ಪಾರು ಧಾರಾವಾಹಿಯಲ್ಲಿ ಅದ್ಭುತ ನಟನೆ ಮೂಲಕ ಮನಗೆದ್ದಿರುವ ವಿನಯ್ ಪ್ರಸಾದ್ ರವರ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??
ಜೀ ಕನ್ನಡ ವಾಹಿನಿಯಲ್ಲಿ ಎರಡು ವರ್ಷದ ಹಿಂದೆ ಹಲವಾರು ಹೊಸ ಧಾರಾವಾಹಿಗಳು ಶುರುವಾದವು. ಅವುಗಳಲ್ಲಿ ಪ್ರಮುಖವಾದ ಧಾರಾವಾಹಿಗಳಲ್ಲಿ ಒಂದು ಪಾರು. ಅತ್ಯುತ್ತಮ ಕಥಾಹಂದರ ಇರುವ ಪಾರು ಧಾರಾವಾಹಿ ಕನ್ನಡ ಕಿರುತೆರೆಯ ಟಿ.ಆರ್.ಪಿ. ರೇಟಿಂಗ್ ನಲ್ಲಿ ಸಹ ಅಗ್ರಸ್ಥಾನ ಗಳಿಸಿದೆ. ಜೀಕನ್ನಡ ವಾಹಿನಿಯ ಗಟ್ಟಿಮೇಳ ಮತ್ತು ಜೊತೆ ಜೊತೆಯಲಿ ಧಾರಾವಾಹಿಯ ಹಾಗೆ ಪಾರೂ ಧಾರಾವಾಹಿ ಕೂಡ ಕರ್ನಾಟಕಾದ್ಯಂತ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಪಾರೂ ಧಾರಾವಾಹಿ ಒಂದು ಹಳ್ಳಿ ಹುಡುಗಿಯ ಕಥೆ, ಅಖಿಲಾಂಡೇಶ್ವರಿ ಅವರ ಮನೆಗೆ ಮನೆಕೆಲಸದವಳಾಗಿ ಬರುವ ಪಾರುವಿನ ಕಥೆ.
ಹಿರಿಯ ಕಲಾವಿದೆ ವಿನಯ ಪ್ರಸಾದ್ ಅವರ ಅಭಿನಯ, ಹಾಗೂ ಇತರ ಕಲಾವಿದರ ಅಭಿನಯ ಎಲ್ಲಾ ವೀಕ್ಷಕರ ಮನಗೆದ್ದಿದೆ. ವಿನಯ ಪ್ರಸಾದ್ ಅವರು ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಬಹಳ ವರ್ಷಗಳಿಂದ ಸಕ್ರಿಯರಾಗಿರುವ ನಟಿ. 30 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ವಿನಯ ಪ್ರಸಾದ್ ಅವರು ಹಲವು ಸದಭಿರುಚಿ ಪಾತ್ರಗಳ ಮೂಲಕ ಕನ್ನಡ ಸಿನಿಪ್ರಿಯರಿಗೆ ಬಹಳ ಹತ್ತಿರವಾಗಿದ್ದಾರೆ. ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿರುವ ವಿನಯ ಪ್ರಸಾದ್ ಅವರು, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮಲಯಾಳಂ ಭಾಷೆಗಳಲ್ಲಿ ಸಹ ನಟಿಸಿ, ಅಲ್ಲಿನ ಜನರಿಗೂ ಬಹಳ ಪರಿಚಿತರಾಗಿದ್ದಾರೆ. ಮಲಯಾಳಂ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಇವರಿಗೆ ಬಹಳ ಬೇಡಿಕೆ ಇದೆ.
ಕನ್ನಡ ಕಿರುತೆರೆಗೆ ವಿನಯ ಪ್ರಸಾದ್ ಅವರು ಪಾರು ಧಾರವಾಹಿ ಮೂಲಕ ಬಂದಿದ್ದು, ಅಖಿಲಾಂಡೇಶ್ವರಿ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. ಪಾತ್ರಕ್ಕೆ ತಕ್ಕ ಗತ್ತು, ಗಾಂಭೀರ್ಯ ಎಲ್ಲವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ವಿನಯ ಪ್ರಸಾದ್ ಅವರು ತಮ್ಮ ಪಾತ್ರಕ್ಕೆ ತಕ್ಕ ಹಾಗೆ, ದುಬಾರಿ ಐಷಾರಾಮಿ ಸೀರೆಗಳು, ಒಡವೆಗಳನ್ನು ಧರಿಸಿ, ಅದಕ್ಕೆ ತಕ್ಕ ಹಾಗೆ ಮೇಕಪ್ ಇದೆಲ್ಲವನ್ನು ನೋಡಲೆಂದೇ ಅಭಿಮಾನಿಗಳು ಪಾರು ಧಾರವಾಹಿ ನೋಡುವುದು ಸಹ ಉಂಟು. ಬೆಳ್ಳಿತೆರೆಯಲ್ಲಿ ಬಹಳ ಬೇಡಿಕೆ ಇರುವ ನಟಿ ಆಗಿರುವ ಕಾರಣ, ವಿನಯ ಪ್ರಸಾದ್ ಅವರಿಗೆ ದುಬಾರಿ ಸಂಭಾವನೆಯನ್ನೇ ನೀಡುತ್ತಾರೆ ಎನ್ನುವ ಮಾಹಿತಿ ಸಿಕ್ಕಿದ್ದು, ಪಾರು ಧಾರವಾಹಿಯಲ್ಲಿ ಎಲ್ಲರಿಗಿಂತ ಹೆಚ್ಚಿನ ಸಂಭಾವನೆಯನ್ನು ವಿನಯ ಪ್ರಸಾದ್ ಅವರಿಗೆ ನೀಡಲಾಗುತ್ತಿದೆ ಎನ್ನುವ ವಿಚಾರ ತಿಳಿದು ಬಂದಿದ್ದು, ಒಂದು ಎಪಿಸೋಡ್ ಬಗೆ 45 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.
Comments are closed.