ಐಪಿಎಲ್ ನಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ನೀಡದ ಶ್ರೇಯಸ್ ಅಯ್ಯರ್ ಕಡೆ ಇಂದ ಸಿಹಿ ಸುದ್ದಿ, ಖರೀದಿಸಿದ ಹೊಸ ಕಾರಿನ ಬೆಲೆ ಎಷ್ಟು ಗೊತ್ತೇ??
ಶ್ರೇಯಸ್ ಅಯ್ಯರ್, ಐಪಿಎಲ್ಅತ್ತು ಭಾರತ ಕ್ರಿಕೆಟ್ ತಂಡದಲ್ಲಿ ತಮ್ಮ ಅತ್ಯುತ್ತಮವಾದ ಬ್ಯಾಟಿಂಗ್ ಮೂಲಕ ಸ್ಥಾನ ಪಡೆದುಕೊಳ್ಳುವ ಆಟಗಾರ. ಪ್ರತಿಬಾರಿ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರನ್ನು ಇಂಪ್ರೆಸ್ ಮಾಡುತ್ತಾರೆ ಶ್ರೇಯಸ್ ಅಯ್ಯರ್. ಸುಲಭವಾಗಿ ಸಾಕಷ್ಟು ರನ್ ಗಳನ್ನು ಕಲೆಹಾಕುವ ಬ್ಯಾಟ್ಸ್ಮನ್ ಇವರು, ಈ ವರ್ಷದ ಐಪಿಎಲ್ ನಲ್ಲಿ ಇವರು ಹೇಳಿಕೊಳ್ಳುವಷ್ಟು ಚೆನ್ನಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ. ಹಾಗಿದ್ದರೂ, ಇದೀಗ ಶ್ರೇಯಸ್ ಅಯ್ಯರ್ ಅವರು ದುಬಾರಿ ಬೆಲೆಯ ಕಾರ್ ಖರೀದಿ ಮಾಡಿದ್ದಾರೆ.
ಶ್ರೇಯಸ್ ಅಯ್ಯರ್ ಮರ್ಸಿಡಿಸ್ ಬೆಂಜ್ ಐಷಾರಾಮಿ ಕಾರ್ ಖರೀದಿ ಮಾಡಿದ್ದು, ಹೊಸ ಕಾರ್ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿಯೂ ಶೇರ್ ಮಾಡಿಕೊಂಡಿಲ್ಲ, ಆದರೆ ಜರ್ಮನ್ ಕಾರ್ ತಯಾರಕರ ಜೊತೆಗೆ ಡೀಲರ್ಶಿಪ್ ಇರುವ ಕಂಪನಿಯೊಂದು ಶ್ರೇಯಸ್ ಅಯ್ಯರ್ ಈ ಐಷಾರಾಮಿ ಕಾರ್ ಖರೀದಿ ಮಾಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಅವರು, Mercedes AMG G634MATIC SUV ಕಾರ್ ಖರೀದಿ ಮಾಡಿದ್ದಾರೆ. ಈ ಕಾರ್ ನ ವಿಶೇಷತೆಗಳು ಮತ್ತು ಎಷ್ಟು ಕೋಟಿ ಎಂದು ಬೆಲೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಕಾರ್ ಖರೀದಿ ಮಾಡಿರುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರಿಗೆ ಅಭಿನಂದನೆಗಳು ಎಂದು ಬರೆದಿದ್ದಾರೆಂ ಈ ಐಷಾರಾಮಿ ಕಾರ್ ನ ಬೆಲೆ ₹2.45 ಕೋಟಿ ರೂಪಾಯಿ ಆಗಿದೆ. ಈ ಕಾರ್ ನ ಸ್ಪೀಡ್ ಅದ್ಭುತವಾಗಿದ್ದು, 4.5 ಕ್ಷಣಗಳಲ್ಲಿ 100kmph ಅಷ್ಟು ವೇಗ ಪಡೆದುಕೊಳ್ಳುತ್ತದೆ. ಶ್ರೇಯಸ್ ಅಯ್ಯರ್ ಅವರ ಫೇವರೆಟ್ ಕಾರ್ ಫೆರಾರಿ ಆಗಿದೆ, ಇವರ ಬಳಿ ಬಿಎಂಡಬಲ್ಯೂ, ಆಡಿS5 ಸೇರಿದಂತೆ ಇನ್ನಿತರ ಕಾರ್ ಗಳು ಸಹ ಇದೆ.. ಈ ವರ್ಷ ಐಪಿಎಲ್ ನಲ್ಲಿ 12 ಕೋಟಿ ಕೊಟ್ಟು ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ತಂಡದಲ್ಲಿ ಉಳಿಸಿಕೊಳ್ಳಲಾಯಿತು. ಆದರೆ ಈ ಬಾರಿ ತಂಡವನ್ನು ಪ್ಲೇ ಆಫ್ಸ್ ಗೆ ಕರೆದುಕೊಂಡು ಹೋಗಲು ಶ್ರೇಯಸ್ ಅವರಿಂದ ಸಾಧ್ಯವಾಗಲಿಲ್ಲ.
Comments are closed.