ಏರ್ಟೆಲ್ ಗೆ ಮತ್ತೊಮ್ಮೆ ಠಕ್ಕರ್ ನೀಡಿದ ಜಿಯೋ: ಕಡಿಮೆ ಬೆಲೆಗೆ ಪರಿಚಿಯ ಮಾಡಿದ ಪ್ಲಾನ್ ನಲ್ಲಿ ಏನೆಲ್ಲಾ ಲಾಭ ಇದ್ದಾವೆ ಗೊತ್ತೇ??
ಪ್ರಸ್ತುತ ಇರುವ ಟೆಲಿಕಾಂ ಕಂಪೆನಿಗಳಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ. ಗ್ರಾಹಕರಿಗೆ ಸರಿಹೊಂದುವಂತಹ ಪ್ಲಾನ್ ಗಳು ಹಾಗೂ ಹೈ ಸ್ಪೀಡ್ ಇಂಟರ್ನೆಟ್ ಕೊಡುವ ಮೂಲಕ ಜಿಯೋ ಸಂಸ್ಥೆ ಅಗ್ರಸ್ಥಾನದಲ್ಲಿದೆ. ಜಿಯೋ ಸಂಸ್ಥೆಗೆ ಒಳ್ಳೆಯ ಕಾಂಪಿಟೇಶನ್ ಕೊಡುತ್ತಿರುವುದು ಏರ್ಟೆಲ್ ಸಂಸ್ಥೆ. ಭಾರತಿ ಏರ್ಟೆಲ್ ಸಂಸ್ಥೆ ಸಹ ಒಳ್ಳೆಯ ಪ್ಲಾನ್ ಗಳನ್ನು ಗ್ರಹಕರಿಗಾಗಿ ತಂದಿದ್ದು, ಇದರಿಂದಾಗಿ ಏರ್ಟೆಲ್ ಯೂಸರ್ ಗಳಿಗೆ ಒಳ್ಳೆಯ ಪ್ಲಾನ್ ಗಳು ಸಿಗುತ್ತಿವೆ. ಆದರೆ ಈಗ ಏರ್ಟೆಲ್ ಟಕ್ಕರ್ ಕೊಡುವ ಸಲುವಾಗಿ ಜಿಯೋ ಸಂಸ್ಥೆ ಕೆಲವು ಹೊಸ ಪ್ಲಾನ್ ಗಳನ್ನು ಹೊರತಂದಿದ್ದು, 500 ರೂಪಾಯಿಗಿಂತ ಕಡಿಮೆ ಹಣಕ್ಕೆ ಇರುವ ಪ್ರೀಪೇಯ್ಡ್ ಪ್ಲಾನ್ ಗಳಿಂದ ನಿಮಗೆ ಹೆಚ್ಚಿನ ಪ್ರಯೋಜನ ಸಿಗಲಿದೆ..
ಜಿಯೋ ₹479 ರೂಪಾಯಿಯ ರೀಚಾರ್ಜ್ ಪ್ಲಾನ್ :- ಈ ಪ್ಲಾನ್ ನ ಮೊತ್ತವನ್ನು ನೋಡಿದರೆ, 500 ರೂಪಾಯಿಗಿಂತ ಕಡಿಮೆ ಹಣದ ಪ್ಲಾನ್ ಇದಾಗಿದೆ. ಇದರಲ್ಲಿ ಹೆಚ್ಚಿನ ಪ್ರಯೋಜನಗಳು ಸಹ ಸಿಗಲಿದೆ. ಈ ಜಿಯೋ ರೀಚಾರ್ಜ್ ನ ವ್ಯಾಲಿಡಿಟಿ ಅವಧಿ 56 ದಿನಗಳ ವರೆಗೆ ಇರುತ್ತದ್ದ, ಹಾಗೂ ಗ್ರಾಹಕರಿಗೆ ಪ್ರತಿದಿನ 1.5ಜಿಬಿ ಉಚಿತ ಡೇಟಾ ಸಿಗುತ್ತದೆ, ಒಟ್ಟಾರೆಯಾಗಿ 84ಜಿಬಿ ಡೇಟಾ ಸಿಗುತ್ತದೆ. ಜೊತೆಗೆ ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಉಚಿತ ಕರೆಗಳು ಸಹ ಸಿಗುತ್ತದೆ. ಜೊತೆಗೆ ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಸಹ ಸಿಗುತ್ತದೆ. ಇವುಗಳ ಜೊತೆಗೆ ಜಿಯೋ Cloud, ಜಿಯೋ ಸಿನಿಮಾ, ಜಿಯೋ ಟಿವಿ ಅಂತಹ ಓಟಿಟಿ ಪ್ರಯೋಜನಗಳು ಸಹ ಸಿಗುತ್ತವೆ.
ಇದಲ್ಲದೆ 56 ದಿನಗಳ ವ್ಯಾಲಿಡಿಟಿ ಇರುವ ಇನ್ನು ಕೆಲವು ಪ್ಲಾನ್ ಗಳು ಸಹ ಇದೆ, ₹533 ರೂಪಾಯಿಯ ರೀಚಾರ್ಜ್ ನಲ್ಲಿ, ಈ ಪ್ಲಾನ್ ನ ವ್ಯಾಲಿಡಿಟಿ 56 ದಿನಗಳ ವರೆಗೂ ಇರುತ್ತದೆ, ಇದರಲ್ಲಿ ಪ್ರತಿದಿಜ 2ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ, ಜೊತೆಗೆ ಎಲ್ಲಾ ನೆಟ್ವರ್ಕ್ ಗಳಿಗೂ ಉಚಿತ ಅನಿಯಮಿತ ಕರೆಗಳು, ಮತ್ತು ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಲಭ್ಯವಾಗುತ್ತದೆ. ಜೊತೆಗೆ ಜಿಯೋ ಅಪ್ಲಿಕೇಶನ್ ಗಳ ಉಪಯೋಗ ಸಹ ಸಿಗುತ್ತದೆ. ಇನ್ನೊಂದು ₹799 ರೂಪಾಯಿಯ ಪ್ಲಾನ್ ನಲ್ಲಿ, 56 ದಿನಗಳ ಅವಧಿಗೆ ಪ್ರತಿದಿನ 3ಜಿಬಿ ಉಚಿತ ಡೇಟಾ, ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು, ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಕರೆಗಳು, ಡಿಸ್ನಿ+ಹಾಟ್ ಸ್ಟಾರ್ ಚಂದಾದಾರಿಕೆ, ಸಹ ಸಿಗುತ್ತದೆ. ಇವುಗಳಲ್ಲಿ ನಿಮಗೆ ಸರಿಹೊಂದುವಂತಹ ಪ್ಲಾನ್ ಗಳನ್ನು ರೀಚಾರ್ಜ್ ಮಾಡಿಕೊಳ್ಳಿ.
Comments are closed.