ಕೇವಲ ಇನ್ನು ಹತ್ತು ದಿನಗಳಲ್ಲಿ ಎರಡು ರಾಶಿಗಳಿಗೆ ಶುಕ್ರ ದೇವನ ಕೃಪೆಯಿಂದ ಬಾರಿ ಹಣ ಸಿಗಲಿದೆ. ಯಾರ್ಯಾರಿಗೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಮಹತ್ವದ ಪಾತ್ರ ವಹಿಸುತ್ತದೆ. ಗ್ರಹಗಳು ಸ್ಥಾನ ಬದಲಾಯಿಸುವುದು, ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಶುಕ್ರಗ್ರಹಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ. ಶುಕ್ರ ಗ್ರಹದ ಕೃಪೆ ಇದ್ದರೆ, ಒಬ್ಬ ವ್ಯಕ್ತಿಯ ಜೀವನದಲ್ಲಿ ಆರೋಗ್ಯ ಐಶ್ವರ್ಯ ಎಲ್ಲವು ಸಹ ಚೆನ್ನಾಗಿರುತ್ತದೆ. ಒಂದು ವೇಳೆ ಶುಕ್ರನ ಸ್ಥಾನ ದುರ್ಬಲವಾಗಿದ್ದರೆ, ಆ ವ್ಯಕ್ತಿಯ ಆರ್ಥಿಕ ಸ್ಥಿತಿ ಮೋಸವಾಗುತ್ತದೆ, ಜೀವನದ ಆನಂದ, ಸುಖ ಎಲ್ಲದರ ಮೇಲು ನಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರೇಮ ವಿವಾಹ ಆಗಿರುವವದ ಜೀವನದ ಮೇಲು ಪರಿಣಾಮ ಬೀರುತ್ತದೆ.
ನಮಗೆಲ್ಲ ಗೊತ್ತಿರುವ ಹಾಗೆ, ಶುಕ್ರನು ವೃಷಭ, ಮೀನ ಮತ್ತು ತುಲಾ ರಾಶಿಯ ಅಧಿಪತಿ ಆಗಿದ್ದು. ಈ ರಾಶಿಗಳಲ್ಲಿ ಶುಕ್ರನ ಒಳ್ಳೆಯ ರೀತಿಯಲ್ಲಿದ್ದರೆ, ಅದೃಷ್ಟ ಒಲಿದು ಬರುತ್ತದೆ. ಜೂನ್ 18ರಂದು ಶುಕ್ರನು, ತನ್ನ ರಾಶಿಯ ಬದಲಾವಣೆ ಮಾಡಲಿದ್ದು, ಮೇಷ ರಾಶಿಯಿಂದ ವೃಷಭ ರಾಶಿಗೆ ಬರಲಿದ್ದಾನೆ. ಇದರಿಂದಾಗಿ ಎರಡು ರಾಶಿಯವರಿಗೆ ಮಂಗಳಕರ ಫಲ ಸಿಗಲಿದ್ದು, ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ನೋಡಿ..
ಮಿಥುನ ರಾಶಿ :- ಈ ರಾಶಿಯವರಿಗೆ ಶುಕ್ರಸಂಕ್ರಮಣದಿಂದ ಯಶಸ್ಸು ಸಿಗುತ್ತದೆ, ಮಂಗಳಕರ ಫಲವಿದೆ, ಇವರು ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಎಲ್ಲಾ ಕೆಲಸಗಳು ಯಶಸ್ಸಿನ ಜೊತೆಗೆ ಪೂರ್ತಿಯಾಗುತ್ತದೆ. ಹೆಚ್ಚಿನ ಕೆಲಸ ಇಲ್ಲದೆ, ಎಲ್ಲವು ಮುಗಿಯುತ್ತದೆ. ಜೊತೆಗೆ ಹೊಸ ಕೆಲಸಗಳನ್ನು ಆರಂಭಿಸಲು ಸಹ ಇದು ಒಳ್ಳೆಯ ಸಮಯ ಆಗಿದೆ. ಹೂಡಿಕೆ ಮಾಡಲು ಸಹ ಇದು ಸೂಕ್ತ ಸಮಯ ಆಗಿದೆ. ನೀವು ಉದ್ಯಮಿಗಳಾಗಿದ್ದರೆ ಹಾಗೂ ವ್ಯಾಪಾರ ಮಾಡುತ್ತಿದ್ದರೆ ಖಂಡಿತವಾಗಿ ಲಾಭ ಸಿಗುತ್ತದೆ. ಉದ್ಯೋಗ ಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಗೌರವ ಸಿಗುತ್ತದೆ. ಹೊಸ ವಾಹನ ಮತ್ತು ಮನೆ ಖರೀದಿ ಮಾಡುವ ಯೋಗ ಸಹ ಇದೆ.
ಸಿಂಹ ರಾಶಿ :- ಶುಕ್ರ ಸಂಕ್ರಮಣ ಸಿಂಹ ರಾಶಿಯವರಿಗೆ ಒಳ್ಳೆಯದು ಮಾಡುತ್ತದೆ, ಆರ್ಥಿಕವಾಗಿ ಎಲ್ಲವೂ ಚೆನ್ನಾಗಿರುತ್ತದೆ. ಹಣಕಾಸಿನ ಲಾಭ ಸಹ ಆಗುತ್ತದೆ, ಜೊತೆಗೆ ಕೌಟುಂಬಿಕ ಜೀವನದಲ್ಲಿ ಹೆಚ್ಚು ಸಂತೋಷ ಕಾಣುತ್ತೀರಿ. ವೈಯಕ್ತಿಕ ಜೀವನದಲ್ಲಿ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಗೌರವ ಪಡೆಯುತ್ತೀರಿ, ವೃತ್ತಿಯಲ್ಲಿ ಪ್ರೊಮೋಷನ್ ಸಿಗಲಿದೆ, ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಹೂಡಿಕೆ ಮಾಡಲು ಇದು ಸೂಕ್ತ ಸಮಯ ಆಗಿದ್ದು, ಲಾಭ ಸಿಗಲಿದೆ. ಹೊಸ ಕೆಲಸ ಶುರುಮಾಡಲು ಕೂಡ ಇದು ಒಳ್ಳೆಯ ಸಮಯ ಆಗಿದೆ. ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಲಾಭ ಸಿಗಲಿದೆ, ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮವಾದ ಸಮಯ ಆಗಿದೆ.
Comments are closed.