ಬಿಗ್ ನ್ಯೂಸ್: ಮಹೇಶ್ ಬಾಬು ಜೊತೆ ನಟನೆ ಮಾಡಲು ಸಿದ್ದವಾದ ರವಿ ಚಂದ್ರನ್. ಯಾವ ಪಾತ್ರದಲ್ಲಿ ಗೊತ್ತೇ?? ಮತ್ತೊಂದು ಯಶಸ್ಸು ಸಿಗಲಿದೆಯೇ ಕನ್ನಡಿಗರಿಗೆ??
ಚಂದನವನದ ಕನಸುಗಾರ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರು ಅದ್ಧೂರಿಯಾಗಿ ಸಿನಿಮಾ ಮಾಡುವ ಶೈಲಿಯಿಂದ, ತಮ್ಮ ಕನಸನ್ನು ಬಹಳ ಸುಂದರವಾಗಿ ಪರದೆಯ ಮೇಲೆ ತೋರಿಸುವ ಕಲೆಯಿಂದ ,ರಾಷ್ಟ್ರಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಂದು ಪ್ರೇಮಲೋಕ ಸಿನಿಮಾ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ಈಗಲೂ ರವಿಚಂದ್ರನ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಅಷ್ಟೇ ಬೇಡಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ರವಿಚಂದ್ರನ್ ಅವರು ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ..
ಕನ್ನಡದಲ್ಲಿ ಸುದೀಪ್, ಗಣೇಶ್, ಶ್ರೇಯಸ್ ಇವರಿಗೆ ತಂದೆ ಪಾತ್ರದಲ್ಲಿ ನಟಿಸಿ ಪೋಷಕ ಪಾತ್ರಗಳಿಂದಲು ರವಿಚಂದ್ರನ್ ಅವರು ಯಶಸ್ಸು ಪಡೆದಿದ್ದಾರೆ. ಸಾಲು ಸಾಲು ಸಿನಿಮಾ ಆಫರ್ ಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ. ಇದೀಗ ರವಿಚಂದ್ರನ್ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾತು ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ. ರವಿಚಂದ್ರನ್ ಅವರು ಅಭಿನಯಿಸಿರುವ ಹಲವು ಸಿನಿಮಾಗಳು ತೆಲುಗಿಗೆ ಡಬ್ ಆಗಿವೆ, ತೆಲುಗಿನಲ್ಲಿ ಕೂಡ ರವಿಚಂದ್ರನ್ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರು ಸರ್ಕಾರು ವಾರಿ ಪಾಟ ಸಿನಿಮಾ ಸಕ್ಸಸ್ ನಂತರ ತ್ರಿವಿಕ್ರಂ ಶ್ರೀನಿವಾಸ್ ಅವರೊಡನೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ತಿಳಿದಿದೆ. ಈ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟ ಆಗುವ ಕಥೆ ಇರುವ ಸಿನಿಮಾ ಆಗಿರಲಿದ್ದು, ಫ್ಯಾಮಿಲಿ ಡ್ರಾಮಾ ಸಹ ಇರಲಿದೆಯಂತೆ.
ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ತಂದೆಯ ಪಾತ್ರದಲ್ಲಿ ರವಿಚಂದ್ರನ್ ಅವರು ನಟಿಸಬಹುದು ಎನ್ನುವ ವಿಚಾರ ಈಗ ಕೇಳಿಬರುತ್ತಿದೆ. ಈ ಮೊದಲು ಮಹೇಶ್ ಬಾಬು ಅವರ ತಂದೆಯ ಪಾತ್ರದಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಅವರು ನಟಿಸುತ್ತಾರೆ ಎನ್ನಲಾಗಿತ್ತು, ಆದರೆ ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದಿರುವ ನಟ ಇದ್ದರೆ, ಆ ಪಾತ್ರ ಜನರಿಗೆ ಹೆಚ್ಚು ಕನೆಕ್ಟ್ ಆಗುತ್ತದೆ ಎನ್ನುತ್ತಿದ್ದಾರೆ ನಿರ್ದೇಶಕರು. ಹಾಗಾಗಿ ರವಿಚಂದ್ರನ್ ಅವರನ್ನು ಈ ಪಾತ್ರದಲ್ಲಿ ನಟಿಸಲು, ಅಪ್ರೋಚ್ ಮಾಡಲಾಗಿದೆಯಂತೆ. ರವಿಚಂದ್ರನ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಡ್ರಾಮಾ ಜ್ಯೂನಿಯರ್ಸ್ ಶೋ ನಲ್ಲಿ ಸಹ ಬ್ಯುಸಿ ಆಗಿದ್ದಾರೆ. ಈ ನಡುವೆ ಕ್ರೇಜಿಸ್ಟಾರ್, ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಾ? ಮಹೇಶ್ ಬಾಬು ಅವರಿಗೆ ತಂದೆಯ ಪಾತ್ರದಲ್ಲಿ ನಟಿಸುತ್ತಾರಾ ಎಂದು ಕಾದು ನೋಡಬೇಕಿದೆ.
Comments are closed.