ಧೋನಿ ರವರ ಕಾರಣದಿಂದ ನಿವೃತ್ತಿ ತೆಗೆದುಕೊಳ್ಳಲು ಯೋಚನೆ ಮಾಡಿದ್ದರಂತೆ ಸೆಹ್ವಾಗ್, ಧೋನಿ ಅಂದು ಹೇಗೆಲ್ಲ ನಡೆಸಿಕೊಂಡಿದ್ದಾರೆ ಗೊತ್ತೇ?? ಕೂಲ್ ಕ್ಯಾಪ್ಟನ್ ನ ಮತ್ತೊಂದು ಮುಖ
ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ ಅವದು ತಮ್ಮ ಅದ್ಬುತವಾದ ಬ್ಯಾಟಿಂಗ್ ವೈಖರಿಯಿಂದ ಭಾರತ ಕ್ರಿಕೆಟ್ ತಂಡಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಸೆಹ್ವಾಗ್ ಅವರು, 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ತಂಡದ ನಾಯಕ ಆಗಿದ್ದ ಧೋನಿ ಅವರ ಕಾರಣದಿಂದ ಓಡಿಐ ಪಂದ್ಯಗಳಿಂದ ನಿವೃತ್ತಿ ಹೊಂದಲು ಬಯಸಿದ್ದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ..
2008ರಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಪಂದ್ಯದ ಸಮಯದಲ್ಲಿ ಎಂ.ಎಸ್.ಧೋನಿ ಅವರು ತಂಡದ ಕ್ಯಾಪ್ಟನ್ ಆಗಿದ್ದರು. ಆ ಸಮಯದಲ್ಲಿ ನಡೆದ, ಆಸ್ಟ್ರೇಲಿಯಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ಮೊದಲು ನಾಲ್ಕು ಪಂದ್ಯಗಳಲ್ಲಿ ಸೆಹ್ವಾಗ್ ಅವರು, 6, 33, 11 ಮತ್ತು 14 ರನ್ ಗಳಿಸಿ ಔಟ್ ಆಗಿದ್ದರು, ಈ ಕಾರಣದಿಂದ ಸೆಹ್ವಾಗ್ ಅವರನ್ನು ತಂಡದಿಂದ ಕಡೆಗಣಿಸಲಾಗಿತ್ತಂತೆ. ಸೆಹ್ವಾಗ್ ಅವರಿಗೆ ಆಡಲು ಅವಕಾಶ ನೀಡದೆ, ಬೆಂಚ್ ಕಾಯುವ ಹಾಗೆ ಮಾಡಿದ ಕಾರಣ ಓಡಿಐ ಇಂದ ನಿವೃತ್ತಿ ಹೊಂದಲು ಬಯಸಿದ್ದರಂತೆ ಸೆಹ್ವಾಗ್. “2008ರಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ನಿವೃತ್ತಿ ಹೊಂದಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದೆ. ಟೆಸ್ಟ್ ಕ್ರಿಕೆಟ್ ನಲ್ಲಿ 150 ರನ್ ಗಳಿಸಿ ಕಂಬ್ಯಾಕ್ ಮಾಡಿದ್ದೆ. ಆದರೆ ಓಡಿಐ ನಲ್ಲಿ ಸ್ಕೋರ್ ಮಾಡಲು ಆಗಿರಲಿಲ್ಲ. ಆಗ ತಂಡದ ನಾಯಕರಾಗಿದ್ದ ಎಂ.ಎಸ್.ಧೋನಿ ಅವರು ತನ್ನನ್ನು ಪ್ಲೇಯಿಂಗ್ 11 ಇಂದ ಹೊರಗಿಟ್ಟಿದ್ದರು..
ನನ್ನನ್ನು ತಂಡದಿಂದ ಹೊರಗಿಟ್ಟ ಬಳಿಕ, ಓಡಿಐ ಪಂದ್ಯಗಳಿಂದ ನಿವೃತ್ತಿ ಹೊಂದಬೇಕು ಎಂದು ಯೋಚನೆ ಮೂಡಿತ್ತು. ಆಗ ಸಚಿನ್ ಅವರು ನನ್ನ ಜೊತೆ ಮಾತನಾಡಿ, ಇದು ನಿಮ್ಮ ವೃತ್ತಿ ಜೀವನದ ಕೆಟ್ಟ ಸಮಯ, ಈಗ ಸುಮ್ಮನೆ ಇರಿ, ಪಂದ್ಯಗಳ ಬಳಿಕ ಮನೆಗೆ ಈ ನಿರ್ಧಾರದ ಬಗ್ಗೆ ದೀರ್ಘವಾಗಿ ಯೋಚನೆ ಮಾಡಿ ಎಂದರು. ಅದೃಷ್ಟವಶಾತ್ ಆಗ ನಾನು ಓಡಿಐ ಇಂದ ನಿವೃತ್ತಿ ತೆಗೆದುಕೊಳ್ಳಲಿಲ್ಲ. ನಮ್ಮಲ್ಲಿ ಎರಡು ರೀತಿಯ ಪ್ಲೇಯರ್ ಗಳಿದ್ದಾರೆ, ಒಂದು ವರ್ಗದವರು ಸವಾಲನ್ನು ಇಷ್ಟಪಡುತ್ತಾರೆ, ತಮಾಷೆಯಾಗಿರುತ್ತಾರೆ, ಯಾರು ಏನೇ ಟೀಕೆ ಮಾಡಿದರು, ಅದನ್ನು ಕೇಳಿಸಿಕೊಂಡು, ಅದ್ಭುತವಾಗಿ ರನ್ಸ್ ಗಳಿಸಿ ಉತ್ತರ ನೀಡುತ್ತಾರೆ, ವಿರಾಟ್ ಕೋಹ್ಲಿ ಅವರು ಈ ರೀತಿ.. ಎರಡನೇ ವರ್ಗದವರು, ಯಾರು ಏನೇ ಟೀಕೆ ಮಾಡಿದರು ತಲೆಗೆ ಹಾಕಿಕೊಳ್ಳುವುದಿಲ್ಲ. ತಮಗೆ ಅಗತ್ಯ ಇರುವುದೇನು ಎಂದು ತಿಳಿದುಕೊಳ್ಳುತ್ತಾರೆ, ಅಂಥವರಲ್ಲಿ ನಾನು ಒಬ್ಬ..” ಎನ್ನುತ್ತಾರೆ ಸೆಹ್ವಾಗ್.
Comments are closed.