ಈ ರೀತಿಯ ಸಂಗಾತಿ ಪಡೆದರೇ ದುರದೃಷ್ಟವು ಕೂಡ ಅದೃಷ್ಟವಾಗಿ ಬದಲಾಗುತ್ತದೆ, ಒಬ್ಬರ ಸಂಗಾತಿ ಹೇಗಿರಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ’. ಈ ಹಾಡು ನಿಮಗೆ ಹೊಸತೆನಲ್ಲ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಇರುತ್ತಾರೆ ಎಂಬ ಮಾತು ಕೂಡ ಬಹಳ ಹಳೆಯದು. ಹಾಗೆಯೇ ವಾಸ್ತವ ಕೂಡ. ಮನೆಯಲ್ಲಿ ಒಬ್ಬ ಮಹಿಳೆಯ ಸರಿಯಾಗಿದೆ ಆ ಮನೆ ಸಂಪೂರ್ಣ ಸುಖ ಶಾಂತಿ ಸಮೃದ್ಧಿಯಿಂದ ಕೂಡಿರುತ್ತದೆ. ಪುರುಷನ ಆರ್ಥಿಕ ಅಭಿವೃದ್ಧಿ ಕೂಡ, ಆರೋಗ್ಯ ಅಭಿವೃದ್ಧಿ ಕೂಡ ಮಹಿಳೆಯ ವಿಶಿಷ್ಟ ಗುಣಗಳಿಂದಲೇ ಆಗುತ್ತದೆ. ಯಾಕೆಂದರೆ ಮನೆಯಲ್ಲಿ ಒಬ್ಬ ಸ್ತ್ರೀ ಮನೆಯನ್ನು ತೂಗಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದುತ್ತಾರೆ ಒಂದು ಮನೆಯ ಉದ್ದಾರಕ್ಕೆ ಬೇರೆ ಏನು ಬೇಕು? ಇದನ್ನೇ ಚಾಣಕ್ಯ ತನ್ನ ನೀತಿಯಲ್ಲಿ ಕೂಡ ವಿವರಿಸಿ ದ್ದಾನೆ.
ಅರ್ಥಶಾಸ್ತ್ರಜ್ಞ ಚಾಣಕ್ಯ ಒಂದು ಕುಟುಂಬದ ಶ್ರೇಯೋಭಿವೃದ್ಧಿಗೆ ಪತ್ನಿಯಲ್ಲಿ ಇರಬೇಕಾದ ವಿಶಿಷ್ಟ ಗುಣಗಳ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಅವುಗಳನ್ನು ನೋಡುವುದಾದರೆ, ಮೊದಲನೇದಾಗಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿನಂತೆ ಮಹಿಳೆ ಧರ್ಮಕ್ಕೆ ಬೆಲೆ ಕೊಡುವಂತ ಆಗಿರಬೇಕು. ಯಾವಾಗಲೂ ಧರ್ಮದ ಹಾದಿಯಲ್ಲಿ ನಡೆಯುವ ಮಹಿಳೆ ಯಾವುದೇ ಕಾರಣಕ್ಕೂ ಹಾನಿಯನ್ನು ಮಾಡಲಾರಳು. ಇಂಥವರಿಂದ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತವೆ.
ತಾಳ್ಮೆಯ ವರ್ತನೆ. ಮಹಿಳೆಯನ್ನು ಸಹನಾಮೂರ್ತಿ ಎಂದೇ ಕರೆಯಲಾಗುತ್ತದೆ. ಮಹಿಳೆಗೆ ಇರುವಷ್ಟು ಸಹನೆ ತಾಳ್ಮೆ ಪುರುಷರಲ್ಲಿ ಇರುವುದಿಲ್ಲ. ಆಕೆಯಲ್ಲಿ ಈ ತಾಳ್ಮೆ ಇದ್ದರೆ ವಿಚಾರಮಾಡುವ ಶಕ್ತಿಯು ಹೆಚ್ಚಾಗಿರುತ್ತದೆ. ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರುತ್ತವೆ. ಹಾಗಾಗಿ ಆಕೆಯ ತಾಳ್ಮೆ ಸಹನೆಯೆ ಮನೆಗೆ ಶ್ರೀರಕ್ಷೆ ಆಗಿರುತ್ತದೆ.
ಮಾತು ಮಧುರವಾಗಿರಬೇಕು. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬಂತೆ ನಾವು ಆಡಿದ ಮಾತು ಯಾವುದೇ ಕಾರಣಕ್ಕೂ ಬೇರೆಯವರ ನೋಯಿಸಬಾರದು. ಜೊತೆಗೆ ನಮ್ಮ ಮಾತಿನಿಂದ ಜನರು ನಮಗೆ ಬೆಲೆ ಕೊಡುವಂತಿರಬೇಕು. ನಮ್ಮಲ್ಲಿಯ ಪ್ರೀತಿತುಂಬಿದ ಮಾತು ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. ಮಾತು ಮಧುರ ವಾಗಿದ್ದರೆ ವಿಚಾರಶಕ್ತಿ ಚಾಣಾಕ್ಷತೆಯಿಂದ ಕೂಡಿರುತ್ತದೆ ಎನ್ನುತ್ತಾನೆ ಚಾಣಕ್ಯ. ಸಹಿಷ್ಣುತೆ. ಮಹಿಳೆಯ ಸಹನಾ ಧರಿತ್ರಿ. ಆಕೆಯಲ್ಲಿರುವ ಸಹಿಷ್ಣುತಾ ಭಾವ ಎಲ್ಲರನ್ನೂ ಉತ್ತಮ ಮಾರ್ಗದಲ್ಲಿ ಸಾಗುವಂತೆ ಮಾಡುತ್ತದೆ. ಸಹಿಷ್ಣುತೆ, ಇದ್ದರೆ ಬುದ್ಧಿಮತ್ತೆ ಚುರುಕಾಗಿರುತ್ತದೆ. ಚಾಣಕ್ಯನ ನೀತಿಯ ಪ್ರಕಾರ ಎಲ್ಲಾ ಗುಣಗಳನ್ನು ಹೊಂದಿರುವ ಮಹಿಳೆ, ಮನೆಗೆ ಆಧಾರ ಸ್ತಂಭವಾಗಿ ನಿಲ್ಲುತ್ತಾಳೆ. ಪುರುಷನ ಯಶಸ್ಸಿಗೆ ಕಾರಣವಾಗುತ್ತವೆ ಹಾಗೂ ಅದೃಷ್ಟವನ್ನು ತರುತ್ತಾಳೆ.
Comments are closed.