ಅಪ್ಪಿ ತಪ್ಪಿಯೂ ಕಾಲಿಗೆ ಬಿದ್ದರೂ ಕೂಡ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನ ಮಾಡಬೇಡಿ. ಯಾವ್ಯಾವು ಗೊತ್ತೇ??
ದಾನ ಎನ್ನುವುದಕ್ಕೆ ನಮ್ಮಲ್ಲಿ ವಿಶೇಷವಾದ ಮಹತ್ವ ಇದೆ. ಹಬ್ಬ ಹರಿದಿನಗಳು, ವಿಶೇಷವಾದ ದಿನಗಳು ಹಾಗೂ ಅನೇಕ ಸಂದರ್ಭಗಳಲ್ಲಿ ಜನರಿಗೆ ಉಪಯೋಗ ಆಗುವಂತಹ ವಸ್ತುಗಳನ್ನು ದಾನದ ರೂಪದಲ್ಲಿ ನೀಡುವ ಮೂಲಕ, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಬಯಸುತ್ತಾರೆ. ಆದರೆ ಏನೇ ಆದರೂ ಸರಿ, ಕೆಲವು ವಸ್ತುಗಳನ್ನು ಮಾತ್ರ ಯಾವುದೇ ಕಾರಣಕ್ಕೂ ದಾನ ಮಾಡಬಾರದು ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ಗೊತ್ತಾ? ತಿಳಿಸುತ್ತೇವೆ ನೋಡಿ..
- ಧಾರ್ಮಿಕ ಪುಸ್ತಕಗಳು :- ಧಾರ್ಮಿಕ ಪುಸ್ತಕಗಳಿಗೆ ವಿಶೇಷವಾದ ಶಕ್ತಿ ಮತ್ತು ಮಹತ್ವ ಇದೆ, ಅವುಗಳು ನಮ್ಮ ಜೀವನವನ್ನೇ ಬದಲಾಯಿಸುತ್ತವೆ. ಓದಲು ಆಸಕ್ತಿ ಇಲ್ಲದೆ ಇರುವವರಿಗೆ ಇಂಥಹ ಮಹತ್ವ ಇರುವ ಧಾರ್ಮಿಕ ಪುಸ್ತಕಗಳನ್ನು ದಾನವಾಗಿ ನೀಡಬೇಡಿ, ಅದರಿಂದಾಗಿ ಪಾಪ ಬರುತ್ತದೆ..
- ಉಳಿದ ಅನ್ನವನ್ನು ಯಾರಿಗೂ ದಾನವಾಗಿ ನೀಡಬೇಡಿ :- ಅನ್ನದಾನವನ್ನು ಅತ್ಯಂತ ಶ್ರೇಷ್ಠವಾದ ದಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅನ್ನ ದಾನವನ್ನು ಸಾಕಷ್ಟು ಜನರು ಬಹಳ ಪ್ರೀತಿಯಿಂದ ಮಾಡುತ್ತಾರೆ. ಆದರೆ ಅನ್ನದಾನ ಎಂದು ಉಳಿದಿರುವ ಅನ್ನವನ್ನು ಅಥವಾ ತಂಗಳು ಅನ್ನವನ್ನು ದಾನವಾಗಿ ನೀಡಬಾರದು. ಇದು ಅನ್ನಪೂರ್ಣೇಶ್ವರಿ ದೇವಿಗೆ ಮಾಡುವ ಅವಮಾನ ಎನ್ನಲಾಗುತ್ತದೆ, ಇದರಿಂದಾಗಿ ತಾಯಿಗೆ ಕೋಪ ಬರುತ್ತದೆ.
3.ಸಂಜೆ ಸಮಯದಲ್ಲಿ ಉಪ್ಪು ದಾನ ಮಾಡಬೇಡಿ :-ಸಂಜೆಯ ಸಮಯದಲ್ಲಿ ಉಪ್ಪು ದಾನ ಮಾಡುವುದರಿಂದ, ಆ ವ್ಯಕ್ತಿ ಬಡವನಾಗುತ್ತಾನೆ, ಇದೊಂದೇ ಅಲ್ಲದೆ, ಹುಣಸೆ ಹಣ್ಣು, ಉಪ್ಪು ಹಾಗೂ ಇನ್ನಿತರ ಹುಳಿಯ ಪದಾರ್ಥಗಳನ್ನು ದಾನ ಮಾಡಬಾರದು ಎನ್ನುತ್ತಾರೆ.
4.ಲಕ್ಷ್ಮೀದೇವಿಯ ವಿಗ್ರಹವನ್ನು ದಾನ ಮಾಡಬೇಡಿ :- ಯಾವುದೇ ಕಾರಣಕ್ಕೂ ಲಕ್ಷ್ಮೀದೇವಿಯ ಫೋಟೋ ಅಥವಾ ವಿಗ್ರಹವನ್ನು ದಾನ ಮಾಡಬೇಡಿ, ಇದರಿಂದ ನಿಮ್ಮ ಮನೆಯ ಲಕ್ಷ್ಮಿ ಮತ್ತೊಬ್ಬರ ಮನೆಗೆ ಹೋಗುತ್ತಾಳೆ, ಇದರಿಂದ ನಿಮಗೆ ಬಡತನ ಬರಬಹುದು. ಜೊತೆಗೆ ಲಕ್ಷ್ಮಿ ಮತ್ತು ಗಣೇಶ ಇರುವ ನಾಣ್ಯಗಳನ್ನು ಸಹ ಯಾರಿಗೂ ದಾನ ಮಾಡಬೇಡಿ. 5.ಮುರಿದಿರುವ ವಸ್ತುಗಳನ್ನು ದಾನ ಮಾಡಬೇಡಿ :- ಮುರಿದಿರುವ ಸ್ಟೀಲ್ ಪಾತ್ರೆಗಳು ಅಥವಾ ಕಬ್ಬಿಣದ ವಸ್ತುಗಳನ್ನು ಯಾರಿಗೂ ದಾನ ಮಾಡಬೇಡಿ, ಒಡೆದಿರುವ ವಸ್ತುಗಳನ್ನು ದಾನ ಮಾಡುವುದರಿಂದ ಶನಿ ದೇವರಿಗೆ ಕೋಪ ಬರುತ್ತದೆ. ಇದರಿಂದಾಗಿ ನಿಮಗೆ ಕಷ್ಟ ಎದುರಾಗಬಹುದು.
Comments are closed.