ವರ್ಷಕ್ಕೆ ಒಮ್ಮೆ ರೀಚಾರ್ಜ್ ಮಾಡಿದರೆ ಸಾಕು, ವರ್ಷ ಪೂರ್ತಿ ಸಿಗಲಿದೆ ಡೇಟಾ. ಹೇಗಿದೆ ಗೊತ್ತೇ ಏರ್ಟೆಲ್ ಪ್ಲಾನ್??
ಭಾರತದ ಟೆಲಿಕಾಂ ಕಂಪನಿಗಳಲ್ಲಿ ಏರ್ಟೆಲ್ ಸಂಸ್ಥೆ ಗ್ರಾಹಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಲ್ಲಿ ಎರಡನೆಯ ಸ್ಥಾನದಲ್ಲಿದೆ. ಏರ್ಟೆಲ್ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಯೋಜನೆಗಳನ್ನು ನೀಡುತ್ತಿದೆ. ದೀರ್ಘ ಸಮಯದ ವರೆಗೂ, ವರ್ಷ ಪೂರ್ತಿ ಉಚಿತ ಡೇಟಾ ಮತ್ತು ಉಚಿತ ಕರೆಗಳು ಇರುವಂಥ ಪ್ಲಾನ್ ಗಳು ಏರ್ಟೆಲ್ ನಲ್ಲಿ ನಿಮಗೆ ಸಿಗುತ್ತದೆ. ದೀರ್ಘಾವಧಿ ಪ್ಲಾನ್ ಗಳು ಇರುವ ಯೋಜನೆಗಳು ಯಾವುವು ಎಂದು ಇಂದು ನಿಮಗೆ ತಿಳಿಸುಕೊಡುತ್ತೇವೆ ನೋಡಿ..
ಏರ್ಟೆಲ್ ₹1799 ರೂಪಾಯಿಯ ಪ್ಲಾನ್ :-ಈ ಪ್ಲಾನ್ ನ ಅವಧಿ 365 ದಿನಗಳ ವರೆಗೆ ಇರುತ್ತದೆ. ಈ ಪ್ಲಾನ್ ನಲ್ಲಿ ನಿಮಗೆ ಒಂದು ವರ್ಷ ಪೂರ್ತಿ ಅನಿಯಮಿತ ಉಚಿತ ಕರೆಗಳು ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಹಾಗೂ ತಿಂಗಳಿಗೆ 2ಜಿಬಿ ಡೇಟಾ ಹಾಗೆ ವರ್ಷಕ್ಕೆ 24ಜಿಬಿ ಡೇಟಾ ಸಿಗುತ್ತದೆ.
ವರ್ಷ ಪೂರ್ತಿ ಗ್ರಾಹಕರು ಈ ಪ್ಲಾನ್ ನ ಪ್ರಾಯಿಹನ ಪಡೆಯಬಹುದು.
ಏರ್ಟೆಲ್ ₹2999 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ :- ಈ ಪ್ಲಾನ್ ವ್ಯಾಲಿಡಿಟಿ ಅವಧಿ ವರ್ಷ ಪೂರ್ತಿ ಇರುತ್ತದೆ. ಪ್ರತಿದಿನ 2ಜಿಬಿ ಉಚಿತ ಡೇಟಾ ಸಿಗುತ್ತದೆ, ಜೊತೆಗೆ ಪ್ರತಿದಿನ ಉಚಿತ 100 ಎಸ್.ಎಂ.ಎಸ್ ಗಳು ಹಾಗೂ ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿಗ ಉಚಿತ ಕೆರೆಗಳು ಸಿಗಲಿದೆ. ಈ ಪ್ಲಾನ್ ನ ಸೌಲಭ್ಯವನ್ನು ಗ್ರಾಹಕರು ವರ್ಷಪೂರ್ತಿ ಪಡೆಯಬಹುದು.
ಏರ್ಟೆಲ್ ₹3359 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ :-ಈ ಪ್ಲಾನ್ ನ ಅವಧಿ ಪೂರ್ತಿ ಒಂದು ವರ್ಷಗಳ ಕಾಲ ಇರುತ್ತದೆ. ಈ ಪ್ಲಾನ್ ನಲ್ಲಿ ಪ್ರತಿದಿನ 2ಜಿಬಿ ಡೇಟಾ, ಪ್ರತಿದಿನ 100 ಎಸ್.ಎಂ.ಎಸ್ ಗಳು ಸಿಗುತ್ತದೆ. ಜೊತೆಗೆ ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಸಹ ಸಿಗುತ್ತದೆ. ಇವುಗಳ ಜೊತೆಯಲ್ಲಿ ಡಿಸ್ನಿ ಹಾಟ್ ಸ್ಟಾರ್ ಸಬ್ಸ್ಕ್ರಿಪ್ಶನ್, ವಿಂಕ್ ಮ್ಯೂಸಿಕ್, ಏರ್ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ಹಾಗೂ ಫಾಸ್ಟ್ಯಾಗ್ ಕ್ಯಾಶ್ ಬ್ಯಾಕ್ ಸಹ ಸಿಗುತ್ತದೆ.
ಹಾಗಿದ್ದರೆ ಯಾಕೆ ತಡ, ದೀರ್ಘಾವಧಿ ಯೋಜನೆಗಳನ್ನು ರೀಚಾರ್ಜ್ ಮಾಡಲು ಬಯಸುವವರು ತಪ್ಪದೇ ಈ ಪ್ಲಾನ್ ರೀಚಾರ್ಜ್ ಮಾಡಿ, ಏರ್ಟೆಲ್ ನ ಸೇವೆಗಳನ್ನು ಆನಂದಿಸಿ.
Comments are closed.