ದಿನೇಶ್ ಅಲ್ಲ, ಭಾರತ ತಂಡಕ್ಕೆ ವಿಶ್ವಕಪ್ ನಲ್ಲಿ ಈ ಆರ್ಸಿಬಿ ಆಟಗಾರ ಇರಲೇಬೇಕು ಎಂದ ಇಫ್ರಾನ್ ಪಠಾಣ್. ಯಾರಂತೆ ಗೊತ್ತೇ??
ಆರ್.ಸಿ.ಬಿ ತಂಡದ ಚಾಣಾಕ್ಷ ಬೌಲರ್ ಹರ್ಷಲ್ ಪಟೇಲ್ ಅವರು ಅತ್ಯುತ್ತಮವಾದ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ. ಈಗಾಗಲೇ ನಾವೆಲ್ಲರೂ ನೋಡಿರುವ ಹಾಗೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಈ ವರ್ಷದ ಐಪಿಎಲ್ ಬಳಿಕ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಇವರೆಲ್ಲರೂ ಸಹ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿ, ಸೌತ್ ಆಫ್ರಿಕಾ ವರ್ಸಸ್ ಭಾರತದ ಸರಣಿ ಪಂದ್ಯಗಳಲ್ಲಿ ಮಿಂಚುತ್ತಿದ್ದಾರೆ.
ಹರ್ಷಲ್ ಪಟೇಲ್ ಅವರು ಸಹ ಐಪಿಎಲ್ ನಲ್ಲಿ ಮಾತ್ರವಲ್ಲದೆ, ಭಾರತ ವರ್ಸಸ್ ಸೌತ್ ಆಫ್ರಿಕಾ ಪಂದ್ಯಗಳಲ್ಲಿ ಸಹ ಅತ್ಯುತ್ತಮವಾದ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ವಿಶಾಖಪಟ್ಟಣದಲ್ಲಿ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ ಮೂರನೇ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರು ಅತ್ಯದ್ಭುತವಾದ ಪ್ರದರ್ಶನ ನೀಡಿದರು, 4 ಓವರ್ ಗಳಲ್ಲಿ ಕೇವಲ 26 ರನ್ ಗಳನ್ನು ನೀಡಿ, 4 ವಿಕೆಟ್ಸ್ ಗಳನ್ನು ತೆಗೆದರು, ಹರ್ಷಲ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನವು, 180 ರನ್ ಗಳ ಟಾರ್ಗೆಟ್ ಚೇಜ್ ಮಾಡುತ್ತಿದ್ದ, ಸೌತ್ ಆಫ್ರಿಕಾ ತಂಡ, 131 ಕ್ಕೆ ಆಲ್ ಔಟ್ ಆಗಿ, 48 ರನ್ ಗಳ ಗೆಲುವು ಭಾರತಕ್ಕೆ ಸಿಗುವ ಹಾಗೆ ಆಯಿತು.
ಇದರಿಂದ ತಂಡದ ಗೆಲುವಿಗೆ ಹರ್ಷಲ್ ಪಟೇಲ್ ಅವರ ಪಾತ್ರ ಪ್ರಮುಖವಾಗಿದೆ ಎನ್ನುವುದು ಸಾಬೀತಾಗಿದ್ದು, ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ಇಫ್ರಾನ್ ಪಠಾಣ್ ಅವರು ಹರ್ಷಲ್ ಪಟೇಲ್ ಅವರ ಬಗ್ಗೆ ಮಾತನಾಡಿದ್ದಾರೆ, “ಬೌಲರ್ ಆಗಿ ಹಾಗೂ ಕ್ರಿಕೆಟರ್ ಆಗಿ ಹರ್ಷಲ್ ಪಟೇಲ್ ಅವರು ತಮಗೆ ಸಿಕ್ಕ ಅವಕಾಶಗಳನ್ನು ಪೂರ್ತಿಯಾಗಿ ಗರಿಷ್ಟವಾಗಿ ಬಳಸಿಕೊಂಡಿದ್ದಾರೆ. ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ. ಈ ರೀತಿಯ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್ ನಲ್ಲಿ ಅವಕಾಶ ಸಿಗುವ ಹಾದಿಯನ್ನು ಸುಗಮಗೊಳಿಸಿಕೊಂಡಿದ್ದಾರೆ, ತಾವು ಆಡುತ್ತಿರುವ ಫ್ರಾಂಚೈಸಿ ಪರವಾಗಿ ಮತ್ತು ಭಾರತ ತಂಡದ ಪರವಾಗಿ, ಹರ್ಷಲ್ ಪಟೇಲ್ ಅವರು ಒಂದು ವರ್ಷದಿಂದ ಉತ್ತಮವಾದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ..” ಎಂದು ಹರ್ಷಲ್ ಪಟೇಲ್ ಅವರ ಪರವಾಗಿ ಮಾತನಾಡಿದ್ದಾರೆ ಇಫ್ರಾನ್ ಪಠಾಣ್.
Comments are closed.