟ್ಟಿ ಬೆಳೆದದ್ದು ಶಿವಮೊಗ್ಗದಲ್ಲಿ. ನಂತರ ಓದಿನ ಸಲುವಾಗಿ ಬೆಂಗಳೂರಿಗೆ ಬಂದ ಮೋಹಿರ, ಇಂಜಿನಿಯರಿಂಗ್ ಮುಗಿಸಿದ್ದಾರೆ..
ಡ್ಯಾನ್ಸ್ ನಲ್ಲಿ ಆಸಕ್ತಿ ಇರುವ ಮೋಹಿರ, ನೃತ್ಯದಲ್ಲಿ ಸಾಧನೆ ಮಾಡಬೇಕು ಎನ್ನುವುದು ಅವರ ಕನಸಾಗಿತ್ತು. ಆದರೆ ಮೋಹಿರ ಅವರಿಗೆ ನಟಿಸುವ ಅವಕಾಶ ಸಿಕ್ಕಿತು. ಇಂಜಿನಿಯರಿಂಗ್ ಫೈನಲ್ ಇಯರ್ ಓದುವಾಗ, ಸ್ಟಾರ್ ಸುವರ್ಣ ವಾಹಿನಿಯ ಪ್ರೇಮಲೋಕ ಧಾರವಾಹಿಯಲ್ಲಿ ನಟಿಸುವ ಅವಕಾಶ ಮೋಹಿರ ಅವರಿಗೆ ಸಿಕ್ಕಿತು. ಮೊದಲ ಸಾರಿ ನೆಗಟಿವ್ ಪಾತ್ರವಾದರು ಅಚ್ಚುಕಟ್ಟಾಗಿ ಅಭಿನಯಿಸಿದರು ಮೋಹಿರ. ನಂತರ ಕನ್ನಡತಿ ಧಾರಾವಾಹಿಯ ಬಿಂದು ಪಾತ್ರದ ಅವಕಾಶ ಇವರಿಗೆ ಸಿಕ್ಕಿತು. ಕನ್ನಡತಿಯಲ್ಲಿನ ಬಿಂದು ಪಾತ್ರ ಅವರ ಜೀವನ ಮೈಲಿಗಲ್ಲು ಆಗಿದೆ, ಹೊರಗಡೆ ಹೋದರೆ ಜನರು ಬಿಂದು ಎಂದೇ ಕರೆಯುತ್ತಾರೆ, ಅದೆಲ್ಲವನ್ನು ನೋಡುದರೆ ಬಹಳ ಹೆಮ್ಮೆ ಆಗುತ್ತದೆ ಎನ್ನುತ್ತಾರೆ ಮೋಹಿರ. ಕನ್ನಡತಿ ಧಾರವಾಹಿ ಇಂದ ಮನೆಮಾತಾಗಿರುವ ಮೋಹಿರ ಅವರಿಗೆ ಈಗ ತೆಲುಗು ಸಿನಿಮಾ ಒಂದರಲ್ಲಿ ನಟಿಸುವ ಅವಕಾಶ ಸಹ ಸಿಕ್ಕಿದ್ದು, ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸೋಣ.
Comments are closed.