Neer Dose Karnataka
Take a fresh look at your lifestyle.

ಸಾಕಷ್ಟು ಟಾಪ್ ನಟರು ಇರುವ ಕನ್ನಡದಲ್ಲಿ ರವಿ ಚಂದ್ರನ್ ರವರ ಫೇವರಿಟ್ ನಟ ಯಾರು ಗೊತ್ತೇ??

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗದಲ್ಲಿ 38 ವರ್ಷಗಳಿಂದ ಇದ್ದಾರೆ, ಚಿತ್ರರಂಗದಲ್ಲಿ ಏನಾದರೂ ಹೊಸತು ಮಾಡಬೇಕು ಎಂದು ಅಂದುಕೊಳ್ಳುವವರಿಗೆ ಸ್ಪೂರ್ತಿಯಾಗಿ ನಿಲ್ಲುವವರು ಕ್ರೇಜಿಸ್ಟಾರ್. ಇವರ ಜೀವನದ ಅದರಲ್ಲೂ ವೃತ್ತಿಜೀವನದ ಅನುಭವಗಳನ್ನು ಕೇಳುತ್ತಾ ಹೋದರೆ, ಎಂಥವರಿಗೆ ಆದರೂ, ಇಷ್ಟೆಲ್ಲಾ ಅನುಭವಿಸಿ ಇಂದು ಹೀಗಿದ್ದಾರಾ ಎಂದು ಅನ್ನಿಸುವುದು ಸಹಜ. ಚಿತ್ರರಂಗದ ಸ್ಟಾರ್, ಕನಸುಗಾರನಾಗಿದ್ದ ರವಿಚಂದ್ರನ್ ಅವರಿಗೆ ಈಗಿನ ಜೆನೆರೇಷನ್ ನಲ್ಲಿ ಅವರ ಫೇವರೆಟ್ ನಟ ಯಾರು ಗೊತ್ತಾ? ಸ್ವತಃ ರವಿಚಂದ್ರನ್ ಅವರು ಹೇಳಿದ್ದೇನು ಗೊತ್ತಾ?

ರವಿಚಂದ್ರನ್ ಅವರು ಇತ್ತೀಚೆಗೆ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನಕ್ಕೆ ಬಂದಿದ್ದರು. ಅದೇ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಸಹ ಬಂದಿದ್ದರು. ಇವರಿಬ್ಬರು ಸಹ ತಮ್ಮದೇ ಆದ ರೀತಿಯಲ್ಲಿ ಚಿತ್ರರಂಗದಲ್ಲಿ ಛಾಪು ಮೂಡಿಸಿದವರು. ರವಿಚಂದ್ರನ್ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ, ಹೊಸ ಮಾದರಿಯ ಸಿನಿಮಾ ಮಾಡಬೇಕು, ಜನರಿಗೆ ಇಷ್ಟಆಗುವಂಥ ಸಿನಿಮಾ ಮಾಡಬೇಕು ಎನ್ನುವ ಕನಸಿದೆ. ಹೊಸಬರ ಸಿನಿಮಾಗಳಿಗೆ, ಹೊಸತನದ ಕಥೆಗಳಿಗೆ ಈಗಲೂ ಸಹ ಪ್ರೋತ್ಸಾಹ ನೀಡುತ್ತಾರೆ ಕ್ರೇಜಿಸ್ಟಾರ್. ಇನ್ನು ರಕ್ಷಿತ್ ಶೆಟ್ಟಿ ಅವರು ಸಹ ಅದೇ ರೀತಿಯ ಮನಸ್ಥಿತಿ ಇರುವವರು, ಅವರು ನಟಿಸುವ ನಿರ್ದೇಶನ ಮಾಡುವ ಸಿನಿಮಾಗಳನ್ನು ನೋಡಿದರೆ, ಅವರ ಅಭಿರುಚಿ ಎಂಥದ್ದು ಎಂದು ಗೊತ್ತಾಗುತ್ತದೆ. ಈ ಶೋ ನಲ್ಲಿ ಮಾತನಾಡುವಾಗ, ರಕ್ಷಿತ್ ಶೆಟ್ಟಿ ಅವರು ಈಗಿನ ಜೆನೆರೇಷನ್ ನಲ್ಲಿ ನಿಮ್ಮ ಫೇವರೆಟ್ ಹೀರೋ ಯಾರು ಸರ್ ಎಂದು ಕೇಳಿದ್ದಕ್ಕೆ ಒಂದು ಕ್ಷಣವೂ ಯೋಚಿಸದೆ ಯಶ್ ಎಂದು ಹೇಳಿದ್ದಾರೆ ನಟ ರವಿಚಂದ್ರನ್. ಅದಕ್ಕೆ ಸೂಕ್ತ ಕಾರಣವನ್ನು ನೀಡಿರುವ ಅವರು..

