Neer Dose Karnataka
Take a fresh look at your lifestyle.

ಭರಣಿ ನಕ್ಷತ್ರ ಪ್ರವೇಶ ಮಾಡಿದ ರಾಹು ಗ್ರಹ. ನಾಲ್ಕು ರಾಶಿಯವರಿಗೆ ಭರ್ಜರಿ ಅದೃಷ್ಟ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದುಬಂದಿರುವ ಹಾಗೆ, ರಾಹು ಮತ್ತು ಕೇತು ಎರಡು ಗ್ರಹಗಳು ಸಹ ಏಪ್ರಿಲ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡಿದ್ದಾರೆ. ಪ್ರಸ್ತುತ ರಾಹು ಮೇಷ ರಾಶಿಯಲ್ಲಿದ್ದಾನೆ, ಈ ರಾಶಿಯ ಅಧಿಪತಿ ಮಂಗಳ ಗ್ರಹ ಆಗಿದೆ. ಮೇಷ ರಾಶಿಯಲ್ಲಿ ಶುಕ್ರ ಸಹ ಇದ್ದಾನೆ, ಈ ಎರಡು ಗ್ರಹಗಳು ಜೊತೆಯಾಗಿರುವುದು ಸಂತೋಷ ಮತ್ತು ವೈಭವವನ್ನು ನೀಡುತ್ತದೆ. ಈ ಎರಡು ಗ್ರಹಗಳ ನಡುವೆ ಸ್ನೇಹ ಇದೆ. ಆದರೆ ಈಗ ರಾಹು ಗ್ರಹವು ಕೃತಿಕಾ ನಕ್ಷತ್ರವನ್ನು ಬಿಟ್ಟು, ಭರಣಿ ನಕ್ಷತ್ರಕ್ಕೆ ಪ್ರವೇಶ ಮಾಡಲಿದೆ. ಜೂನ್ 14ರಂದು, ಬೆಳಗ್ಗೆ 8:15 ಕ್ಕೆ ರಾಹು ಗ್ರಹವು ಭರಣಿ ನಕ್ಷತ್ರವನ್ನು ಪ್ರವೇಶಿಸಲಿದೆ. ಈ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳ ಮೇಲೆ ಅಮಂಗಳಕರ ಪರಿಣಾಮ ಸಹ ಬೀರಲಿದೆ. ಆದರೆ ಈ ಬದಲಾವಣೆಯಿಂದ ಒಳ್ಳೆಯ ಲಾಭ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ರಾಹುವು ತನ್ನ ಸ್ಥಾನ ಬದಲಾವಣೆ ಮಾಡುತ್ತಲಿರುವುದು ಮೇಷ ರಾಶಿಯವರಿಗೆ ಲಾಭ ತಂದು ಕೊಡಲಿದೆ. ಈ ಬದಲಾವಣೆಯು ಮೇಷ ರಾಶಿಯವರಿಗೆ ಹಣದ ಲಾಭ ತಂದುಕೊಡಲಿದೆ, ಜೊತೆಗೆ ಮಾಡುವ ಎಲ್ಲಾ ಕೆಲಸಗಳಲ್ಲು ಯಶಸ್ಸು ಸಿಗಲಿದೆ. ಬೇರೆಡೆ ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣವು ನಿಮ್ಮ ಕೈ ಸೇರುತ್ತದೆ. ಈ ನಕ್ಷತ್ರ ಬದಲಾವಣೆಯು ವೃತ್ತಿ ಮತ್ತು ವ್ಯವಹಾರ ಕ್ಷೇತ್ರಕ್ಕೆ ಒಳ್ಳೆಯದನ್ನು ಮಾಡುತ್ತದೆ.

ವೃಷಭ ರಾಶಿ :- ಈ ರಾಶಿಗೆ ಶುಕ್ರನು ಅಧಿಪತಿ ಆಗಿದ್ದಾನೆ. ರಾಹು ಭರಣಿ ನಕ್ಷತ್ರವನ್ನು ಪ್ರವೇಶ ಮಾಡುತ್ತಿದ್ದು, ಆ ನಕ್ಷತ್ರದ ಅಧಿಪತಿ ಸಹ ಶುಕ್ರನೆ ಆಗಿದ್ದಾನೆ, ಹಾಗಾಗಿ ಈ ಎರಡರ ಸ್ನೇಹದಿಂದ ವೃಷಭ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ಕಟಕ ರಾಶಿ :- ಈ ರಾಶಿಯವರಿಗೆ ರಾಹುವಿನ ಸ್ಥಾನ ಬದಲಾವಣೆಯಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಲಾಭ ಸಿಗುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಉತ್ತಮವಾದ ಫಲವಿದೆ.

ತುಲಾ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಫಲವನ್ನು ತಂದುಕೊಡುತ್ತದೆ. ಹೊಸ ವ್ಯವಹಾರ ಶುರುಮಾಡಲು ನೀವು ಬಯಸಿದ್ದರೆ, ಅದಕ್ಕಾಗಿ ಇದು ಒಳ್ಳೆಯ ಸಮಯ ಆಗಿದೆ. ಸಂತೋಷ ಮತ್ತು ಸಮೃದ್ಧಿ ನಿಮ್ಮನ್ನು ಅರಸಿ ಬರಲಿದ್ದು, ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತೀರಿ. ವೃತಿಯಲ್ಲಿ ಪ್ರೊಮೋಷನ್ ಸಿಗುತ್ತದೆ

Comments are closed.