Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ನಾಯಕತ್ವ ಮತ್ತೆ ಚೇಂಜ್. ಐರ್ಲೆಂಡ್ ವಿರುದ್ದದ ಸರಣಿಗೆ ಭಾರತ ತಂಡ ಪ್ರಕಟ, ಸ್ಥಾನ ಪಡೆದವರು ಯಾರ್ಯಾರು ಗೊತ್ತೇ??

38

ಭಾರತ ಕ್ರಿಕೆಟ್ ತಂಡವು ಪ್ರಸ್ತುತ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಆಡುತ್ತಿದೆ, ಈವರೆಗೂ ಮೂರು ಪಂದ್ಯಗಳು ನಡೆದಿದ್ದು, ಅದರಲ್ಲಿ ಒಂದು ಪಂದ್ಯವನ್ನು ಭಾರತ ತಂಡ ಗೆದ್ದಿದ್ದು, ಎರಡು ಪಂದ್ಯಗಳನ್ನು ಸೌತ್ ಆಫ್ರಿಕಾ ತಂಡ ಗೆದ್ದಿದೆ. ಇದೀಗ ಈ ತಿಂಗಳ ಕೊನೆಯಲ್ಲಿ ಶುರುವಾಗುವ ಐರ್ಲೆಂಡ್ ತಂಡದ ವಿರುದ್ಧದ ಸರಣಿ ಪಂದ್ಯಗಳಿಗೆ, ಆಟಗಾರರನ್ನು ಆಯ್ಕೆ ಮಾಡಿ ಬಿಸಿಸಿಐ ಬಿಡುಗಡೆ ಮಾಡಿದೆ. ಈ ಬಾರಿ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರಿಗೆ ನೀಡಲಾಗಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಅವರು ಸೌತ್ ಆಫ್ರಿಕಾದ ಸರಣಿ ಪಂದ್ಯಗಳಲ್ಲಿ ವೈಸ್ ಕ್ಯಾಪ್ಟನ್ ಆಗಿದ್ದಾರೆ..

ಇದೀಗ ಹಾರ್ದಿಕ್ ಪಾಂಡ್ಯ ಅವರಿಗೆ ಭಾರತ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲು ಅವಕಾಶ ಸಿಕ್ಕಿದೆ ಐಪಿಎಲ್ ಕ್5ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿ, ಪರಿಶ್ರಮದಿಂದ ಉತ್ತಮ ಪ್ರದರ್ಶನದಿಂದ ಗುಜರಾತ್ ತಂಡದ ಗೆಲುವಿಗೆ ಕಾರಣವಾದರು. ಹಾಗಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಈ ಸರಣಿ ಪಂದ್ಯಗಳ ಕ್ಯಾಪ್ಟನ್ ಆಗಿ ಅವಕಾಶ ಸಿಕ್ಕಿದೆ. ಇನ್ನು ವೇಗಿ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೆ ವೈಸ್ ಕ್ಯಾಪ್ಟನ್ ಸ್ಥಾನ ಸಿಕ್ಕಿದೆ. ಜೊತೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಬೌಲರ್ ಆಗಿ ಅದ್ಭುತವಾದ ಪ್ರದರ್ಶನ ನೀಡಿದ, ರಾಹುಲ್ ತ್ರಿಪಾಠಿ ಅವರಿಗೆ ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡುವ ಸ್ಥಾನ ಸಿಕ್ಕಿದೆ. ಇಂಗ್ಲೆಂಡ್ ಸರಣಿ ಪಂದ್ಯಗಳ ತಂಡದಲ್ಲಿ ಇರುವ ಆಟಗಾರರು ಐರ್ಲೆಂಡ್ ಪಂದ್ಯಗಳಲ್ಲಿ ಇರುವುದಿಲ್ಲ ಆ ಸಮಯದಲ್ಲಿ ಇವರೆಲ್ಲರೂ ಬಾಸ್ಟನ್ ನಲ್ಲಿ ಎಡ್ಜ್ ಬಾಸ್ಟನ್ ನಲ್ಲಿ ಪಂದ್ಯಗಳ ತಯಾರಿ ನಡೆಸುತ್ತಿರುತ್ತಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಇನ್ನು ಶ್ರೇಯಸ್ ಅಯ್ಯರ್ ಅವರು ಹಾಗೂ ರಿಷಬ್ ಪಂತ್ ಅವರು ಸಹ ಈ ಸರಣಿಯಲ್ಲಿ ಭಾಗಿಯಾಗುವುದಿಲ್ಲ, ಆದರೆ ತಂಡದ ಜೊತೆಗೆ ಇರುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇವರಿಬ್ಬರ ಸ್ಥಾನ ತುಂಬಲು ರಾಹುಲ್ ತ್ರಿಪಾಠಿ ಮತ್ತು ಸಂಜು ಸ್ಯಾಮ್ಸನ್ ಎಂಟ್ರಿ ಕೊಟ್ಟಿದ್ದಾರೆ. ರಾಜಸ್ತಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿ ಒಳ್ಳೆಯ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ ಅವರು ಸಹ ಭಾರತ ತಂಡಕ್ಕೆ ಮರಳಿದ್ದಾರೆ. ಐರ್ಲೆಂಡ್ ಪಂದ್ಯಕ್ಕೆ ಭಾರತ ತಂಡದಲ್ಲಿ, ಹಾರ್ಧಿಕ್ ಪಾಂಡ್ಯ (ಕ್ಯಾಪ್ಟನ್), ಭುವನೇಶ್ವರ್ ಕುಮಾರ್ (ವೈಸ್ ಕ್ಯಾಪ್ಟನ್), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜವೆಂದ್ರ ಚಾಹಲ್, ಅಕ್ಸರ್ ಪಟೇಲ್, ಬಿಶ್ನೋಯ್, ಹರ್ಷಲ್ ಪಟೇಲ್, ಆವೇಶ್ ಖಾನ್ ಮತ್ತು ಅರ್ಷದೀಪ್ ಸಿಂಗ್ ಇದ್ದಾರೆ.

Leave A Reply

Your email address will not be published.