ಚಾರ್ಲಿ ಸಿನೆಮಾ ನೋಡಿದ ಪ್ರೇಕ್ಷಕ ರಶ್ಮಿಕಾ ಗೆ ನಿಯತ್ತಿನ ಪಾಠ ಹೇಳಿಕೊಡಲು ಏನು ಮಾಡಬೇಕು ಎಂದ ಗೊತ್ತೆ??
ಸಧ್ಯಕ್ಕೆ ಎಲ್ಲೆಡೆ ಚಾರ್ಲಿ ಸಿನಿಮಾದೇ ಹವಾ, ರಕ್ಷಿತ್ ಶೆಟ್ಟಿ ಅವರ ಬಹಳ ಸಮಯದ ನಂತರ ತೆರೆ ಮೇಲೆ ಬಂದಿದ್ದು, ಚಾರ್ಲಿ ಸಿನಿಮಾ ಅವರಿಗೆ ಬಿಗ್ ಬ್ರೇಕ್ ನೀಡಿದೆ. ಭಾವನಾತ್ಮಕವಾಗಿ ಸಿನಿಪ್ರಿಯರು ಚಾರ್ಲಿ ಸಿನಿಮಾ ಕಥೆ ಜೊತೆಗೆ ಕನೆಕ್ಟ್ ಆಗಿದ್ದಾರೆ. ಒಂದು ಶ್ವಾನ ಮನುಷ್ಯನಿಗೆ ಎಷ್ಟು ಪ್ರೀತಿ ಕೊಡುತ್ತದೆ, ಒಬ್ಬ ಮನುಷ್ಯನ ಜೀವನವನ್ನು ಒಂದು ಶ್ವಾನ ಎಷ್ಟು ಬದಲಾಯಿಸುತ್ತದೆ ಎನ್ನುವುದನ್ನು ಅದ್ಭುತವಾಗಿ ತಿಳಿಸಿಕೊಟ್ಟಿರುವ ಸಿನಿಮಾ ಚಾರ್ಲಿ. ಚಾರ್ಲಿ ಸಿನಿಮಾ ಫೇಮಸ್ ಆಗುತ್ತಿದ್ದ ಹಾಗೆ ರಶ್ಮಿಕಾ ಮಂದಣ್ಣ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಅವರು ಧರ್ಮ ಪಾತ್ರದ ಮೂಲಕ ಅದ್ಭುತವಾಗಿ ತೆರೆಯಮೇಲೆ ಮಿಂಚಿದ್ದಾರೆ, ರಕ್ಷಿತ್ ಶೆಟ್ಟಿ ಅವರ ಅಭಿನಯಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಶ್ವಾನವನ್ನು ಇಷ್ಟಪಡುವವರು ಪದೇ ಪದೇ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಚಾರ್ಲಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಂಡಿದೆ. ಎಲ್ಲಾ ಭಾಷೆಯ ಸಿನಿಪ್ರಿಯರನ್ನು ಸೆಳೆದಿರುವ ಚಾರ್ಲಿ ಸಿನಿಮಾ, ಕಲೆಕ್ಷನ್ ಸಹ ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ. ಬಿಡುಗಡೆಯಾದ ಮೂರು ದಿನದಲ್ಲಿ 20 ಕೋಟಿ ಕಲೆಕ್ಷನ್ ಮಾಡಿದೆ ಚಾರ್ಲಿ. ರಕ್ಷಿತ್ ಶೆಟ್ಟಿ ಅವರ ಕೆರಿಯರ್ ನಲ್ಲಿ ಈ ಸಿನಿಮಾ ಅತಿ ದೊಡ್ಡ ಹಿಟ್ ಎನ್ನಿಸಿಕೊಂಡಿದೆ.
ಚಾರ್ಲಿ ಸಿನಿಮಾ ಬಿಡುಗಡೆ ಆದಮೇಲೆ ಶ್ವಾನದ ಮೇಲೆ ಎಲ್ಲರಿಗೂ ಇರುವ ಪ್ರೀತಿ ಹೆಚ್ಚಾಗಿದೆ. ಸಿನಿಮಾದಲ್ಲಿ ಉಳಿದ ಕಲಾವಿದರ ಅಭಿನಯಕ್ಕಿಂತ ಶ್ವಾನ ಚಾರ್ಲಿಯ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಚಾರ್ಲಿ ಸಿನಿಮಾ ಬಿಡುಗಡೆಯಾದ ಬಳಿಕ, ನಟಿ ರಶ್ಮಿಕಾ ಮಂದಣ್ಣ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತರಾವರಿ ಮೀಮ್ಸ್ ಮಾಡಿ ರಶ್ಮಿಕಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಥಿಯೇಟರ್ ಗೆ ಅಭಿಮಾನಿ ಒಬ್ಬ, ರಶ್ಮಿಕಾ ಮಂದಣ್ಣ ಅವರಿಗೆ ನಿಯತ್ತು ಕಲಿಸುವ ಬಗ್ಗೆ ಮಾತುಗಳನ್ನಾಡಿದ್ದು, ಆ ಮಾತುಗಳು ಈಗ ವೈರಲ್ ಆಗಿದೆ, ಸಿನಿಮಾ ನೋಡಿ ಬರುತ್ತಿದ್ದ ಹುಡುಗ, “ನಾನು ದುಡ್ಡು ಕೊಡ್ತೀನಿ, ರಶ್ಮಿಕಾ ಅವರನ್ನ ಕರೆದುಕೊಂಡು ಬಂದು ಸಿನಿಮಾ ತೋರಿಸಿ, ನಿಯತ್ತು ಅಂದ್ರೆ ಏನು ಅಂತ ಕಲಿತುಕೊಳ್ಳಲಿ..” ಎಂದು ಹೇಳಿದ್ದಾರೆ. ಹುಡುಗ ಹೇಳಿರುವ ಆ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Comments are closed.