ಬಿಡುಗಡೆಯಾದ ದಿನದಿಂದಲೂ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿರುವ ಸತ್ಯ ವಿರುದ್ಧ ಮೊದಲ ಬಾರಿ ಬಹಿರಂಗ ಅಸಮಾಧಾನ ಹೊರಹಾಕಿದ ಪ್ರೇಕ್ಷಕರು. ಯಾಕೆ ಗೊತ್ತೇ?
ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು, ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುವ ಸತ್ಯ ಧಾರಾವಾಹಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಆದರೆ ಈಗ ಸತ್ಯ ಧಾರವಾಹಿ ವೀಕ್ಷಕರಿಗೆ, ಅಭಿಮಾನಿಗಳಿಗೆ ಧಾರವಾಹಿ ಸಾಗುತ್ತಿರುವ ಶೈಲಿ ಇಷ್ಟವಾಗುತ್ತಿಲ್ಲ. ಸತ್ಯ ಮಾತೃ ಕಾರ್ತಿಕ್ ಗೆ ಈಗ ಮದುವೆಯಾಗಿದೆ, ಅದರ ಇಬ್ಬರಿಗೂ ಈ ಮದುವೆ ಇಷ್ಟವಿಲ್ಲ. ಸತ್ಯಳ ಅಕ್ಕ ದಿವ್ಯ ಜೊತೆಗೆ ಕಾರ್ತಿಕ್ ಮದುವೆ ಆಗಬೇಕಿತ್ತು, ಆದರೆ ದಿವ್ಯ ಬಾಯ್ ಫ್ರೆಂಡ್ ಬಾಲ ದುಡ್ಡಿನ ಕ್ಕ್ವೆ ತೋರಿಸಿ ಮದುವೆ ಮಂಟಪದಿಂದಲೇ, ದಿವ್ಯ ಎಸ್ಕೇಪ್ ಆಗಿಬಿಟ್ಟಳು. ಇದರಿಂದಾಗಿ ಮನೆಯವರು ನಿರ್ಧಾರ ಮಾಡಿ, ಕಾರ್ತಿಕ್ ಸತ್ಯ ಮದುವೆ ಮಾಡಿಸಿದ್ದಾರೆ..
ಆದರೆ ಕಾರ್ತಿಕ್ ಗೆ ಈ ಮದುವೆ ಇಷ್ಟವಿಲ್ಲದೆ, ಸತ್ಯಳನ್ನು ಹೆಂಡತಿಯಾಗಿ ಒಪ್ಪಿಕೊಳ್ಳುವ ಆತ ತಯಾರಿಲ್ಲ. ಇತ್ತ ಸತ್ಯ ಗಂಡನನ್ನು ಮತ್ತು ಗಂಡನ ಮನೆಯವರನ್ನು ಒಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಸತ್ಯ ಈ ರೀತಿ ಸಾಫ್ಟ್ ಆಗಿ ನಡೆದುಕೊಳ್ಳುತ್ತಿರುವುದು ಸಿನೀವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಅಭಿಮಾನಿಗಳಿಗೆ ಸತ್ಯಳನ್ನು ರಗಡ್ ಲುಕ್ ನಲ್ಲಿ, ಪಂಚಿಂಗ್ ಡೈಲಾಗ್ ಗಳನ್ನು ಹೇಳುವುದು ಇಷ್ಟ. ಆದರೆ ಸತ್ಯ ಈಗಿರುವ ರೀತಿ ವೀಕ್ಷಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಸತ್ಯಳನ್ನು ಈ ರೀತಿ ನೋಡಲು ಆಗುವುದಿಲ್ಲ, ಮಾಲಾಶ್ರೀ ಅವರ ಹಾಗೆ ಆಕ್ಷನ್ ನಲ್ಲಿ ನೋಡುವುದೇ ಚಂದ, ಸತ್ಯಳನ್ನು ಶ್ರುತಿ ಅವರ ಹಾಗೆ ಅಳುಮುಂಜಿ ಮಾಡಬೇಡಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದಲ್ಲದೆ ಧಾರವಾಹಿ ಮೇಲೆ ಒಂದು ಕಂಪ್ಲೇಂಟ್ ಸಹ ಮಾಡಿದ್ದಾರೆ.
ಕಾರ್ತಿಕ್ ಈಗ ಸತ್ಯಳನ್ನು ಕಂಡರೆ ಆಗುವುದಿಲ್ಲ ಎನ್ನುವ ಹಾಗೆ ಆಡುತ್ತಿದ್ದಾನೆ, ಅದಕ್ಕೆ ಕಾರಣ ದಿವ್ಯಳ ಜೊತೆಗೆ ಮದುವೆ ಕ್ಯಾನ್ಸಲ್ ಆಗಲು ಕಾರಣ ಸತ್ಯ ಎಂದು ಕಾರ್ತಿಕ್ ತಪ್ಪು ತಿಳಿದುಕೊಂಡಿದ್ದಾನೆ. ಆದರೂ ಕಾರ್ತಿಕ ಗೆ ಮೊದಲಿನಿಂದಲೂ ದಿವ್ಯ ಮೇಲೆ ಅಂತಹ ಭಾವನೆಗಳೇನು ಇರಲಿಲ್ಲ, ಮನೆಯವರು ನೋಡಿದ ಹುಡುಗಿಯನ್ನು ಮದುವೆಯಾಗಲು ತಯಾರಿದ್ದ ಕಾರ್ತಿಕ್. ಒಂದು ಘಟ್ಟದಲ್ಲೇ ಕಾರ್ತಿಕ್ ಗೆ ಸತ್ಯ ಕಡೆಗೆ ಪ್ರೀತಿ ಸಹ ಮೂಡಿತ್ತು, ಆದರೆ ಈಗ ಏಕಾಏಕಿ ಸತ್ಯಳನ್ನು ಕಂಡರೆ ಆಗುವುದಿಲ್ಲ ಎನ್ನುವ ಹಾಗೆ ವರ್ತಿಸುತ್ತಿರುವುದು ಸಹ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು ಈಗ ನಡೆಯುತ್ತಿರುವ ಸ್ಟೋರಿ ಲೈನ್ ಜನರಿಗೆ ಇಷ್ಟವಾಗುತ್ತಿಲ್ಲ, ಇದರಿಂದಾಗಿ ಜನರು ಕಥೆಯಲ್ಲಿ ಬದಲಾವಣೆ ತನ್ನಿ ಎನ್ನುತ್ತಿದ್ದಾರೆ. ಜೊತೆಗೆ ಸತ್ಯ ಒಂದು ವಾರದಿಂದ ಮದುವೆ ಸೀರೆಯಲ್ಲೇ ಇದ್ದು, ಮೊದಲು ಸತ್ಯಳ ಡ್ರೆಸ್ ಬದಲಾಯಿಸಿ ಎನ್ನುತ್ತಿದ್ದಾರೆ ಅಭಿಮಾನಿಗಳು. ವೀಕ್ಷಕರ ಅಭಿಪ್ರಾಯವನ್ನು ಧಾರವಾಹಿ ತಂಡ ಸ್ವೀಕರಿಸುತ್ತಾ ಎಂದು ಕಾದು ನೋಡಬೇಕಿದೆ.
Comments are closed.