Neer Dose Karnataka
Take a fresh look at your lifestyle.

ರಶ್ಮಿಕಾ ಏನೋ ಬೆಳೆದು ದೊಡ್ಡ ನಟಿಯಾದರು, ಆದರೆ ರಶ್ಮಿಕಾ ರೀತಿ ಕೃತಿ ಶೆಟ್ಟಿ ದೊಡ್ಡ ನಟಿಯಾಗಲು ಸಾಧ್ಯವಿಲ್ಲವಂತೆ. ಯಾಕೆ ಗೊತ್ತೇ?? ವ್ಯತ್ಯಾಸವೇನು ಗೊತ್ತೇ??

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಇಂದು ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿ ಎನ್ನಿಸಿಕೊಂಡಿದ್ದಾರೆ. ಸಂಭಾವನೆ, ಜನಪ್ರಿಯತೆ ಎಲ್ಲಾ ವಿಷಯದಲ್ಲೂ ಸಹ ಟಾಪ್ ನಲ್ಲಿಯೇ ಇದ್ದಾರೆ ರಶ್ಮಿಕಾ. ಕಿರಿಕ್ ಪಾರ್ಟಿ ಇಂದ ಶುರುವಾದ ಈ ಜರ್ನಿ, ಟಾಲಿವುಡ್ ನಲ್ಲಿ ಅವಕಾಶಗಳ ಮಳೆಯನ್ನೇ ರಶ್ಮಿಕಾ ಅವರಿಗೆ ತಂದುಕೊಟ್ಟಿತು. ಬಳಿಕ ರಶ್ಮಿಕಾ ಅವರು ಟಾಲಿವುಡ್ ನಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಹೋದರು. ಈಗ ಕನ್ನಡದ ಮತ್ತೊಬ್ಬ ತೆಲುಗಿನಲ್ಲಿ ಮಿಂಚಲು ರೆಡಿಯಾಗಿದ್ದು, ಆದರೆ ಇವರಿಗೆ ರಶ್ಮಿಕಾ ಅವರ ಹಾಗೆ ಅವಕಾಶಗಳು ಸಿಗುತ್ತಿಲ್ಲ..

ಕರಾವಳಿ ಬೆಡಗಿ ಕೃತಿ ಶೆಟ್ಟಿ ಅವರು ಉಪ್ಪೇನ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಉಪ್ಪೇನ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಉಪ್ಪೇನ ಬಳಿಕ ಕೃತಿ ಶೆಟ್ಟಿ ಅವರು ಒಂದೆರಡು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದರು ಸಹ, ದೊಡ್ಡ ಮಟ್ಟದ ಹಿಟ್ ಗಳು ಹಾಗೂ ಸ್ಟಾರ್ ನಟರೊಡನೆ ನಟಿಸುವ ಅವಕಾಶ ಕೃತಿ ಶೆಟ್ಟಿ ಅವರಿಗೆ ಸಿಗುತ್ತಿಲ್ಲ. ಇವರ ಕೆರಿಯರ್ ಯಾಕೋ ಮಂದಗತಿಯಲ್ಲಿ ಸಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಪ್ರಸ್ತುತ ಕೃತಿ ಶೆಟ್ಟಿ ಅವರು ರಾಮ್ ಪೊತಿನೇನಿ ಅವರೊಡನೆ ದಿ ವಾರಿಯರ್ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಜುಲೈ ತಿಂಗಳಿನಲ್ಲಿ ಬಿಡುಗದೆ ಆಗುತ್ತಿದೆ. ಇನ್ನು ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.

ಆದರೆ ಸ್ಟಾರ್ ನಟರಿಗೆ ನಾಯಕಿಯಾಗಬೇಕು ಎನ್ನುವ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಸ್ಟಾರ್ ನಟರ ಸಿನಿಮಾಗಳು ಕೃತಿ ಶೆಟ್ಟಿ ಅವರನ್ನು ಹುಡುಕಿಕೊಂಡು ಬರುತ್ತಿಲ್ಲ. ಕೃತಿ ಶೆಟ್ಟಿ ಅವರಿಗೆ ಮೊದಲ ಸಕ್ಸಸ್ ತಂದುಕೊಟ್ಟ ಕಾರಣ, ಅವರ ಕೆರಿಯರ್ ಬಹಳ ಬೇಗ ಎತ್ತರಕ್ಕೆ ಹೋಗುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕೃತಿ ಶೆಟ್ಟಿ ಅವರ ಕೆರಿಯರ್ ನಿಧಾನವಾಗಿ ಸಾಗುತ್ತಿದೆ. ನಟ ಸೂರ್ಯ ಅವರ ಸಿನಿಮಾ ಬಿಟ್ಟರೆ, ಕೃತಿ ಶೆಟ್ಟಿ ಅವರ ಬಳಿ ಸ್ಟಾರ್ ನಟರ ಸಿನಿಮಾ ಇನ್ಯಾವುದು ಇಲ್ಲ. ದಿ ವಾರಿಯರ್ ಸಿನಿಮಾ ರಿಲೀಸ್ ಆದ ಬಳಿಕ, ಕೃತಿ ಶೆಟ್ಟಿ ಅವರ ಕೆರಿಯರ್ ಬದಲಾಗುತ್ತಾ ಎಂದು ಕಾದು ನೋಡಬೇಕಿದೆ..

Comments are closed.