“ಯಶ್ ಅವರಿಗೆ ಸಿನಿಮಾ ಬಗ್ಗೆ ಇರುವ ಒಲವು, ತನ್ಮಯತೆ ಬೇರೆ ನಟರಲ್ಲಿ ನಾನು ನೋಡಿಲ್ಲ. ಯಶ್ ಇಷ್ಟ ಆಗುವುದಕ್ಕೆ ಎಲ್ಲಕ್ಕಿಂತ ಮೊದಲ ಕಾರಣ ಇದು. ನಾಲ್ಕು ಸಿನಿಮಾ ಮಾಡಿದರೆ, ಒಂದಷ್ಟು ಕೋಟಿ ಹಣ ಸಿಗುತ್ತದೆ ಎನ್ನುವ ಈ ಕಾಲದಲ್ಲಿ ಒಂದೇ ಸಿನಿಮಾಗಾಗಿ ನಿಲ್ಲುವುದು ಸುಲಭ ಅಲ್ಲ., ಆ ಡೆಡಿಕೇಶನ್ ಅಸಮಾನ್ಯವಾದದ್ದು. ಯಶ್ ಮಾಡಿರುವ ಕೆಜಿಎಫ್ ಸಿನಿಮಾ ಕಥೆಯನ್ನ ಹಣದ ಬಗ್ಗೆ ಯೋಚಿಸುವ ಬೇರೆ ನಿರ್ಮಾಪಕರಿಗೆ ಹೇಳಿದ್ದರೆ, ಅವರು ಖಂಡಿತ ಒಪ್ಪುತ್ತಿರಲಿಲ್ಲ. ಕೆಜಿಎಫ್ ಸಾಮಾನ್ಯವಾಗಿ ಎಲ್ಲರೂ ಮಾಡುವ ಕಥೆಗಿಂತ ಭಿನ್ನವಾದ ಸಿನಿಮಾ. ಸಿನಿಪ್ರಿಯರಿಗೆ ಹೊಸದಾಗಿ ಅದ್ಭುತವಾದದ್ದು ಏನನ್ನಾದರೂ ಕೊಡಬೇಕು ಎನ್ನುವ ಛಲ ಅವರಲ್ಲಿ ನೋಡಿದ್ದೇನೆ..” ಎಂದು ಹೇಳಿದ್ದಾರೆ ರವಿಚಂದ್ರನ್. ಹಾಗೆಯೇ ರವಿಚಂದ್ರನ್ ಅವರು ರಕ್ಷಿತ್ ಶೆಟ್ಟಿ ಅವರ ಬಗ್ಗೆ ಸಹ ಒಳ್ಳೆಯ ಮಾತುಗಳನ್ನಾಡಿ, ನಾನು ಆಗ ಕಂಡ ಕನಸುಗಳು ಈಗ ನಿಜವಾಗುತ್ತಿದೆ. ಇವರೆಲ್ಲರೂ ಒಳ್ಳೆಯ ಸಿನಿಮಾಗಳನ್ನು ಮಾಡಿ ಬೆಳೆದರೆ, ಚಿತ್ರರಂಗ ಸಹ ಬೆಳೆಯುತ್ತದೆ ಎನ್ನುತ್ತಾರೆ ಕ್ರೇಜಿಸ್ಟಾರ್.

Comments are closed.