ಇದಪ್ಪ ಹವಾ ಅಂದ್ರೆ, ಮಾಧ್ಯಮಗಳ ವಿರುದ್ಧ ತೊಡೆತಟ್ಟಿರುವ ದರ್ಶನ್ ಅಭಿಮಾನಿಗಳು. ಇದನ್ನು ನೋಡಿದ ದರ್ಶನ್ ಬಹಿರಂಗವಾಗಿ ಹೇಳಿದ್ದೇನು ಗೋತ್ತೇ??
ಡಿಬಾಸ್ ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಅದರಲ್ಲು ದರ್ಶನ್ ಅವರ ಅಭಿಮಾನಿಗಳಿಗೆ ಎಂಥಹ ಮಟ್ಟದಲ್ಲಿ ಕ್ರೇಜ್ ಇದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ದರ್ಶನ್ ಅವರ ಬಗ್ಗೆ ಯಾವುದೇ ಒಂದು ವಿಚಾರ ಬಂದರು ಸಹ, ಅಭಿಮಾನಿಗಳು ಅದನ್ನು ಸೆಲೆಬ್ರೇಟ್ ಮಾಡುತ್ತಾರೆ. ಸಿನಿಮಾ ಬಗ್ಗೆ ಆಗಲಿ ಅಥವಾ ದರ್ಶನ್ ಅವರ ನಿಜ ಜೀವನದ ಬಗ್ಗೆ ಆಗಲಿ ಯಾವುದೇ ಒಂದು ವಿಷಯ ಸಿಕ್ಕರೂ ಸಹ, ವೈರಲ್ ಮಾಡುತ್ತಾರೆ. ಏನೇ ನಡೆದರೂ, ದರ್ಶನ್ ಅವರನ್ನು ಅಭಿಮಾನಿಗಳು ಮಾತ್ರ ಕೈಬಿಡುವುದಿಲ್ಲ.
ದರ್ಶನ್ ಅವರು ಸಹ ಅಭಿಮಾನಿಗಳ ಮೇಲೆ ಅಷ್ಟೇ ಪ್ರೀತಿ ಇಟ್ಟುಕೊಂಡಿದ್ದಾರೆ. ಸದಾ ತಮ್ಮ ಅಭಿಮಾನಿಗಳನ್ನು ಸಪೋರ್ಟ್ ಮಾಡುತ್ತಾರೆ ಡಿಬಾಸ್. ದರ್ಶನ್ ಅವರು ಅಭಿಮಾನಿಗಳನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಸದಾ ಅಭಿಮಾನಿಗಳ ಜೊತೆ ನಿಲ್ಲುತ್ತಾರೆ ಡಿಬಾಸ್. ಇನ್ನು ಇದೀಗ ಮತ್ತೊಂದು ಸಾರಿ ದರ್ಶನ್ ಅವರ ಅಭಿಮಾನಿಗಳು ಮಾಡಿರುವ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ವತಃ ದರ್ಶನ್ ಅವರಃ ಅಭಿಮಾನಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯುತ್ತಾರೆ. ಡಿಬಾಸ್ ಡಿಬಾಸ್ ಎಂದೇ ಅಭಿಮಾನಿಗಳು ಅವರ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ದರ್ಶನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳಲ್ಲಿ ಕ್ರೇಜ್ ಯಾವ ರೇಂಜ್ ನಲ್ಲಿರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ, ಡಿಬಾಸ್ ಜೊತೆ ಸೆಲ್ಫಿ ಮತ್ತು ಫೋಟೋಗಾಗಿ ಮುಗಿಬೀಳುತ್ತಾರೆ ಅಭಿಮಾನಿಗಳು.
