ಇದ್ದಕ್ಕಿದ್ದ ಹಾಗೆ ಎಲ್ಲವೂ ಚೆನ್ನಾಗಿದ್ದಾಗ ಸ್ನೇಹಿತರು ಹೊರಗೆ ಹೋಗಿದ್ದಾಗ ಈ ಟೆಕ್ಕಿ ತೆಗೆದುಕೊಂಡಿರುವ ನಿರ್ಧಾರ ನೋಡಿ ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ?
ಇತ್ತೀಚಿನ ದಿನಗಳಲ್ಲಿ ಯುವಕರು ಯುವತಿಯರು ಪ್ರಾಣ ಕಳೆದುಕೊಳ್ಳುವ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಕ್ಷಣಿಕಕ್ಕೆ ಬರುವ ದುಃಖಗಳಿಂದ, ಬೇಸರಗಳಿಂದ ಇಂತಹ ನಿರ್ಧಾರ ಗಳನ್ನು ತೆಗೆದುಕೊಂಡು, ಹೆತ್ತವರಿಗೆ ಬೇಸರ ಆಗುವ ಹಾಗೆ ಮಾಡುತ್ತಾರೆ. ಆತುರದಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ ಪ್ರಾಣಕ್ಕೆ ಆಪತ್ತು ತಂದಕೊಳ್ಳುತ್ತಾರೆ. ಇದರಿಂದ ಅವರ ಪ್ರಾಣ ಹೋಗಿ, ಇರುವ ವರೆಗೂ ಬೇಸರ ಮಾಡಿಕೊಂಡು ಕೊರಗುವವರು ಅವರ ಕುಟುಂಬಕ್ಕೆ ಸೇರಿದವರು. ಇಂಥದ್ದೇ ಒಂದು ಘಟನೆ ಈಗ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನಲ್ಲಿ ನೆಲಿಸಿದ್ದ ಕಾಶ್ಮೀರ್ ಮೂಲದ ಸಾಫ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಹುಡುಗಿ, ಪ್ರಾಣ ಕಳೆದುಕೊಂಡಿದ್ದಾಳೆ. ಈಕೆ ಕಾಶ್ಮೀರ್ ನಿಂದ ಬಂದಿದ್ದು, ಈಕೆಯ ಹೆಸರು ಕೃತಿ ಸಂಭಾಲ್, ಈಕೆಗೆ 27 ವರ್ಷ ವಯಸ್ಸಾಗಿತ್ತು. ಹೈದರಾಬಾದ್ ನ ಗಚ್ಚಿಬೌಲಿಯಲ್ಲಿ ಅಮೆಜಾನ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಹೈದರಾಬಾದ್ ನಲ್ಲಿ ಸ್ನೇಹಿತೆಯರ ಜೊತೆಗೆ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ ಮಾಡುತ್ತಿದ್ದಳು ಕೃತಿ. ಎಲ್ಲರೂ ಕೆಲಸಕ್ಕಾಗಿ ಹೊರಗಡೆ ಹೋಗಿದ್ದಾಗ ಈ ರೀತಿ ಮಾಡಿಕೊಂಡಿದ್ದಾಳೆ.
ಕೃತಿ ಈ ರೀತಿ ಮಾಡಿಕೊಳ್ಳಲು ಕಾರಣ ಏನು ಎಂದು ಯಾರಿಗು ತಿಳಿದು ಬಂದಿಲ್ಲ. ಅಪಾರ್ಟ್ಮೆಂಟ್ ನಲ್ಲಿ ಇಬ್ಬರು ಸ್ನೇಹಿತೆಯರ ಜೊತೆ ವಾಸ ಮಾಡುತ್ತಿದ್ದರು ಕೃತಿ. ಫ್ರೆಂಡ್ಸ್ ಗಳು ಕೆಲಸಕ್ಕಾಗಿ ಹೊರಗಡೆ ಹೋದಾಗ, ಮತ್ತೊಬ್ಬ ಫ್ರೆಂಡ್ ಸಚಿನ್ ಕುಮಾರ್ ಅವರಿಗೆ ಮೊಬೈಲ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮೆಸೇಜ್ ಮಾಡಿದ್ದಾರೆ. ಅದನ್ನು ಓದಿ ಗಾಬರಿಯಾದ ಸಚಿನ್, ಕೂಡಲೇ ಕೃತಿ ಇದ್ದ ಅಪಾರ್ಟ್ಮೆಂಟ್ ಗೆ ಬಂದಾಗ, ಬಾಗಿಲು ಲಾಕ್ ಆಗಿದ್ದನ್ನು ನೋಡಿ, ಕೃತಿಯ ರೂಮ್ ಮೇಟ್ಸ್ ಗೆ ಕರೆಮಾಡಿ, ಪೊಲೀಸರ ಜೊತೆ ಬಂದು ಬಾಗಿಲು ತೆರಿಸಿ ನೋಡಿದಾಗ ಕೃತಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಈ ರೀತಿ ಮಾಡಿಕೊಳ್ಳುವುದಕ್ಕೆ ಕಾರಣ ಏನು ಎಂದು ತನಿಖೆಯ ಬಳಿಕ ಗೊತ್ತಾಗಲಿದೆ.
Comments are closed.