ಬಹಳ ತಮಾಷೆಯಿಂದ ಕೂಡಿರುವ ಅಶ್ವಿನ್ ಹಾಗೂ ಅವರ ಹೆಂಡತಿಯ ಲವ್ ಸ್ಟಾರ್ ಬಗ್ಗೆ ನಿಮಗೆ ಗೊತ್ತೇ??
ಖ್ಯಾತ ಭಾರತೀಯ ಕ್ರಿಕೆಟಿಗ ಮತ್ತು ರಾಜಸ್ಥಾನ ರಾಯಲ್ಸ್‌ನ ಐಪಿಎಲ್ ಕ್ರಿಕೆಟ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಅನೇಕ ವಿಚಾರಗಳಿಂದ ಸುದ್ದಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿರುವ ಎತ್ತರದ ಸುಂದರ ವ್ಯಕ್ತಿ ರವಿಚಂದ್ರನ್ ಅಶ್ವಿನ್ ಅವರ ವೈಯಕ್ತಿಕ ಜೀವನವು ಲೈಮ್‌ಲೈಟ್‌ನಿಂದ ದೂರ ಉಳಿದಿರಬಹುದು. ಆದರೆ ಇವರಪತ್ನಿ ಪೃಥ್ವಿ ನಾರಾಯಣನ್ ಜೊತೆಗಿನ ಲವ್ ಸ್ಟೋರಿ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ.. ಅದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಸೆಪ್ಟೆಂಬರ್ 17, 1986 ರಂದು ಚೆನ್ನೈನ ತಮಿಳು ಭಾಷೆ ಮಾತನಾಡುವ ಕುಟುಂಬದಲ್ಲಿ ಜನಿಸಿರು ಅಶ್ವಿನ್. ಇವರು ಕ್ರಿಕೆಟ್ ಬಗೆಗಿನ ಸೂಕ್ಷ್ಮಗಳನ್ನು ತಂದೆಯಿಂದ ಕಲಿತರು.ಕ್ಲಬ್ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ತನ್ನ ತಂದೆಯವರ ಬಳಿ ಇದ್ದ ಮಾಸ್ಟರ್-ಸ್ಟ್ರೋಕ್ ನೋಡಿ ಅಶ್ವಿನ್ ಅವರು ಸಹ ಭಾರತೀಯ ಕ್ರಿಕೆಟ್ ತಂಡದಲ್ಲಿ ಕ್ರಿಕೆಟರ್ ಆಗಿ ಪ್ರದರ್ಶನ ನೀಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದರು. ಇನ್ನು ರವಿಚಂದ್ರನ್ ಅಶ್ವಿನ್ ಮತ್ತು ಅವರ ಪತ್ನಿಯ ಬಗ್ಗೆ ಹೇಳುವುದಾದರೆ, ರವಿಚಂದ್ರನ್ ಅಶ್ವಿನ್ ಅವರು ಪೃಥ್ವಿ ನಾರಾಯಣನ್ ಅವರನ್ನು ಶಾಲಾ ದಿನಗಳಲ್ಲಿ ಮೊದಲ ಬಾರಿಗೆ ನೋಡಿ, ಎಷ್ಟು ಸುಂದರವಾಗಿದ್ದಾಳೆ ಹುಡುಗಿ ಎಂದುಕೊಂಡಿದರಂತೆ. ನಂತರ ಇವರಿಬ್ಬರು ಒಟ್ಟಿಗೆ ಒಂದೇ ಕಾಲೇಜಿಗೆ ಆಕಸ್ಮಿಕವಾಗಿ ಪ್ರವೇಶಿಸಿದಾಗ ಇಬ್ಬರ ನಡುವೆ ಸ್ನೇಹ ಬೆಳೆಯಿತು.
ಚೆನ್ನೈನಲ್ಲಿರುವ SSN ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಇವರಿಬ್ಬರು ಪ್ರವೇಶ ಪಡೆದರು, ನಂತರ ಇಬ್ಬರ ನಡುವಿನ ಪ್ರೀತಿ ಕ್ರಮೇಣ ಚಿಗುರಿತು. ಇವರಿಬ್ಬರ ಕುಟುಂಬಗಳು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದರಿಂದ, ಯಾವುದೇ ಸಂಘರ್ಷ ಇರಲಿಲ್ಲ. ಪೃಥ್ವಿ ಅವರು ಯಾವುದೇ ತೊಂದರೆಯಿಲ್ಲದೆ ತಮ್ಮ ಸಂತೋಷದ ಡೇಟಿಂಗ್ ಸಮಯವನ್ನು ಎಂಜಾಯ್ ಮಾಡಿದರು. ನಂತರ ಎರಡು ಕುಟುಂಬದವರ ಸಮ್ಮತಿಯಿಂದ ಇವರಿಬ್ಬರ ಮದುವೆ ನಡೆಯಿತು. ಈ ದಂಪತಿಗೆ ಮುದ್ದಾದ ಮಗಳು ಸಹ ಇದ್ದಾಳೆ, ಅಶ್ವಿನ್ ಮತ್ತು ಪೃಥ್ವಿ ತಮ್ಮ ಮಗಳಿಗೆ ಅಖಿರಾ ಎಂದು ಹೆಸರಿಸಿದ್ದಾರೆ, ಅವರ ಎರಡನೇ ಮುದ್ದಿನ ಮಗಳು 21 ಡಿಸೆಂಬರ್ 2016 ರಂದು ಜನಿಸಿದರ. ಎರಡನೇ ಮಗುವಿಗೆ ಆಧ್ಯ ಅಶ್ವಿನ್ ಎಂದು ಹೆಸರಿಟ್ಟಿದ್ದಾರೆ. ವರದಿಯ ಪ್ರಕಾರ, ರವಿಚಂದ್ರನ್ ಅಶ್ವಿನ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 110 ಕೋಟಿ ರೂಪಾಯಿ ಆಗಿದೆ. ಇವರ ಆದಾಯ ಕ್ರಿಕೆಟ್ ಇಂದ ಬರುತ್ತದೆ, ಅವರು ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಮತ್ತು ಐಪಿಎಲ್ ಮತ್ತು ಐಪಿಎಲ್ ನಲ್ಲಿ ಆಟವಾಡುತ್ತಾರೆ ಅಶ್ವಿನ್
Comments are closed.