ಈ ಬಾರಿ ಜಾನಪದ ಲುಕ್ ನಲ್ಲಿ ಕಾಣಿಸಿಕೊಂಡ ಮೇಘ ಶೆಟ್ಟಿ. ನೋಡಲು ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್. ಹೇಗಿದೆ ಗೊತ್ತೆ ಮೇಘ ರವರ ಹೊಸ ಲುಕ್..
ಜೊತೆ ಜೊತೆಯಲಿ ಧಾರವಾಹಿ ಮೂಲಕ ಜನರ ಮನಸ್ಸನ್ನು ಗೆದ್ದಿರುವವರು ನಟಿ ಮೇಘಾ ಶೆಟ್ಟಿ. ಇದೀಗ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾಸ್ ಶೆಟ್ಟಿ ಅವರ ಪಾತ್ರ ಹೆಚ್ಚಿನ ಮಹತ್ವ ತೋರುತ್ತಿದೆ. ಈಗ ಅನು ರಾಜನಂದಿನಿ ಆಗಿ ಸಹ ಬದಲಾಗುತ್ತಿದ್ದು ಆ ಗತ್ತು ಗಾಂಭೀರ್ಯ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನು ಮಾತನಾಡುವ ಶೈಲಿ, ಆಟಿಟ್ಯೂಡ್ ಎಲ್ಲವೂ ಸಹ ಬದಲಾಗಿದ್ದು, ಹೊಸ ಅನು ಅಭಿಮಾನಿಗಳಿಗೆ ಮತ್ತು ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದ್ದಾಳೆ. ಇನ್ನು ಇದೀಗ ಮೇಘಾ ಶೆಟ್ಟಿ ಅವರ ವೈಯಕ್ತಿಕ ಜೀವನದ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಮೇಘಾ ಶೆಟ್ಟಿ ಅವರಿಗೆ ಜೊತೆ ಜೊತೆಯಲಿ ಧಾರವಾಹಿ ಮೂಲಕ ಬಹಳ ಜನಪ್ರಿಯತೆ ಸಿಕ್ಕಿದೆ. ದೊಡ್ಡ ಅಭಿಮಾನಿ ಬಳಗ ಸಹ ಸಿಕ್ಕಿದೆ. ಧಾರವಾಹಿಯಲ್ಲಿ ಯಾವಾಗಲೂ ಅನು ಸಾಂಪ್ರದಾಯಿಕವಾಗೆ ಕಾಣಿಸಿಕೊಳ್ಳುತ್ತಾಳೆ, ಆದರೆ ನಿಜ ಜೀವನದಲ್ಲಿ ಮೇಘಾ ಶೆಟ್ಟಿ ಅವರು ಡಿಫರೆಂಟ್, ಮಾಡರ್ನ್ ಉಡುಪುಗಳಲ್ಲಿ ಸಹ ಕಾಣಿಸಿಕೊಂಡು, ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ, ಆದರೆ ಈಗ ಮೇಘಾ ಶೆಟ್ಟಿ ಅವರ ಹೊಸ ಲುಕ್ ಅಭಿಮಾನಿಗಳು ಫಿದಾ ಆಗುವ ಹಾಗೆ ಮಾಡಿದೆ, ಆದರೆ ಅದು ಮಾಡರ್ನ್ ಲುಕ್ ಅಲ್ಲ, ಬದಲಾಗಿ ಜಾನಪದ ಲುಕ್. ಈ ಹೊಸ ಲುಕ್ ನ ಫೋಟೋಗಳಿಗೆ “ನೀರಿಗೆ ಹೋಗೋ ಹೆಣ್ಣೇ..ನಿಲ್ಲೆ ನಾ ಬರುತಿನಿ..” ಹಾಡನ್ನು ಬ್ಯಾಗ್ರೌಂಡ್ ನಲ್ಲಿ ಹಾಕಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಮೇಘಾ ಅವರ ಜನಪದ ಲುಕ್ ಗೆ ಫಿದಾ ಆಗಿರುವುದಂತೂ ನಿಜ.
ಇಲ್ಲಿ ವಿಶೇಷ ಏನೆಂದರೆ ಮೇಘಾ ಅವರ ಈ ಲುಕ್ ಅನ್ನು ನೀವು ಎಷ್ಟು ಹುಡುಕಿದರೂ ಅವರ ಅಧಿಕೃತ ಖಾತೆಯಲ್ಲಿ ಸಿಗುವುದಿಲ್ಲ. ಇದು ಶೇರ್ ಆಗಿರುವುದು ಅವರ ಫ್ಯಾನ್ ಪೇಜ್ ಒಂದರಲ್ಲಿ. ಮೇಘಾ ಅವರ ಅಭಿಮಾನಿ ಬಳಗ ಹೇಗಿದೆ ಎಂದರೆ, ಅವರೇ ಪೋಸ್ಟ್ ಮಾಡಿರದ ಫೋಟೋಗಳು ಫ್ಯಾನ್ ಪೇಜ್ ಗಳಲ್ಲಿ ಬರುತ್ತಿವೆ, ಅಷ್ಟರ ಮಟ್ಟಿಗೆ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ ಮೇಘಾ ಶೆಟ್ಟಿ. ಇನ್ನು ಮೇಘಾ ಶೆಟ್ಟಿ ಅವರು ಈಗ ಸಿನಿಮಾಗಳಲ್ಲಿ ಸಹ ಬ್ಯುಸಿ ಇದ್ದು, ಧಾರವಾಹಿ ಮತ್ತು ಸಿನಿಮಾ ಎರಡು ಚಿತ್ರೀಕರಣಗಳಲ್ಲಿ ಪಾಲ್ಗೊಂಡು, ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಮೇಘಾ ಅವರು ನಾಯಕಿ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾಫಾ ಫಸ್ಟ್ ಲುಕ್ ಪೋಸ್ಟರ್ ಸಹ ಇತ್ತೀಚೆಗೆ ಬಿಡುಗಡೆಯಾಯಿತು.
Comments are closed.