ತಗ್ಗೊದೇ ಇಲ್ಲ ಎನ್ನುತ್ತಿರುವ ಪೂಜಾ: ಫ್ಲಾಪ್ ಮೇಲೆ ಫ್ಲಾಪ್ ಆಗುತ್ತಿದ್ದರೂ 45 ದಿನಗಳಿಗೆ ತೆಗೆದುಕೊಂಡ ಸಂಭಾವನೆ ಎಷ್ಟು ಕೋಟಿ ಗೊತ್ತೇ? ಯಪ್ಪಾ ಇಷ್ಟೊಂದಾ??
ನಟಿ ಪೂಜಾ ಹೆಗ್ಡೆ ಲಕ್ ಮಾಮೂಲಿಯಾಗಿಲ್ಲ. ಹಿಂದಿನ ಮೂರು ಸಿನಿಮಾಗಳು ಫ್ಲಾಪ್ ಆಗಿದ್ದರು ಸಹ, ಈ ನಟಿಗೆ ಬಿಗ್ ಸಿನಿಮಾ ಆಫರ್ ಗಳು ಬರುತ್ತಲೇ ಇದೆ. ಆಚಾರ್ಯ, ಬೀಸ್ಟ್, ರಾಧೆ ಶ್ಯಾಮ್ ಮೂರು ಸಿನಿಮಾಗಳು ಡಿಸಾಸ್ಟರ್ ಆಗಿ, ಈ ನಟಿಗೆ ಫ್ಲಾಪ್ ಸಿನಿಮಾ ಆದರೂ ಸಹ, ಈ ನಟಿಯ ಮೇಲಿರುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಹೀರೋಗಳು ತಮ್ಮ ಸಿನಿಮಾದಲ್ಲಿ ನಟಿಸಲು ಪೂಜಾ ಹೆಗ್ಡೆ ಅವರಿಗೆ ಅವಕಾಶ ನೀಡುತ್ತಿದ್ದಾರೆ. ರಾಧೆ ಶ್ಯಾಮ್ ಬಿಡುಗಡೆ ಆಗುವ ಮೊದಲು, ಪೂಜಾ ಹೆಗ್ಡೆ ಅವರನ್ನು ಲಕ್ಕಿ ಹೀರೋಯಿನ್ ಎಂದು ಕರೆಯಲಾಗಿತ್ತು, ಫ್ಲಾಪ್ ಹೀರೋಗಳಿಗೂ ಸಹ ಇವರೊಡನೆ ನಟಿಸಿದರೆ ಸಿನಿಮಾ ಹಿಟ್ ಎನ್ನಲಾಗಿತ್ತು.
ಹಾಗಾಗಿ ಎಲ್ಲಾ ಹೀರೋಗಳು ತಮ್ಮ ಸಿನಿಮಾಗೆ ಪೂಜಾ ಹೀರೋಯಿನ್ ಆಗಬೇಕು ಎಂದು ಆಫರ್ ನೀಡುತ್ತಿದ್ದರು. ಆದರೆ, ರಾಧ್ಯೆ ಶ್ಯಾಮ್, ಬೀಸ್ಟ್ ಮತ್ತು ಆಚಾರ್ಯ ಸಿನಿಮಾ ಫ್ಲಾಪ್ ಆದರು ಸಹ ಇವರಿಗೆ ಸಿಗುತ್ತಿರುವ ಅವಕಾಶಗಳು ಮತ್ತು ಪೂಜಾ ಹೆಗ್ಡೆ ಹವಾ ಮಾತ್ರ ಕಡಿಮೆ ಆಗಿಲ್ಲ. ಪ್ರಸ್ತುತ ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲಾ ಚಿತ್ರರಂಗದಲ್ಲೂ ಬ್ಯಸಿ ಇದ್ದಾರೆ ಪೂಜಾ ಹೆಗ್ಡೆ. ಎಲ್ಲಾ ಭಾಷೆಗಳಲ್ಲೂ ಸ್ಟಾರ್ ನಟರ ಜೊತೆಗೆ ಬಿಗ್ ಬಜೆಟ್ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ. ಇದೀಗ ಪೂಜಾ ಹೆಗ್ಡೆ ಅವರು ಪೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ, ವಿಜಯ್ ದೇವರಕೊಂಡ ಹೀರೋ ಆಗಿ ನಟಿಸುತ್ತಿರುವ ಜನ ಗಣ ಮನ ಸಿನಿಮಾಗು ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಮೊದಲ ಸಾರಿ ವಿಜಯ್ ದೇವರಕೊಂಡ ಅವರಿಗೆ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ ಪೂಜಾ ಹೆಗ್ಡೆ.
ಈ ಸಿನಿಮಾ ಹಾಗೂ ಪೂಜಾ ಹೆಗ್ಡೆ ಬಗ್ಗೆ ಇದೀಗ ಒಂದು ಸುದ್ದಿ ತಿಳಿಸುದು ಬಂದಿದ್ದು, ಈ ಸುದ್ದಿ ಕೇಳಿ ಟಾಲಿವುಡ್ ಮಂದಿ ಶೇಕ್ ಆಗಿದ್ದಾರೆ. ಇದು ಅಂತಹ ಸುದ್ದಿಯೇ ಆಗಿದೆ. ಪೂಜಾ ಹೆಗ್ಡೆ ಅವರು ಜನ ಗಣ ಮನ ಸಿನಿಮಾಗಾಗಿ 45 ದಿನಗಳ ಕಾಲ ಶೀಟ್ ನೀಡಿದ್ದಾರಂತೆ, 45 ದಿನಗಳ ಕಾಲ್ ಶೀಟ್ ಗೆ, 4.5 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಈ ಸಂಭಾವನೇ ವಿಚಾರ ಎಲ್ಲರಿಗೂ ಶಾಕ್ ನೀಡಿದೆ. ಆವರೇಜ್ ನಾಯಕರ ಸಂಭಾವನೆಯಷ್ಟು ಪೂಜಾ ಹೆಗ್ಡೆ ಸಂಭಾವನೆ ಇದೆ ಎಂದು ಕೆಲವರು ಅನ್ನುತ್ತಿದ್ದಾರೆ. ಇನ್ನು ಸಿನಿಮಾ ನಿರ್ಮಾಪಕರು ಪೂಜಾ ಹೆಗ್ಡೆ ಅವರಿಗೆ ಇಷ್ಟು ಕೋಟಿ ಹಣ ಕೊಡಬೇಕಾ ಎಂದು ಯೋಚನೆ ಮಾಡುವ ಹಾಗೆ ಆಗಿದೆ.
Comments are closed.