ಪುಷ್ಪ ಸಿನಿಮಾ ಕಾಡಿನಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲೂ ಅರ್ಜುನ್ ಏನು ಮಾಡಿದ್ದರಂತೆ ಗೊತ್ತೇ?? ಇದು ನಿಜಕ್ಕೂ ಗ್ರೇಟ್ ಎಂದು ತಲೆಬಾಗಿದ ನೆಟ್ಟಿಗರು.
ನಟ ಅಲ್ಲು ಅರ್ಜುನ್ ಅವರು ಪುಷ್ಪ ದಿ ರೈಸ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನ್ನಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾ ಅಲ್ಲು ಅರ್ಜುನ್ ಅವರ ಕೆರಿಯರ್ ನಲ್ಲಿ ದೊಡ್ಡ ಹಿಟ್ ಎನ್ನಿಸಿಕೊಂಡ ಸಿನಿಮಾ ಆಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ತೆರೆಕಂಡ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು, ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿ, ಬಾಲಿವುಡ್ ನಲ್ಲೇ 100 ಕೋಟಿಗಿಂತ ಹೆಚ್ಚಿನ ಹಣ ದೋಚಿತ್ತು, ಒಟ್ಟಾರೆಯಾಗಿ 300 ಕೋಟಿಗಿಂತ ಹೆಚ್ಚಿನ ಹಣ ಗಳಿಸಿತ್ತು ಪುಷ್ಪ ಸಿನಿಮಾ. ಪುಷ್ಪ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಟ ಅಲ್ಲು ಅರ್ಜುನ್ ಅವರು ಮಾಡಿರುವ ಕೆಲಸ ಒಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಪುಷ್ಪ ಸಿನಿಮಾವನ್ನು ನಾವೆಲ್ಲರೂ ನೋಡಿರುವ ಹಾಗೆ ಸಿನಿಮಾದಲ್ಲಿ ಸಾಕಷ್ಟು ದೃಸಿಯಾಗಳು ಕಾಡಿನಲ್ಲಿ ಚಿತ್ರೀಕರಣಗೊಂಡಿದೆ. ಆಂಧ್ರಪ್ರದೇಶದ ಮರೆಡುಮಿ ಕಾಡಿನಲ್ಲಿ ಪುಷ್ಪ ಸಿನಿಮಾ ಚಿತ್ರೀಕರಣ ನಡೆದಿತ್ತು, ಕಾಡುಗಳನ್ನು ರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಹೊಣೆ, ಕಾಡಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತದೆ ಅಂದರೆ ಅಲ್ಲಿ ಮಾಲಿನ್ಯ ಉಂಟಾಗುವುದು ಸಾಮಾನ್ಯವೆ ಆಗಿದೆ. ಆದರೆ ಅಲ್ಲು ಅರ್ಜುನ್ ಅವರಿಗೆ ಪರಿಸರದ ಮೇಲೆ ಕಾಳಜಿ ಹೆಚ್ಚಾಗಿದೆ, ಅವರು ಕಾಡಿನ ಸಂಪತ್ತು ಮಲಿನವಾಗದಂತೆ ನೋಡಿಕೊಳ್ಳಬೇಕು ಎಂದು ವಿಶೇಷ ಕಾಳಜಿ ವಹಿಸಿದ್ದರು. ಅಲ್ಲು ಅರ್ಜುನ್ ಅವರು ಅಂದು ಚಿತ್ರೀಕರಣ ಸಮಯದಲ್ಲಿ ವಹಿಸಿದ್ದ ಕಾಳಜಿ ಹಾಗೂ ಮಾಡಿದ ಕೆಲಸಗಳ ಬಗ್ಗೆ ಈಗಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾ ಚಿತ್ರೀಕರಣ ಕಾಡಿನಲ್ಲಿ ನಡೆಯುವಾಗ, ಚಿತ್ರೀಕರಣ ಸಮಯದಲ್ಲಿ ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲ್ ಗಳು, ಹಾಗೂ ಇನ್ನಿತರ ಪರಿಸರಕ್ಕೆ ಹಾನಿ ತರುವಂಥಾ ವಸ್ತುಗಳು ಕಾಡಿಗೆ ಹಾನಿ ತರಬಾರದು ಎಂದು ಕಸದ ಡಬ್ಬಿಗಳಿಗೆ ಹಾಕುವ ಹಾಗೆ ನೋಡಿಕೊಂಡಿದ್ದಾರೆ. ಕಸದ ಡಬ್ಬಿಗಳನ್ನು ನಿರ್ಮಿಸಿ, ಎಲ್ಲರೂ ಅದರ ಒಳಗೆಯೇ ವೇಸ್ಟ್ ಆಗಿರುವ ವಸ್ತುಗಳನ್ನು ಹಾಕಬೇಕು ಎಂದು ಹೇಳಿ, ಅದೇ ರೀತಿ ಮಾಡಿಸಿ, ಕಾಡಿನ ಸೌಂದರ್ಯ ಕಾಪಾಡುವಲ್ಲಿ ಮಹತ್ವದ ಪಾಲು ವಹಿಸಿದ್ದರು ನಟ ಅಲ್ಲು ಅರ್ಜುನ್. ಇವರಿಗೆ ಪರಿಸರದ ಮೇಲೆ ಹಾಗೂ ಕಾಡುಗಳ ಮೇಲೆ ಇರುವ ಕಾಳಜಿ ನೋಡಿ, ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿದ್ದಾರೆ.