ಇದೆಲ್ಲದಕ್ಕೂ ಮೀರಿ ದರ್ಶನ್ ಅವರನ್ನು ಪ್ರತಿಗೊಂದ್ ಅಭಿಮಾನಿಗಳು ಸಪೋರ್ಟ್ ಮಾಡುತ್ತಲೇ ಬಂದಿದ್ದಾರೆ. ಡಿಬಾಸ್ ಅವರ ಕಷ್ಟದ ಸಮಯದಲ್ಲೂ ಸಹ ಕೈಬಿಡದೆ, ಇದ್ದವರು ಅಭಿಮಾನಿಗಳು, ಅದರಿಂದಲೇ ಡಿಬಾಸ್ ಅವರಿಗೆ ಅಭಿಮಾನಿಗಳು ಅಂದ್ರೆ ಅಷ್ಟು ಪ್ರೀತಿ. ಇನ್ನು ದರ್ಶನ್ ಅವರಃ ಸಹ ತಮ್ಮ ಅಭಿಮಾನಿಗಳಿಗೆ ಅಷ್ಟೇ ಪ್ರೀತಿ ತೋರಿಸುತ್ತಾರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ನಮಗೆಲ್ಲ ಗೊತ್ತಿರುವ ಹಾಗೆ ರಾಬರ್ಟ್ ನಂತರ ದರ್ಶನ್ ಅವರ ಮುಂದಿನ ಸಿನಿಮಾ ಕ್ರಾಂತಿ. ಈ ಸಿನಿಮಾ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಇದೆ.
ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ದೊಡ್ದ ಮಟ್ಟದಲ್ಲಿ ಪ್ರೊಮೋಟ್ ಮಾಡುವ ಪ್ಲಾನ್ ಹೊಂದಿದ್ದಾರೆ. ಯಾಕೆಂದರೆ, ಕನ್ನಡ ಮಾಧ್ಯಮಗಳು ದರ್ಶನ್ ಅವರನ್ನು ಅಘೋಷಿತವಾಗಿ ಬ್ಯಾನ್ ಮಾಡಿದ್ದು, ಅವರ ಬಗ್ಗೆ ಒಂದು ಸುದ್ದಿ ಕೂಡ ಟಿವಿಯಲ್ಲಿ ಬರುವುದಿಲ್ಲ. ದರ್ಶನ್ ಅವರು ಕ್ಷಮೆ ಕೇಳಿದರೆ ಮಾತ್ರ, ಅವರ ಬಗೆಗಿನ ಸುದ್ದಿಯನ್ನು ಪ್ರಸಾರ ಮಾಡುವುದಾಗಿ ಮಾಧ್ಯಮಗಳು ಹೇಳಿವೆ, ಆದರೆ ದರ್ಶನ್ ಅವರು ಕ್ಷಮೆ ಕೇಳುವ ಹಾಗೆ ತೋರುತ್ತಿಲ್ಲ. ಹಾಗಾಗಿ ಅಭಿಮಾನಿಗಳು ಯಾವುದೇ ಚಾನೆಲ್ ಅಥವಾ ಮಾಧ್ಯಮದ ಸಹಾಯ ಇಲ್ಲದೆ, ಕ್ರಾಂತಿ ಸಿನಿಮಾ ದೊಡ್ಡ ಹಿಟ್ ಆಗುವ ಹಾಗೆ ಮಾಡಬೇಕು ಎಂದುಕೊಂಡಿದ್ದಾರೆ.
ಹಾಗಾಗಿ ದರ್ಶನ್ ಅವರ ಸಿನಿಮಾವನ್ನು ಸೋಷಿಯಲ್ ಮೀಡಿಯಾ ಮೂಲಕ ಪ್ರೊಮೋಟ್ ಮಾಡುತ್ತಿದ್ದಾರೆ. ಇನ್ನು ಡಿಬಾಸ್ ಅವರು ಸಹ ಅಭಿಮಾನಿಗಳ ಬಗ್ಗೆ ಒಂದು ಪೋಸ್ಟ್ ಸಹ ಮಾಡಿದ್ದಾರೆ. “ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು. ನಿಮ್ಮ ದಾಸ ದರ್ಶನ್..”ಎಂದು ಬರೆದು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ ಡಿಬಾಸ್.
Comments are closed.