ರಜನಿಕಾಂತ್ ಸಿನೆಮಾಗೆ ಆಯ್ಕೆಯಾದ ಕನ್ನಡತಿ, ಇದಪ್ಪ ಅದೃಷ್ಟ ಅಂದರೆ ಎಂದ ನೆಟ್ಟಿಗರು. ಯಾರು ಗೊತ್ತೇ ರಜನಿ ಮುಂದಿನ ಸಿನೇಮಾದ ನಾಯಕಿ???
ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವವರು ನಟ ಸೂಪರ್ ಸ್ಟಾರ್ ರಜನಿಕಾಂತ್. ಇವರು ಒಂದು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ, ಆ ಸಿನಿಮಾ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇರುತ್ತದೆ. ರಜನಿಕಾಂತ್ ಅವರನ್ನು ತೆರೆಮೇಲೇ ನೋಡಲು ವಿಶ್ವಾದ್ಯಂತ ಅಭಿಮಾನಿಗಳು ಕಾಯುತ್ತಿರುತ್ತಾರೆ. ತಲೈವ ರಜನಿಕಾಂತ್ ಅವರ 169ನೇ ಸಿನಿಮಾ ಬಗ್ಗೆ ಆಗಾಗ ಹೊಸ ಅಪ್ಡೇಟ್ ಗಳು ಹೊರಬರುತ್ತವೆ, ಇದೀಗ ರಜನಿಕಾಂತ್ ಅವರ ಮುಂದಿನ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಒಂದು ಸಿಕ್ಕಿದ್ದು, ಕನ್ನಡತಿಯಾದ ಖ್ಯಾತ ನಟಿ ಐಶ್ವರ್ಯ ರೈ ಅವರು ಈ ಸಿನಿಮಾದ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿಬಂದಿದೆ.
ಸನ್ ಪಿಕ್ಚರ್ಸ್ ಬ್ಯಾನರ್ ನ ಅಡಿಯಲ್ಲಿ ನಟ ರಜನಿಕಾಂತ್ ಅವರು ಅಭಿನಯಿಸಲಿರುವ 169ನೇ ಸಿನಿಮಾ ಸೆಟ್ಟೇರಿದೆ. ಸೂಪರ್ ಸ್ಟಾರ್ ಅವರ ಹಿಂದಿನ ಸಿನಿಮಾ ಅಣ್ಣಾಥೆ ಸಿನಿಮಾವನ್ನು ಸಹ ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು, ಆದರೆ ಅಣ್ಣಾಥೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು, ಹಾಗಾಗಿ ಸನ್ ಪಿಕ್ಚರ್ಸ್ ಸಂಸ್ಥೆ ಇದೀಗ ಹೊಸ ಸಿನಿಮಾ ಮೂಲಕ ರಜನಿಕಾಂತ್ ಅವರಿಗೆ ದೊಡ್ಡ ಹಿಟ್ ನೀಡಬೇಕು ಎಂದು ನಿರ್ಧಾರ ಮಾಡಿದೆ. ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ನೆಲ್ಸನ್ ಅವರು ನಿರ್ದೇಶನ ಮಾಡಿದ ಬೀಸ್ಟ್ ಸಿನಿಮಾ ಕೂಡ ಸನ್ ಪಿಕ್ಚರ್ಸ್ ಬ್ಯಾನರ್ ನ ಕಳಾನಿತಿ ಮಾರನ್ ನಿರ್ಮಾಣ ಮಾಡಿದ್ದರು, ಆ ಸಿನಿಮಾ ಸಹ ಸೋಲು ಕಂಡಿತ್ತು, ಇದೀಗ ರಜನಿಕಾಂತ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ ನೆಲ್ಸನ್. ಈ ಸಿನಿಮಾಗೆ ನಾಯಕಿಯಾಗಿ ಐಶ್ವರ್ಯ ರೈ ನಟಿಸುತ್ತಾರೆ ಎನ್ನಲಾಗುತ್ತಿದೆ.
ಈಗಾಗಲೇ ರಜನಿಕಾಂತ್ ಅವರೊಡನೆ ಐಶ್ವರ್ಯ ರೈ ಅವರು ರೋಬೋ ಸಿನಿಮಾದಲ್ಲಿ ನಟಿಸಿದ್ದರು, ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ರೋಬೋ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಐಶ್ವರ್ಯ ರೈ ಅವರ ಕೆಮಿಸ್ಟ್ರಿ ಭರ್ಜರಿಯಾಗಿ ವಾರ್ಕೌಟ್ ಆಗಿತ್ತು, ಇದೀಗ ಈ ಜೋಡಿ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದ್ದು, ಇವರನ್ನು ನೋಡಲು ಅಭಿಮಾನಿಗಳು ಸಹ ಉತ್ಸುಕರಾಗಿದ್ದಾರೆ. ಐಶ್ವರ್ಯ ರೈ ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಬಗ್ಗೆ ಅಧಿಕೃತವಾದ ಮಾಹಿತಿ ಸಿಕ್ಕಿದೆ. ಇನ್ನು ಖ್ಯಾತ ನಟಿ ರಮ್ಯಾ ಕೃಷ್ಣನ್ ಅವರು ಸಹ ತಲೈವರ್ 169 ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.
Comments are closed.