ವಿಜ್ಞೇಶ್ ರವರ ಜೊತೆ ಮದುವೆಯಾದ ನಯನತಾರ, ಮದುವೆಗೂ ಮುನ್ನ ಯಾವ್ಯಾವ ನಟರ ಜೊತೆ ಪ್ರೀತಿಯಲ್ಲಿ ಇದ್ದರೂ ಗೊತ್ತೇ?? ಲಿಸ್ಟ್ ನಲ್ಲಿ ಯಾರ್ಯಾರ ಹೆಸರಿದೆ ಗೊತ್ತೇ??
ಟಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಅವರ ಮದುವೆ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆ ಜೂನ್ 9ರಂದು ನಡೆಯಿತು. ನಯನತಾರ ಅವರು ಇಷ್ಟು ವರ್ಷ ಸಿಂಗಲ್ ಆಗಿದ್ದು, ಇದೀಗ ಮದುವೆಯಾಗಿದ್ದಾರೆ. ನಯನತಾರ ಅವರ ಮದುವೆಯ ಸಮಯದಲ್ಲಿ, ಅವರ ಹಳೆಯ ಬಾಯ್ ಫ್ರೆಂಡ್ ವಿಚಾರಗಳು ಸುದ್ದಿಯಾಗುತ್ತಿದೆ. ನಯನತಾರ ಅವರು ಸಿನಿಮಾಗಳ ವಿಚಾರದ ಜೊತೆಗೆ ವೈಯಕ್ತಿಕ ಜೀವನದ ವಿಚಾರಕ್ಕೆ ಸುದ್ದಿಯಾಗಿದ್ದಾರೆ..
ವಿಘ್ನೇಶ್ ಶಿವನ್ ಅವರು ಸಿಗುವ ಮೊದಲು ನಯನತಾರ ಅವರ ಹೆಸರು ಇನ್ನು ಕೆಲವು ನಟರ ಹೆಸರಿನ ಜೊತೆಗೆ ಕೇಳಿ ಬಂದಿತ್ತು. ಮೊದಲಿಗೆ ನಯನತಾರ ಅವರ ಹೆಸರು ಕೇಳಿಬಂದಿದ್ದು, ಖ್ಯಾತ ನಟ ಸಿಂಬು ಅವರ ಜೊತೆಯಲ್ಲಿ. 2006ರ ಸಮಯದಲ್ಲಿ, ವಲ್ಲವನ್ ಸಿನಿಮಾದಲ್ಲಿ ನಟಿಸುತ್ತಿದ್ದ ಸಮಯದಲ್ಲಿ, ಈ ಜೋಡಿ ಡೇಟ್ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳು ಹೆಚ್ಚಾಗಿ ಕೇಳಿ ಬಂದಿದ್ದವು, ಆದರೆ ಯಾಕೋ ಏನೋ ಹೆಚ್ಚು ದಿನಗಳ ಕಾಲ ಈ ಜೋಡಿ ಜೊತೆಯಾಗಿ ಇರಲಿಲ್ಲ. ಇದಾದ ಬಳಿಕ ನಯನತಾರ ಅವರ ಹೆಸರು ಖ್ಯಾತ ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಅವರ ಜೊತೆಗೆ ಕೇಳಿ ಬಂದಿತ್ತು. ನಯನತಾರ ಮತ್ತು ಪ್ರಭುದೇವ ಅವರ ಮದುವೆ ಇನ್ನೇನು ನಡೆದೇ ಹೋಗುತ್ತದೆ ಎನ್ನುವಂತಹ ಸುದ್ದಿಗಳು 2009ರಲ್ಲಿ ಕೇಳಿ ಬಂದಿದ್ದವು.
ಆದರೆ ನಯನತಾರ ಅವರು ಇವರು ಯಾರ ಜೊತೆಯಲ್ಲೂ ಮದುವೆ ಆಗಲಿಲ್ಲ. ವಿಘ್ನೇಶ್ ಶಿವನ್ ಅವರು ಪರಿಚಯವಾಗಿದ್ದು 2015ರಲ್ಲಿ, ನಾನಂ ರೌಡಿ ಧಾನ್ ಸಿನಿಮಾ ನಿರ್ದೇಶನ ಮಾಡಿದ್ದು ವಿಘ್ನೇಶ್ ಶಿವನ್ ಅವರು ಆ ಸಿನಿಮಾದಲ್ಲಿ ನಯನತಾರ ಅವರು ಹೀರೋಯಿನ್ ಆಗಿದ್ದರು. ಈ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲೇ ನಯನತಾರ ಮತ್ತು ವಿಘ್ನೇಶ್ ಶಿವನ್ ಅವರ ನಡುವೆ ಪ್ರೀತಿ ಶುರುವಾಯಿತು. 7 ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ, ಜೂನ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಯನತಾರ ಅವರಿಗೆ ಪರ್ಫೆಕ್ಟ್ ಜೋಡಿ ವಿಘ್ನೇಶ್ ಶಿವನ್ ಎಂದೇ ಎಲ್ಲರೂ ಹೇಳುತ್ತಿದ್ದು, ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
Comments are closed.