ನಿಖಿಲ್, ರೇವತಿ ದಂಪತಿ ಪುತ್ರನ ಸಂಪೂರ್ಣ ಹೆಸರು ಅವ್ಯನ್ ದೇವ್ ಎನ್.ಕೆ. ಈ ಹೆಸರನ್ನು ಸೂಚಿಸಿದವರು ಯಾರು ಗೊತ್ತೇ??
ಚಂದನವನದಲ್ಲಿ ನಟನಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಹ ಗುರುತಿಸಿಕೊಂಡು ಒಳ್ಳೆಯ ಹೆಸರನ್ನು ಪಡೆದುಕೊಂಡಿರುವವರು ನಟ ನಿಖಿಲ್ ಕುಮಾರಸ್ವಾಮಿ. ಮಾಜಿ ಪ್ರಧಾನಿಗಳ ಮೊಮ್ಮಗ, ಹಾಗೂ ಮಾಜಿ ಮುಖ್ಯಮಂತ್ರಿಗಳ ಮಗ ಆಗಿದ್ದಾರೆ ನಿಖಿಲ್. ಜಾಗ್ವಾರ್, ಸೀತಾರಾಮ ಕಲ್ಯಾಣ ಹಾಗೂ ರೈಡರ್ ಸಿನಿಮಾ ಮೂಲಕ ಚಂದನವನದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ನಿಖಿಲ್. ಇವರಿಗೆ ದೊಡ್ಡ ಅಭಿಮಾನಿ ಬಳಗ ಇದೆ, ಜೊತೆಗೆ ಯುವ ರಾಜಕೀಯ ನಾಯಕನಾಗಿ ಸಹ ಗುರುತಿಸಿಕೊಂಡಿದ್ದಾರೆ. 2020ರಲ್ಲಿ ಮದುವೆಯಾದ ನಿಖಿಲ್ ರೇವತಿ ದಂಪತಿ, ಕಳೆದ ವರ್ಷ ಮಗುವಿನ ತಂದೆ ತಾಯಿಯಾದರು.
2021ರ ಸೆಪ್ಟೆಂಬರ್ 21ರಂದು ರೇವತಿ ಅವರು ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದರು. ಇದೀಗ ಈ ಮಗುವಿಗೆ 9 ತಿಂಗಳು ತುಂಬಿದ್ದು, ಮಗುವಿನ ನಾಮಕರಣ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ದೇವಸ್ಥಾನದಲ್ಲಿ ನಡೆಸಲಾಯಿತು. ನಾಮಕರಣ ಮತ್ತು ಕನಕಾಭಿಷೇಕವನ್ನು ಮಾಡಿಸಲಾಯಿತು. ಈ ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು, ಅವರ ಪತ್ನಿ, ಕುಮಾರಸ್ವಾಮಿ ಅವರು ಮತ್ತು ಅವರ ಪತ್ನಿ. ಹಾಗೂ ನಿಖಿಲ್ ಅವರ ಇಡೀ ಕುಟುಂಬ ಭಾಗಿಯಾಗಿತ್ತು. ಮಗನಿಗೆ ನಿಖಿಲ್ ಅವರು ವಿಶೇಷವಾದ ಹೆಸರನ್ನು ಹುಡುಕಿ ಇಟ್ಟಿದ್ದಾರೆ. ಅವ್ಯಾನ್ ದೇವ್ ಎಂದು ಮಗನಿಗೆ ನಾಮಕರಣ ಮಾಡಿದ್ದಾರೆ ನಿಖಿಲ್ ಕುಮಾರಸ್ವಾಮಿ. ಹಾಗೂ ನಿನ್ನೆ ಪ್ರೆಸ್ ಮೀಟ್ ನಲ್ಲಿ ಸಹ ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ..
ನಿಖಿಲ್ ರೇವತಿ ದಂಪತಿಯ ಮಗನ ಪೂರ್ತಿ ಹೆಸರು ಅವ್ಯಾನ್ ದೇವ್ ಎನ್.ಕೆ ಅಂದರೆ ಅವ್ಯಾನ್ ದೇವ್ ನಿಖಿಲ್ ಕುಮಾರಸ್ವಾಮಿ. ಮಗುವಿಗೆ ಇಂತಹ ವಿಶಿಷ್ಟವಾದ ಹೆಸರನ್ನು ಸೂಚಿಸಿದ್ದು ಯಾರು ಎನ್ನುವ ಕುತೂಹಲ ಸಹ ಜನರಲ್ಲಿ ಹಾಗೂ ಅಭಿಮಾನಿಗಳಲ್ಲಿ ಮೂಡಿತ್ತು, ಅದಕ್ಕೀಗ ಉತ್ತರ ಸಿಕ್ಕಿದ್ದು, ಅವ್ಯಾನ್ ಎಂದು ಹೆಸರು ಹುದುಕಿದ್ದು ಪತ್ನಿ ರೇವತಿ ಅವರೇ ಎಂದು ತಿಳಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ ಅವರು. ರೇವತಿ ಅವರೇ ತಮ್ಮ ಮಗನಿಗೆ ಇದೇ ಹೆಸರು ಇಡಬೇಕು ಎಂದು ಸೂಚಿಸಿದ್ದು, ಬಹಳ ಸಂತೋಷದ ವಿಚಾರ. ಅವ್ಯಾನ್ ಹೆಸರು ದೇವರುಗಳಾದ ಗಣೇಶ ಮತ್ತು ವಿಷ್ಣುವಿನ ಮತ್ತೊಂದು ಹೆಸರಾಗಿದೆ ಎಂದು ನಿಖಿಲ್ ಅವರು ತಿಳಿಸಿದ್ದಾರೆ. ಅವ್ಯಾನ್ ಎಂದು ಹೆಸರು ತಿಳಿದ ಬಳಿಕ, ವಿಭಿನ್ನವಾಗಿರುವ ಹೆಸರಿನ ಅರ್ಥ ತಿಳಿದುಕೊಳ್ಳಬೇಕು ಎಂದು ಜನರು ಪ್ರಯತ್ನ ಪಟ್ಟಿದ್ದರು.
Comments are closed.