ಒಮ್ಮೆ 8 ಬಾಟಲಿ ಮದ್ಯ ಸೇವಿಸಿ ತನ್ನ ಉಸಿರನ್ನು ನಿಲ್ಲಿಸಿಕೊಳ್ಳುವ ನಿರ್ಧಾರ ಮಾಡಿದ ಕಿರುತೆರೆ ನಟಿ. ಏನಾಗಿದೆ ಗೊತ್ತೇ??
ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟಿಯರು ಖ್ಯಾತ ಮಾಡೆಲ್ ಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಬಹಳ ಬೇಸರದ ವಿಚಾರದ ವಿಚಾರ. ಕಳೆದ 15 ದಿನಗಳಲ್ಲಿ 3 ನಟಿಯರು ಪ್ರಾಣ ಕಳೆದುಕೊಂಡರು. ಇದೀಗ ಮತ್ತೊಬ್ಬ ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆಕೆ ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿದ್ದರು ಎನ್ನಲಾಗಿದ್ದು, ಅವರ ಹೆಸರು ಮೈಥಿಲಿ ರೆಡ್ಡಿ. ಕೆಲವು ಧಾರವಾಹಿಗಳಲ್ಲಿ ನಟಿಸಿದ್ದರು ಎನ್ನಲಾಗಿದೆ. ಮದ್ಯದ ಜೊತೆಗೆ ನಿದ್ದೆ ಮಾತ್ರೆಗಳನ್ನು ಬೆರೆಸಿ, ಸೇವಿಸಿದ್ದಾರೆ ಮೈಥಿಲಿ. ಈಕೆ ಈ ರೀತಿ ಮಾಡಿಕೊಂಡಿರುವುದ ಹಿಂದೆ ಬೇರೆಯದೇ ಕಾರಣ ಇದೆ ಎನ್ನುತ್ತಿವೆ ಮೂಲಗಳು..
ಮೈಥಿಲಿ ಅವರ ಬಗ್ಗೆ ಮಾಹಿತಿ ಗೊತ್ತಾದ ತಕ್ಷಣವೇ ಪಂಜಗುಟ್ಟ ಪೊಲೀಸರು, ಆಕೆಯ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ, ಆಕೆಯ ಮನೆಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಮೈಥಿಲಿ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿತ್ತು, ಆಕೆ ಇದ್ದ ಜಾಗದ ಆಸುಪಾಸಿನಲ್ಲೇ 8 ಮದ್ಯದ ಬಾಟಲ್ ಗಳು ಜೊತೆಗೆ, ನಿದ್ದೆ ಮಾತ್ರೆಗಳು ಸಹ ಸಿಕ್ಕಿದ್ದು, ಆಕೆಯೇ ಈ ರೀತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೈಥಿಲೀ ರೆಡ್ಡಿ ಬಗ್ಗೆ ಮಾಹಿತಿಗಳನ್ನು ಕಲೆಹಾಕಿದಾಗ, ಈ ಮೊದಲು ಮೈಥಿಲಿ ತಮ್ಮ ಗಂಡನ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಪಜ್ಜಿಗುಂಟೆ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಿ, ಪತಿಯಿಂದ ತುಂಬಾ ಹಿಂಸೆ ಆಗುತ್ತಿದೆ, ಆತನಿಗೆ ಮದುವೆಗಿಂತ ಮೊದಲು ರಜಿತ ಎನ್ನುವ ಹುಡುಗಿಯ ಜೊತೆಗೆ ಅಕ್ರಮ ಸಂಬಂಧ ಇದ್ದು ಆ ಕಾರಣದಿಂದ ನನಗೆ ಹಿಂಸೆ ಕೊಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ ಮೈಥಿಲಿ.
ಇವರಿಬ್ಬರದ್ದು ಅರೇಂಜ್ಡ್ ಮ್ಯಾರೇಜ್, ಮೈಥಿಲಿ ಪತಿ ಶ್ರೀಧರ್ ರೆಡ್ಡಿ, ಟಿವಿ ಕಾರ್ಯಕ್ರಮದ ಡೈರೆಕ್ಟರ್ ಆಗಿದ್ದರು, ಇವರಿಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು, ಮದುವೆಗಿಂತ ಮೊದಲೇ ಆತನಿಗೆ ಮತ್ತೊಬ್ಬರ ಜೊತೆಗೆ ಸಂಬಂಧ ಇತ್ತು, ಆದರೆ ಅವಳು ನನ್ನ ಸ್ನೇಹಿತೆ ಎಂದು ಸುಳ್ಳು ಹೇಳುತ್ತಿದ್ದರಂತೆ ಶ್ರೀಧರ್ ರೆಡ್ಡಿ, ಮೈಥಿಲಿ ಮನೆಯಿಂದ ಚಿನ್ನಾಭರಣ ಸಹ ಕದ್ದಿದ್ದಾನೆ ಎಂದು ಮತ್ತೊಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ ಮೈಥಿಲಿ. ತನಗೆ ವರದಕ್ಷಿಣೆ ಬೇಕೆಂದು ಹಿಂಸೆ ನೀಡಿದ್ದಾರೆ, ಇದರಿಂದ ಸಾಕಷ್ಟು ಸಾರಿ ಜಗಳ ನಡೆದಿದೆ ಎಂದು ಸೂರ್ಯಪೇಟ್ ಪೊಲೀಸ್ ಠಾಣೆಯ ದೂರಿನಲ್ಲಿ ಹೇಳಿದ್ದಾರೆ ಮೈಥಿಲಿ. ಈಗ ಈ ರೀತಿ ಮಾಡಿಕೊಂಡಿದ್ದು, ಮೈಥಿಲಿ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ರೀತಿ ಮಾಡಿಕೊಳ್ಳುವುದಕ್ಕೆ ಕಾರಣ ಅವರ ಗಂಡ ನ ಅಥವಾ, ಬೇರೆ ಏನಾದರೂ ಕಾರಣ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..
Comments are closed.