ಹುಡುಗೀಯರು ಪ್ರೀತಿಸಿದ ಹುಡುಗರನ್ನು ಅದೊಂದು ಕಾರಣಕ್ಕೆ ಮದುವೆಯಾಗುವುದಿಲ್ಲ, ಆ ಕಾರಣ ಏನು ಗೊತ್ತೇ?? ಇದೊಂದೇ ಪ್ರಮುಖ ಕಾರಣ.
ಈಗಿನ ಕಾಲದಲ್ಲಿ ಲವ್ ಮಾಡುವುದು ಕಾಮನ್, ಒಂದು ರೀತಿ ಫ್ಯಾಶನ್ ಆಗಿಬಿಟ್ಟಿದೆ ಎಂದರು ತಪ್ಪಾಗುವುದಿಲ್ಲ. ಆಡುವ ಶಾಲಾ ಮಕ್ಕಳಿಂದ ಹಿಡಿದು, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ವರೆಗೂ ಎಲ್ಲರೂ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿ ಮಾಡುತ್ತಾರೆ. ಆದರೆ ಪ್ರೀತಿ ಮಾಡಿದ ಎಲ್ಲಾ ಜೋಡಿಗಳ ಲವ್ ಸ್ಟೋರಿ ಸಕ್ಸಸ್ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. 100ರಲ್ಲಿ ಶೇ.10ರಷ್ಟು ಜನರ ಪ್ರೀತಿ ಮಾತ್ರ ಸಕ್ಸಸ್ ಆಗುತ್ತದೆ. ಅದರಲ್ಲೂ ಹುಡುಗಿಯತು ಮನಸಾರೆ ಒಬ್ಬ ಹುಡುಗನನ್ನು ಪ್ರೀತಿಸಿದರು ಸಹ, ಬೇರೆ ಹುಡುಗನ ಕೈಯಲ್ಲಿ ತಾಳಿ ಕಟ್ಟಿಸಿಕೊಳ್ಳುತ್ತಾರೆ. ಈ ರೀತಿ ಆಗುವುದು ಯಾಕೆ? ಹುಡುಗಿಯರು ಬೇರೆ ಹುಡುಗನ ಜೊತೆಗೆ ಯಾಕೆ ಮದುವೆ ಆಗುತ್ತಾರೆ ಗೊತ್ತಾ?
ಪ್ರೀತಿ ಪ್ರೇಮ ಸಾಮಾನ್ಯವಾಗಿ ಶುರುವಾಗುವುದು ಚಿಕ್ಕ ವಯಸ್ಸಿನಲ್ಲಿ, ಆ ವಯಸ್ಸಿನಲ್ಲಿ ಅಥವಾ ಆ ಸಮಯದಲ್ಲಿ ಹೆಚ್ಚಿನ ಯೋಚನೆಗಳು ಬರದೆ ಪ್ರೀತಿ ಮಾಡಲು ಶುರು ಮಾಡುತ್ತಾರೆ. ಕೆಲವೊಮ್ಮೆ ದೈಹಿಕ ಬೆಳವಣಿಗೆ ಕೂಡ ಆಕರ್ಷಿತರಾಗುವ ಹಾಗೆ ಮಾಡಬಹುದು. ಈ ರೀತಿ ಒಬ್ಬ ಹುಡುಗಿ ಒಬ್ಬ ಹುಡುಗನನ್ನು ಪ್ರೀತಿಸಿದಾಗ, ಆಕೆ ಯಾವುದರ ಬಗ್ಗೆಯೂ ಯೋಚನೆ ಮಾಡುವುದಿಲ್ಲ, ಆತ ಚೆನ್ನಾಗಿ ಓದಿದ್ದಾನ? ಒಳ್ಳೆಯ ಕೆಲಸ ಇದೆಯೇ? ಇದ್ಯಾವುದನ್ನು ಯೋಚಿಸದೆ, ಹುಡುಗ ತನ್ನನ್ನು ಎಷ್ಟು ಪ್ರೀತಿ ಮಾಡುತ್ತಾನೆ, ತನಗಾಗಿ ಎಷ್ಟು ಸಮಯ ಕೊಡುತ್ತಾನೆ, ತಾನು ಹೇಳಿದ್ದೆಲ್ಲವನ್ನು ಮಾಡುತ್ತಾನೆ ಎನ್ನುವುದನ್ನು ಮಾತ್ರ ನೋಡಿ, ಹುಡುಗಿಯರು ಪ್ರೀತಿಸಲು ಶುರು ಮಾಡಿಬಿಡುತ್ತಾರೆ. ಪ್ರೀತಿ ಮಾಡುವ ಆ ಸಮಯದಲ್ಲಿ ಅಷ್ಟನ್ನು ಬಿಟ್ಟು ಇನ್ನೇನು ತಲೆಗೆ ಬರುವುದಿಲ್ಲ.
ಆದರೆ ಕೆಲ ಸಮಯ ಕಳೆದು, ಮದುವೆ ಎನ್ನುವ ವಿಚಾರ ಬಂದಾಗಲೇ ಬೇರೆ ಎಲ್ಲಾ ಆಯಾಮಗಳು ತಲೆಗೆ ಬರುತ್ತವೆ. ನಂತರ ಹುಡುಗಿಗೆ ಅರ್ಥ ಆಗುವುದು, ತಾನು ಇಷ್ಟಪಟ್ಟಿರುವ ಹುಡುಗನಿಗೆ ಆ ಯೋಗ್ಯತೆ ಇಲ್ಲ ಎಂದು. ಆದರೂ ಆತನನ್ನು ಮನಸಾರೆ ಇಷ್ಟಪಟ್ಟಿರುತ್ತಾಳೆ. ಆದರೆ ಏನು ಮಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ, ಹಾಗಾಗಿ ಹಲವು ಬಾರಿ ಹುಡುಗಿಯರು, ಹುಡುಗನ ಮೇಲೆ ಪ್ರೀತಿ ಇದ್ದರು ಕೂಡ ತಂದೆ ತಾಯಿ ಹೇಳುವ ಮಾತನ್ನು ಕೇಳಿ, ತಂದೆ ತಾಯಿಗೋಸ್ಕರ, ಬೇರೆ ಹುಡುಗನಿಗೆ ಕೊರಳು ನೀಡಿ ಮದುವೆ ಆಗುತ್ತಾರೆ. ಹುಡುಗಿಯರು ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೆ ಮದುವೆ ಆಗಲು ಇದು ಮುಖ್ಯ ಕಾರಣ ಆಗಿರುತ್ತದೆ. ಇದರಿಂದಲೇ, ಓದುವ ಸಮಯದಲ್ಲಿ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆದುಕೊಂಡರೆ, ಮುಂದಿನ ದಿನಗಳಲ್ಲಿ ನೀವು ಬಯಸಿದ್ದೆಲ್ಲವು ನಿಮ್ಮ ಕೈಗೆ ಸಿಗುತ್ತದೆ.
Comments are closed.