ಒಂದು ಕಾಲದಲ್ಲಿ ಕೆಎಲ್ ರಾಹುಲ್ ಗರ್ಲ್ಫ್ರೆಂಡ್ ಆಗಿದ್ದ ನಟಿಗೆ ಈಗ ಇಬ್ಬರು ನಂತರ ಜೊತೆ ಡೇಟ್ ಮಾಡುವ ಆಸೆಯಂತೆ. ಯಾರು ಗೊತ್ತೇ ಆ ನಟರು?
ನಿಧಿ ಅಗರ್ವಾಲ್ ಈಗ ತೆಲುಗಿನಲ್ಲಿ ಒಳ್ಳೆಯ ಕ್ರೇಜ್ ಹೊಂದಿರುವ ನಾಯಕಿಯಾಗಿದ್ದಾರೆ. ಬಾಲಿವುಡ್ ನ ಈ ನಟಿ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರನ್ನು ಆಕರ್ಷಿಸುತ್ತಿದ್ದಾರೆ. ತಮ್ಮ ಬ್ಯೂಟಿ ಮತ್ತು ಸೌಂದರ್ಯದಿಂದ ಚಿತ್ರೋದ್ಯಮ ತಮ್ಮತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ. ಇಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಆ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿತು. ಈ ಸಿನಿಮಾ ಯಶಸ್ಸಿನಿಂದ ಆಕೆಗೆ ತೆಲುಗಿನಲ್ಲಿ ಉತ್ತಮ ಆಫರ್ ಗಳು ಬರಬೇಕು ಎಂದು ನಿಧಿ ಅಗರ್ವಾಲ್ ಬಯಸಿದ್ದರು.
ಆದರೆ ಆ ಸಿನಿಮಾ ಬಿಡುಗಡೆಯಾದ ನಂತದ ನಿಧಿ ಅಗರ್ವಾಲ್ ಅವರಿಗೆ ಅಂತಹ ಹೇಳಿಕೊಳ್ಳುವಂಥಹ ಅವಕಾಶಗಳು ಬರಲಿಲ್ಲ. ಅಕ್ಕಿನೇನಿ ಅಖಿಲ್ ಹೀರೋ ಆಗಿ ನಟಿಸಿದ ಸಿನಿಮಾ ಸಹ ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಅದಾದ ನಂತರ ಮಹೇಶ್ ಬಾಬು ಅವರ ಅಳಿಯ, ಆಕಾಶ್ ಅವರೊಡನೆ ನಟಿಸಿದ ಹೀರೋ ಸಿನಿಮಾ ಪರವಾಗಿಲ್ಲ ಎನ್ನುವ ಮಟ್ಟಿಗೆ ಯಶಸ್ಸು ಕಂಡಿತು. ಆದರೆ ನಿಧಿ ಅಗರ್ವಾಲ್ ಅವರ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ, ಇನ್ನು ಪವನ್ ಕಲ್ಯಾಣ್ ಅವರು ನಟಿಸಲಿರುವ, ಕ್ರಿಶ್ ನಿರ್ದೇಶನ ಮಾಡಲಿರುವ ವೀರಮಲ್ಲು ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ ತಮಿಳಿನಲ್ಲಿ ಸಹ ಕೆಲವು ಸಿನಿಮಾಗಳನ್ನು ಸೈನ್ ಹಾಕಿದ್ದಾರೆ. ಇದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದಾರೆ.
ಜಾಹೀರಾತುಗಳು, ಬ್ರ್ಯಾಂಡ್ ಪ್ರಚಾರಗಳು, ಹಾಗೂ ಹಾಟ್ ಫೋಟೋಶೂಟ್ ಗಳ ಮೂಲಕ ಆಗಾಗ ಸದ್ದು ಮಾಡುತ್ತಾರೆ. ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ಇತ್ತೀಚೆಗೆ ಸುದ್ದಿಯಾಗಿದ್ದರು. ಇತ್ತೀಚೆಗೆ ಇವರು ಅಭಿಮಾನಿಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಚಿಟ್ ಚಾಟ್ ನಡೆಸಿದ್ದರು.
ಇದರಲ್ಲಿ ನಿಧಿ ಅವರಿಗೆ ಅಭಿಮಾನಿಗಳು ವಿಚಿತ್ರವಾದ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದರು.. ನೀವು ಡೇಟಿಂಗ್‌ಗೆ ಹೋಗಲು ಬಯಸಿದರೆ ನೀವು ಯಾವ ನಟನ ಜೊತೆಗೆ ಹೋಗುತ್ತೀರಿ ಹೋಗುತ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ನಿಧಿ ಅಗರ್ವಾಲ್ ನಾಗಾರ್ಜುನ ಅಕ್ಕಿನೇನಿ ಅವರ ಮಗ ಅಖಿಲ್ ಅಥವಾ ನಟ ರಾಮ್ ಪೋತಿನೇನಿ ಅವರ ಜೊತೆಗೆ ಡೇಟ್ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. ನಿಧಿ ಅಗರ್ವಾಲ್ ಅವರಿಗೆ ಈ ಇಬ್ಬರು ನಟರ ಮೇಲೆ ಕ್ರಶ್ ಇರುವ ಹಾಗೆ ತೋರುತ್ತದೆ. ಇದೀಗ ನಿಧಿ ಅಗರ್ವಾಲ್ ಅವರಿಗೆ ಇರುವ ಆಸೆ ಗೊತ್ತಾಗುತ್ತದೆ.
Comments are closed.