ಕೇವಲ 50 ಸಾವಿರದ ಒಳಗಡೆ ಸಿಗುವ ಅತ್ಯುತ್ತಮ ಲ್ಯಾಪ್ಟಾಪ್ ಗಳು ಯಾವ್ಯಾವು ಗೊತ್ತೇ?
ಇತ್ತೀಚಿನ ದಿನಗಳಲ್ಲಿ ಜನರಿಗೆ ಅತ್ಯಗತ್ಯ ಎನ್ನಿಸುವಂತಹ ವಸ್ತುಗಳಲ್ಲಿ ಒಂದು ಲ್ಯಾಪ್ ಟಾಪ್, ಶಿಕ್ಷಣಕ್ಕೆ, ಮನೆಯಿಂದಲೇ ಕೆಲಸ ಮಾಡುವವರಿಗೆ ಲ್ಯಾಪ್ ಟಾಪ್ ಬಹಳ ಅಗತ್ಯ, ಹಾಗಾಗಿ ಲ್ಯಾಪ್ ಟಾಪ್ ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ, ಲ್ಯಾಪ್ ಟಾಪ್ ಖರೀದಿ ಮಾಡುವಾಗ ಮುಖ್ಯವಾಗಿ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಲ್ಯಾಪ್ ಟಾಪ್ ನ ಬೆಲೆ, ಬ್ಯಾಟರಿ ಸಾಮರ್ಥ್ಯ, ಲ್ಯಾಪ್ ಟಾಪ್ ಮಾಡೆಲ್ ಇದೆಲ್ಲವನ್ನು ಸಹ ನೋಡಬೇಕಾಗುತ್ತದೆ. ಆನ್ ಲೈನ್ ಮೂಲಕ ಅಥವಾ ಹೊರಗಡೆ ನೀವು ಲ್ಯಾಪ್ ಟಾಪ್ ಖರೀದಿ ಮಾಡಬಹುದು, ಹಾಗಿದ್ದರೆ 50,000 ರೂಪಾಯಿ ಒಳಗೆ ನೀವು ಖರೀದಿ ಮಾಡಬಹುದಾದ ಲ್ಯಾಪ್ ಟಾಪ್ ಗಳ ಬಗ್ಗೆ ಇಂದು ಮಾಹಿತಿ ನೀಡುತ್ತೇವೆ..
ಆಸುಸ್ ವಿವೋಬುಕ್ S510UN-BQ217T :- ಈ ಲ್ಯಾಪ್ ಟಾಪ್ ನ ಬೆಲೆ ₹49,990 ರೂಪಾಯಿಗಳು. ಈ ಲ್ಯಾಪ್ ಟಾಪ್ ನಲ್ಲಿ 15.60 ಇಂಚ್ ಡಿಸ್ಪ್ಲೇ ಇದೆ, ಇದರಲ್ಲಿ 1.6GHz ವೇಗ ಇರುವ ಇಂಟೆಲ್ ಕೋರ್ i5 ಪ್ರೊಸೆಸರ್ ಇದ್ದು, ವಿಂಡೋಸ್ 10 ಪ್ರೋಗ್ರಾಮ್ ಹೊಂದಿರುತ್ತದೆ. ಈ ಲ್ಯಾಪ್ ಟಾಪ್ ನಲ್ಲಿ 8GB RAM ಮತ್ತು 1TB HDD ಸ್ಟೋರೇಜ್ ಹೊಂದಿದೆ . MX 150 ಗ್ರಾಫಿಕ್ಸ್ ಸಹ ಈ ಲ್ಯಾಪ್ ಟಾಪ್ ನಲ್ಲಿದೆ.
HP 15-DA0070TX :- ಈ ಲ್ಯಾಪ್ ಟಾಪ್ ಕೂಡ ಒಂದು ಉತ್ತಮವಾದ ಆಯ್ಕೆ ಆಗಿದೆ, ಇದರಲ್ಲಿ 15.60 ಇಂಚ್ ಡಿಸ್ಪ್ಲೇ ಇದ್ದು, ವಿಂಡೋಸ್ 10 ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಇಂಟೆಲ್ ಕೋರ್ i3 ಪ್ರೊಸೆಸರ್ ಹೊಂದಿದ್ದು, 8GB RAM ಮತ್ತು 1TB HDD ಸ್ಟೋರೇಜ್ ಹೊಂದಿದೆ. ಜೊತೆಗೆ 13ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದರ ಬೆಲೆ ₹47,279 ರೂಪಾಯಿಗಳು.
ಡೆಲ್15 (2021) ಲ್ಯಾಪ್ ಟಾಪ್ i3-1115G4 :- ಈ ಲ್ಯಾಪ್ ಟಾಪ್ ನಲ್ಲಿ 15.5 ಇಂಚ್ ಡಿಸ್ಪ್ಲೇ ಇದ್ದು, 8GB RAM ಹಾಗೂ 256GB SSD ಸ್ಟೋರೇಜ್ ಇದರಲ್ಲಿದೆ. ಈ ಲ್ಯಾಪ್ ಟಾಪ್ ನಲ್ಲಿ ಇಂಟೆಲ್ ಯೂ.ಹೆಚ್.ಡಿ ಗ್ರಾಫಿಕ್ಸ್ ಸಹ ಇದೆ. ಈ ಲ್ಯಾಪ್ ಟಾಪ್ ನ ಬೆಲೆ ₹41,250 ರೂಪಾಯಿ ಆಗಿದೆ.
ಹೆಚ್.ಪಿ ಕ್ರೋಮ ಬುಕ್ 13 ಇಂಚ್ :- ಇದು ಟಚ್ ಸ್ಕ್ರೀನ್ ಲ್ಯಾಪ್ ಟಾಪ್ ಆಗಿದ್ದು, ನಿಮಗೆ ಒಳ್ಳೆಯ ಅನುಭವ ಕೊಡುತ್ತದೆ. 14 ಇಂಚ್ ಡಿಸ್ಪ್ಲೇ ಹಾಗೂ ಹಗುರವಾಗಿರುತ್ತದೆ. ಇದರಲ್ಲಿ ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್ ಹೊಂದಿದೆ, ಹಾಗೂ 4GB RAM ಹಾಗೂ 4MB ಸ್ಟೋರೇಜ್ ಇದರಲ್ಲಿದೆ. ಇದನ್ನು ಸುಲಭವಾಗಿ ಕ್ಯಾರಿ ಮಾಡಬಹುದು. ಈ ಲ್ಯಾಪ್ ಟಾಪ್ ನ ಬೆಲೆ ₹23,490 ರೂಪಾಯಿ ಆಗಿದೆ.
ಆಸುಸ್ ವಿವೋಬುಕ್ 14 (2020) ಫುಲ್ ಹೆಚ್.ಡಿ ಲ್ಯಾಪ್ ಟಾಪ್ :- ಈ ಲ್ಯಾಪ್ ಟಾಪ್ ನಲ್ಲಿ 14 ಇಂಚ್ ಗಳ ಡಿಸ್ಪ್ಲೇ ಇದೆ, ಇದನ್ನು ಸುಲಭವಾಗಿ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. ಈ ಲ್ಯಾಪ್ ಟಾಪ್ ನಲ್ಲಿ 4GB RAM ಮತ್ತು 1TB HDD ಸ್ಟೋರೇಜ್ ಹೊಂದಿದೆ. 6 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ, ಈಗ ಈ ಲ್ಯಾಪ್ ಟಾಪ್ ನ ಬೆಲೆ ₹30,990 ರೂಪಾಯಿ ಆಗಿದೆ.
Comments are closed.