Neer Dose Karnataka
Take a fresh look at your lifestyle.

ಖ್ಯಾತ ನಟಿಗೆ ಹೀಗಾ ಆಗೋದು. ಪೂಜಾ ಹೆಗ್ಡೆ ರವರಿಗೆ ವಿಮಾನದಲ್ಲಿ ಕೆಟ್ಟ ಅನುಭವ. ವಿಷಯ ತಿಳಿದ ಸಂಸ್ಥೆ ಮಾಡಿದ್ದೇನು ಗೊತ್ತೇ?

ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಈಗ ಬಾಲಿವುಡ್ ಕಾಲಿವುಡ್ ಎಲ್ಲಾ ಚಿತ್ರರಂಗದಲ್ಲೂ ಬ್ಯುಸಿ ಆಗಿದ್ದಾರೆ. ಪೂಜಾ ಹೆಗ್ಡೆ ಅವರು ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿ ಇರುವ ಕಾರಣ ಅವರು, ಮುಂಬೈ, ಹೈದರಾಬಾದ್ ಎಲ್ಲಾ ಕಡೆಗಳಿಗೂ ಓಡಾಡಬೇಕಾಗುತ್ತದೆ. ಹಾಗಾಗಿ ಪೂಜಾ ಹೆಗ್ಡೆ ಅವರು ವಿಮಾನಗಳಲ್ಲಿ ಓಡಾಡುವುದು ಹೆಚ್ಚು. ಆದರೆ ಇತ್ತೀಚೆಗೆ ಪೂಜಾ ಹೆಗ್ಡೆ ಅವರಿಗೆ ವಿಮಾನ ಪ್ರಯಾಣದಲ್ಲಿ ಕಹಿ ಅನುಭವ ಉಂಟಾಗಿದ್ದು, ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆ ಅವರು ಮುಂಬೈ ಗೆ ತೆರಳುತ್ತಿದ್ದರು, ಆ ಸಮಯದಲ್ಲಿ ಪೂಜಾ ಹೆಗ್ಡೆ ಅವರಿಗೆ ಕಹಿ ಅನುಭವ ಆಗಿದೆ, ವಿಮಾನದ ಸಿಬ್ಬಂದಿಗಳು ಪೂಜಾ ಹೆಗ್ಡೆ ಅವರ ಜೊತೆಗೆ, ಒರಟಾಗಿ ನಡೆದುಕೊಂಡಿದ್ದಾರೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಪೂಜಾ ಹೆಗ್ಡೆ ಅವರು, ಇಂಡಿಗೋ ಸಂಸ್ಥೆಯನ್ನು ಟ್ಯಾಗ್ ಮಾಡಿ, “ನಿಮ್ಮಸಿಬ್ಬಂದಿಯೊಬ್ಬರು ನಮ್ಮ ಜೊತೆಗೆ ಬಹಳ ಒರಟಾಗಿ ನಡೆದುಕೊಂಡರು. ವಿಪುಲ್ ನಕಾಶೆ ಎನ್ನುವ ವ್ಯಕ್ತಿ ಕಾರಣ ಇಲ್ಲದೆ, ನಮ್ಮ ಮೇಲೆ ರೇಗಾಡಿದ್ದಾರೆ. ನಾವು ಈ ರೀತಿಯ ವಿಚಾರಗಳ ಬಗ್ಗೆ ಟ್ವೀಟ್ ಮಾಡುವುದಿಲ್ಲ. ಆದರೆ ಇಂದು ನಡೆದ ಘಟನೆ ಟ್ವೀಟ್ ಮಾಡುವ ಹಾಗೆ ಮಾಡಿತು..” ಎಂದು ಟ್ವೀಟ್ ಮಾಡಿದ್ದರು ಪೂಜಾ ಹೆಗ್ಡೆ.

ಇದಕ್ಕೆ ಇಂಡಿಗೋ ಅವರು ಸಹ ರಿಪ್ಲೈ ಮಾಡಿದ್ದು, “ನಿಮಗೆ ಈ ರೀತಿಯ ಅನುಭವ ಆಗಿದ್ದಕ್ಕೆ ಕ್ಷಮೆ ಇರಲಿ ಮಿಸ್ ಪೂಜಾ ಅವರೇ, ನಿಮ್ಮನ್ನು ಈ ಕೂಡಲೇ ಕಾಂಟ್ಯಾಕ್ಟ್ ಮಾಡುತ್ತೇವೆ, ನಿಮ್ಮ PNR ನಂಬರ್ ಮತ್ತು ಫೋನ್ ನಂಬರ್ ಅನ್ನು ಡಿಎಂ ಮಾಡಿ..” ಎಂದು ಟ್ವೀಟ್ ಮಾಡಿದ್ದಾರೆ. ಪೂಜಾ ಹೆಗ್ಡೆ ಅವರಿಗೆ ಈ ರೀತಿಯ ಅನುಭವ ಆಗಿದ್ದು, ನಿಜಕ್ಕೂ ಚಿತ್ರರಂಗದವರಿಗೆ ಶಾಕ್ ಆಗಿದೆ. ಇನ್ನು ಪೂಜಾ ಹೆಗ್ಡೆ ಅವರು ಈಗ ತೆಲುಗು ಮತ್ತು ಹಿಂದಿ ಎರಡು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೆಚ್ಚಿನ ಸಮಯ ಚಿತ್ರೀಕರಣದಲ್ಲೇ ಕಳೆಯುತ್ತಿದ್ದು, ಹಾಗಾಗಿ ಓಡಾಡುವುದು ಹೆಚ್ಚಾಗಿದ್ದು, ವಿಮಾನದಲ್ಲಿ ಪ್ರಯಾಣ ಮಾಡುವಾಗ, ಈ ರೀತಿಯ ಅನುಭವ ಆಗಿದೆ.

Comments are closed.