ವಿರಾಟ್ ಕೊಹ್ಲಿ ಗೆ ನಡೆಯುತ್ತಿದೆ ಮೋಸ, ಅದು ಅವರಿಗೆ ಅವರೇ ಮಾಡಿಕೊಳ್ಳುತ್ತಿದ್ದಾರೆ ಎಂದ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್. ಹೇಳಿದ್ದೇನು ಗೊತ್ತೇ??
ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಭಾರತ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರರಲ್ಲಿ ಒಬ್ಬರು ಎಂದರೆ ತಪ್ಪಾಗುವುದಿಲ್ಲ, ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಗಳ ಸಾಲಿನಲ್ಲಿ ಕೋಹ್ಲಿ ಅವರ ಹೆಸರು ಸಹ ಕೇಳಿ ಬರುತ್ತದೆ. 10 ರಿಂದ 12 ವರ್ಷಗಳಿಂದ ಟೀಮ್ ಇಂಡಿಯಾಗೆ ಅದ್ಭುತವಾದ ಕೊಡುಗೆ ನೀಡಿದ್ದಾರೆ ಕಿಂಗ್ ಕೋಹ್ಲಿ. ಭಾರತದ ಬೇರೆ ಎಲ್ಲಾ ಕ್ರಿಕೆಟಿಗರಿಗಿಂತ ವಿರಾಟ್ ಕೋಹ್ಲಿ ಅವರಿಗೆ ಅತಿದೊಡ್ಡ ಫ್ಯಾನ್ ಬೇಸ್ ಸಹ ಇದೆ. ಇದೀಗ ವಿರಾಟ್ ಕೋಹ್ಲಿ ಅವರ ಬಗ್ಗೆ ಆಸ್ಟ್ರೇಲಿಯಾ ಆಟಗಾರ ರಿಕ್ಕಿ ಪಾಂಟಿಂಗ್ ಅವರು ಕೆಲವು ಮಾತುಗಳನ್ನಾಡಿದ್ದಾರೆ..
ವಿರಾಟ್ ಕೋಹ್ಲಿ ಅವರು ಈ ವರ್ಷ ಐಪಿಎಲ್ ನಲ್ಲಿ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡು, ಕಳಪೆ ಪ್ರದರ್ಶನ ನೀಡಿದರು. ಇದರಿಂದಾಗಿ ಕೆಲವರು ಕೋಹ್ಲಿ ಅವರನ್ನು ಟೀಕೆ ಮಾಡಿದರು. ಪ್ರಸ್ತುತ ಕೋಹ್ಲಿ ಅವರು ವಿಶ್ರಾಂತಿ ಪಡೆಯುಟ್ಟಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳಿಂದ ಕೋಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಕೋಹ್ಲಿ ಅವರ ಈ ಫಾರ್ಮ್ ಬಗ್ಗೆ ರಿಕ್ಕಿ ಪಾಂಟಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ, “ಕೆರಿಯರ್ ನಲ್ಲಿ ಪ್ರತಿಯೊಬ್ಬ ಆಟಗಾರನು ಸಹ ಈ ಫೇಸ್ ಅನ್ನು ನೋಡುತ್ತಾರೆ, ಟೀಮ್ ಇಂಡಿಯಾದಲ್ಲಿ ಕೋಹ್ಲಿ ಅವರ ಹೆಸರು ದೊಡ್ಡಮಟ್ಟದಲ್ಲಿದೆ, ಅವರ ಕೆರಿಯರ್ ನಲ್ಲಿ ಈಗಈ ಹಂತ ಬಂದಿದೆ. ಭಾರತದ ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೋಹ್ಲಿ ಅವರ ಹೆಸರು ಉನ್ನತ ಸ್ಥಾನದಲ್ಲಿದೆ. ಈ ಹಿಂದೆ ಕೋಹ್ಲಿ ಅವರು ಇಂತಹ ಫಾರ್ಮ್ ನಲ್ಲಿರಲಿಲ್ಲ.
ಎಲ್ಲಾ ಆಟಗಾರರು ಸಹ ಈ ರೀತಿಯ ದಿನವನ್ನು ನೋಡುತ್ತಾನೆ. ಕೋಹ್ಲಿ ಅವರು ಇದರ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಮತ್ತೆ ಕಂಬ್ಯಾಕ್ ಮಾಡುವ ಬಗ್ಗೆ ಒಂದು ನಿರ್ಧಾರ ಮಾಡಬೇಕು. ಈಗ ವಿರಾಟ್ ಅವರಿಗೆ ವಿಶ್ರಾಂತಿ ಬೇಕಿದೆ. ಈಗ ಅವರನ್ನು ಟೀಕೆ ಮಾಡುತ್ತಿರುವವರಿಗೆ ವಿರಾಟ್ ಅವರು ತಮ್ಮ ಪರಿಶ್ರಮದ ಮೂಲಕ ಉತ್ತರ ನೀಡಬೇಕು. ಆದರೆ ಈಗ ವಿರಾಟ್ ಕೋಹ್ಲಿ ಅವರು ತಮಗೆ ತಾವೇ ಮೋಸ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕೋಹ್ಲಿ ಅವರು ಇನ್ನು ಮುಂದೆ ಬರಬೇಕು..” ಎಂದು ಕೋಹ್ಲಿ ಅವರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ರಿಕ್ಕಿ ಪಾಂಟಿಂಗ್. ಇನ್ನು ಕೋಹ್ಲಿ ಅವರ ಅಭಿಮಾನಿಗಳು ಸಹ ಕಿಂಗ್ ಕೋಹ್ಲಿ ಅವರು ಮತ್ತೆ ಫಾರ್ಮ್ ಗೆ ಬರಬೇಕು ಎಂದು ಕಾಯುತ್ಗಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಕೋಹ್ಲಿ ಅವರು ಕಂಬ್ಯಾಕ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.
Comments are closed.