Neer Dose Karnataka
Take a fresh look at your lifestyle.

ನಿಮ್ಮ ಮನೆಯಲ್ಲಿ ಅಥವಾ ಅಂಗಡಿಯಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದುಬಿಡಿ. ಹಣಕಾಸಿನ ಸಮಸ್ಯೆಗೆ ಇವುಗಳೇ ಕಾರಣ. ಯಾವ್ಯಾವು ಗೊತ್ತೇ?

ನಿಮ್ಮ ಸುಂದರವಾದ ಮನೆಯ ಒಳಗೆ ನೀವು ಇಡುವ ವಸ್ತುಗಳು ನಿಮ್ಮ ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಒಂದು ವೇಳೆ ನೀವು ನಕಾರಾತ್ಮಕ ಶಕ್ತಿಯನ್ನು ತರುವಂತಹ ವಸ್ತುಗಳನ್ನು ಇಟ್ಟರೆ, ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ, ನಿಮ್ಮ ನೆಮ್ಮದಿ ಹಾಳಾಗುತ್ತದೆ, ಗೊಂದಲ ಶುರುವಾಗುತ್ತದೆ, ಜೊತೆಗೆ ಜೀವನದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತೀರಿ. ಹಾಗೂ ನಿಮ್ಮ ಮನೆಯವರು ಸಹ ಉದ್ಯೋಗದಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಈ ರೀತಿ ನಕಾರಾತ್ಮಕತೆ ತರುವ ವಸ್ತುಗಳನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳಬಾರದು, ಹಾಗೂ ಇವುಗಳನ್ನು ಮನೆಯ ಸ್ಟೋರ್ ರೂಮ್ ನಲ್ಲಿ ಸಹ ಇರಿಸಬಾರದು, ಬದಲಾಗಿ ಇಂತಹ ವಸ್ತುಗಳನ್ನು ಯಾರಿಗಾದರು ದಾನ ಮಾಡಿದರೆ ಒಳ್ಳೆಯದಾಗುತ್ತದೆ. ಅಂತಹ ನಕಾರಾತ್ಮಕತೆ ತರುವ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಬಳಸದೆ ಇರುವ ಮತ್ತು ಒಡೆದಿರುವ ಪಾತ್ರೆಗಳು :- ಈಗಿನ ದಿನಗಳಲ್ಲಿ ಮನೆಗಳಲ್ಲಿ ಎಲ್ಲವೂ ಆಧುನಿಕತೆಯ ಕಡೆಗೆ ತಿರುಗುತ್ತಿದೆ, ಮನೆಯಲ್ಲಿರುವ ಪಾತ್ರೆಗಳು ಅಂಗಡಿಗೆ ತಲುಪಿ, ಹೊಸ ವಸ್ತುಗಳನ್ನು ಮನೆಯೊಳಗೆ ತರುತ್ತಾರೆ. ಈ ರೀತಿ ಇದ್ದಾಗ, ಹಳೆಯ ಪಾತ್ರೆಗಳನ್ನು ನೀವು ಮನೆಯೊಳಗೆ ಇಟ್ಟುಕೊಳ್ಳಬಾರದು.. ಹಳೆಯದಾದ ಹಿತ್ತಾಳೆಯ ಪಾತ್ರೆಗಳು, ಗಾಜಿನ, ಪ್ಲಾಸ್ಟಿಕ್ ಪಾತ್ರೆಗಳು, ಬಳಸದೆ ಇರುವ ಪಾತ್ರೆಗಳಲ್ಲಿ ಶನಿ ದೇವರು ವಾಸ ಮಾಡುತ್ತಾರೆ ಎನ್ನಲಾಗಿದ್ದು, ಈ ರೀತಿ ಆದರೆ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಬರುತ್ತದೆ ಎಂದು ಹೇಳುತ್ತಾರೆ.

ತುಕ್ಕು ಹಿಡಿದಿರುವ ಹಳೆಯ ವಸ್ತುಗಳು :- ಮನೆಯಲ್ಲಿ ಹಳೆಯದಾದ ತುಕ್ಕು ಹಿಡಿದಿರುವ ವಸ್ತುಗಳು, ಹಳೆಯ ಪೆಟ್ಟಿಗೆಗಳು, ಹರಿತವಾದ ಉಪಕರಣಗಳು ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟಿರುತ್ತಾರೆ, ಸ್ಟೋರ್ ರೂಮ್ ನಲ್ಲಿ ಇದೆಲ್ಲವನ್ನು ಇಡಬಾರದು. ಇವುಗಳು ಸಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುತ್ತದೆ. ಹಾಗಾಗಿ ನೀವು ಜೀವನದಲ್ಲಿ ಏಳಿಗೆ ಹೊಂದಬೇಕಾದರೆ, ಇಂಥಹ ವಸ್ತುಗಳನ್ನು ಮನೆಯಲ್ಲಿ ಇಡಬಾರದು.

ನಿಂತಿರುವ ಗಡಿಯಾರ :- ನಿಂತು ಹೋದ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಏಳಿಗೆಯ ದಾರಿಗೆ ಅದು ತಡೆ ಹಾಕಿದಂತೆ. ಹಾಗಾಗಿ ಮನೆಯಲ್ಲಿ ಅಪ್ಪಿ ತಪ್ಪಿಯೂ ನಿಂತಿರುವ ಗಡಿಯಾರಗಳು, ತುಕ್ಕು ಹಿಡಿದ ಬೀಗಗಳನ್ನು ಇಡಬಾರದು. ಇಂತಹ ವಸ್ತುಗಳು ನಿಮ್ಮ ಸಕಾರಾತ್ಮಕ ಸಮಯವನ್ನು ಹಾಳು ಮಾಡುತ್ತದೆ.

Comments are closed.