ಅಜಯ್ ದೇವ್ಗನ್ ಹಾಗೂ ಸುದೀಪ್ ಮಾಡಿಕೊಂಡ ಭಾಷ ವಿವಾದಕ್ಕೆ ಮೋದಿ ಎಂಟ್ರಿ: ಮೋದಿ ಉತ್ತರ ಕಂಡು ಸುದೀಪ್ ಹೇಳಿದ್ದೇನು ಗೊತ್ತೇ??
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ಅವರ ನಡುವೆ, ಕೆಲವು ದಿನಗಳ ಹಿಂದೆ ಟ್ವಿಟರ್ ನಲ್ಲಿ ಇವರಿಬ್ಬರ ನಡುಗೆ ಸಣ್ಣದೊಂದು ಮಾತುಕತೆ ನಡೆದಿತ್ತು. ಈ ಮಾತುಕತೆ ನಡೆದದ್ದು ರಾಷ್ಟ್ರಭಾಷೆಯ ವಿಚಾರದಿಂದ, ಸಂದರ್ಶನ ಒಂದರಲ್ಲಿ ಸುದೀಪ್ ಅವರು ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದರು. ಅದರ ಬಗ್ಗೆ ಟ್ವೀಟ್ ಮಾಡಿದ್ದ ಅಜಯ್ ದೇವಗನ್ ಅವರು, ಹಾಗಿದ್ದರೆ ನಿಮ್ಮ ಸಿನಿಮಾಗಳನ್ನು ಹಿಂದಿ ಭಾಷೆಗೆ ಯಾಕೆ ಡಬ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸುದೀಪ್ ಅವರು ಸಹ ಉತ್ತರ ನೀಡಿ, ತಾವು ಯಾವ ಅರ್ಥದಲ್ಲಿ ಆ ಮಾತು ಹೇಳಿದ್ದು ಎಂದು ಟ್ವೀಟ್ ಮೂಲಕ ತಿಳಿಸಿ, ಒಂದು ವೇಳೆ ತಾವು ಕನ್ನಡದಲ್ಲಿ ಟ್ವೀಟ್ ಮಾಡಿದ್ದರೆ, ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಪ್ರಶ್ನೆ ಕೇಳಿದ್ದರು..
ಬಳಿಕ ಅಜಯ್ ದೇವಗನ್ ಅವರಿಗು ಸುದೀಪ್ ಅವರು ಹೇಳಿದ ರೀತಿ ಅರ್ಥವಾಗಿ, ಇಬ್ಬರು ಸುಮ್ಮನಾದರು. ಆದರೆ ಹಲವು ಜನರು ಈ ವಿಚಾರದ ಬಗ್ಗೆ ಹಲವು ಜನರು ಪ್ರತಿಕ್ರಿಯೆ ನೀಡಿದ್ದರು. ಇತ್ತೀಚಿನ ಸಂದರ್ಶನ ಒಂದರಲ್ಲಿ ಸ್ವತಃ ಸುದೀಪ್ ಅವರು ಈ ವಿಚಾರದ ಬಗ್ಗೆ ಕ್ಲಿಯರ್ ಆಗಿ ಮಾಯನಾಡಿದ್ದಾರೆ. “ನಾನು ಮತ್ತು ಅಜಯ್ ದೇವಗನ್ ಅವರು ಬಹಳ ವರ್ಷಗಳಿಂದ ಚಿತ್ರರಂಗದಲ್ಲಿದ್ದೇವೆ, ನನಗಿಂತ ಹೆಚ್ಚು ಅನುಭವ ಅವರಿಗಿದೆ, ಈ ವಿಚಾರದ ಬಗ್ಗೆ ನಮ್ಮಿಬ್ಬರಿಗೂ ಸ್ಪಷ್ಟನೆ ಇದೆ. ಕಪ್ಪು ಬಿಳುಪಿನ ಚರ್ಚೆಯ ನಡುವೆ, ಬೂದು ಬಣ್ಣದ ಚರ್ಚೆಗಳ ಜೊತೆಗೆ ಅದು ನಿಲ್ಲಲಿಲ್ಲ. ರಾಜಕೀಯದ ಹಿನ್ನಲೆಯಲ್ಲಿ ಎಲ್ಲರೂ ಮಆತನಾಡಿದರು. ಅಜಯ್ ಅವರು ನನ್ನನ್ನು ಪ್ರಶ್ನೆ ಕೇಳಿದರು, ನಾನು ಅವರಿಗೆ ಉತ್ತರ ನೀಡಿದೆ. ಅಲ್ಲಿ ಹಿಂದಿ ಉಲ್ಲೇಖ ಬಂದಾಗ, ನಾನು ಕನ್ನಡದಲ್ಲಿ ಉತ್ತರ ಕೊಟ್ಟಿದ್ದರೆ, ಏನಾಗುತ್ತಿತ್ತು ಎಂದು ಕೇಳಿದೆ.. ನಾನು ಅಹಂಕಾರದಿಂದ ಉತ್ತರ ಕೊಡಲಿಲ್ಲ..
ಕೆಣಕಿ ಅಹಂಕಾರದಿಂದ ಉತ್ತರ ಕೊಡಬೇಕು ಎನ್ನುವ ಹಾಗಿದ್ದರೆ, ನಾನು ಮೂರನೇ ಟ್ವೀಟ್ ವರೆಗೂ ಕಾಯಬೇಕಿರಲಿಲ್ಲ. ಮೊದಲ ಟ್ವೀಟ್ ನಲ್ಲೇ ಆ ರೀತಿ ಉತ್ತರ ಕೊಟ್ಟಿರುತ್ತಿದ್ದೇ. ಕನ್ನಡದಲ್ಲಿ ಉತ್ತರಿಸಿದ್ದರೆ ಏನಾಗುತ್ತಿತ್ತು ಎನ್ನುವುದು ಒಂದು ಪ್ರಾಮಾಣಿಕ ಪ್ರಶ್ನೆ ಆಗಿತ್ತು. ಅದನ್ನು ಅಜಯ್ ಅವರು ಸಹ ಗೌರವಿಸುತ್ತಾರೆ ಎಂದು ಭಾವಿಸಿದ್ದೇನೆ..” ಎಂದಿದ್ದಾರೆ ಕಿಚ್ಚ ಸುದೀಪ್. ಇನ್ನು ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿ ಅವರು ಸಹ ಈ ವಿವಾದದ ಬಗ್ಗೆ ಮಾತನಾಡಿ, “ಎಲ್ಲಾ ಭಾಷೆಗಳನ್ನು ನಮ್ಮ ದೇಶದ ಸಂಸ್ಕೃತಿ ಪೂಜನೀಯ ಮನೋಭಾವದಿಂದ ನೋಡುತ್ತದೆ..” ಎಂದು ಹೇಳಿದ್ದರು. ಇದಕ್ಕೂ ಸಹ ಸುದೀಪ್ ಅವರು ಉತ್ತರ ನೀಡಿದ್ದು, ನಾನು ಕನ್ನಡಿಗರ ಬಗ್ಗೆ ಮಾತ್ರ ಮಾತನಾಡಲಿಲ್ಲ, ಎಲ್ಲರ ಪರವಾಗಿ ಮಾತನಾಡಿದೆ, ನಾನು ಶುರು ಮಾಡಿದ ವಿಷಯ, ದೇಶದ ಅತ್ಯುನ್ನತ ನಾಯಕರಿಂದ ಮುಕ್ತಾಯವಾಗಿದೆ ಎನ್ನುವುದು ಸಂತೋಷ ತಂದಿದೆ..” ಎನ್ನುತ್ತಾರೆ ಸುದೀಪ್.
Comments are closed.