ಮುಂದಿನ ಐಪಿಎಲ್ ನಲ್ಲಿ ನಡೆಯುತ್ತಿವೆ ಮಹತ್ವದ ಬದಲಾವಣೆ: ಗೆದ್ದ ತಂಡಕ್ಕೆ ಸಿಗುವ ಮೊತ್ತ ಎಷ್ಟು ಗೊತ್ತೇ??
ಭಾರತದಲ್ಲಿ ಐಪಿಎಲ್ ಕ್ರೇಜ್ ಹೇಗಿರುತ್ತದೆ ಎಂದು ನಮಗೆಲ್ಲ ಈಗಾಗಲೇ ಗೊತ್ತಿದೆ. ಐಪಿಎಲ್ ನಲ್ಲಿ ಪಂದ್ಯಗಳು ಅವುಗಳ ಕ್ರೇಜ್ ಜೊತೆಗೆ, ಐಪಿಎಲ್ ಇಂದಾಗಿ ಬಿಸಿಸಿಐ ಮತ್ತು ಫ್ರಾಂಚೈಸಿ ಮಾಲೀಕರು ಪಡೆಯುವ ಹಣ ಸಹ ಎಲ್ಲರನ್ನು ಅಚ್ಚರಿ ಗೊಳಿಸುವುದು ಗ್ಯಾರಂಟಿ. ಮುಂದಿನ ವರ್ಷ ಅಂದರೆ 2023ರ ಐಪಿಎಲ್ ನ ನೇರಪ್ರಸಾರ ಮತ್ತು ಮಾಧ್ಯಮಗಳ ಹಕ್ಕುಗಳು ಈಗಾಗಲೇ ಭರ್ಜರಿಯಾದ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಒಟ್ಟು 5 ವರ್ಷಗಳ ನೇರ ಪ್ರಸಾರಕ್ಕೆ ಹಕ್ಕುಗಳು ಮಾರಾಟವಾಗಿದ್ದು, ಬರೋಬ್ಬರಿ ₹48,390 ಕೋಟಿ ರೂಪಾಯಿಗೆ ಐಪಿಎಲ್ ನೇರಪ್ರಸಾರದ ಹಕ್ಕುಗಳು ಮಾರಾಟವಾಗಿದೆ. ಬಿಸಿಸಿಐ ಇಷ್ಟು ಮೊತ್ತಕ್ಕೆ ಐಪಿಎಲ್ ನೇರಪ್ರಸಾರದ ಹಕ್ಕು ನೀಡಿದೆ..
ಭಾರಿ ಮೊತ್ತಕ್ಕೆ ನೇರಪ್ರಸಾರದ ಹಕ್ಕು ಮಾರಾಟವಾಗಿರುವುದು, ಇತ್ತ ಫ್ರಾಂಚೈಸು ಮಾಲೀಕರಿಗೆ ಭಾರಿ ಸಂತೋಷ ತಂದಿದೆ. ಯಾಕೆಂದರೆ, ನೇರಪ್ರಸಾರ ಮಾರಾಟ ಮೊಟ್ಟದ ಶೇ.50ರಷ್ಟು ಹಣವನ್ನು ಬಿಸಿಸಿಐ ಫ್ರಾಂಚೈಸಿ ಮಾಲೀಕರಿಗೆ ನೀಡುತ್ತದೆ. ಐದು ವರ್ಷಕ್ಕೆ ತಕ್ಕ ಹಾಗೆ, ಪಂದ್ಯಗಳ ಆಧಾರದ ಮೇಲೆ ನೇರಪ್ರಸಾರದ ಹಕ್ಕನ್ನು ಮಾರಾಟ ಮಾಡಲಾಗಿದೆ. 2023-24 ರಲ್ಲಿ 74 ಪಂದ್ಯಗಳು, 2025-26 ರಲ್ಲಿ 84 ಪಂದ್ಯಗಳು ಗಳು ಹಾಗೂ 2027ರಲ್ಲಿ 94 ಪಂದ್ಯಗಳು ನಡೆಯಲಿದ್ದು ಅವುಗಳ ಆಧಾರದ ಮೇಲೆ ನೇರಪ್ರಸಾರದ ಹಕ್ಕು ಮಾರಾಟವಾಗಿದೆ. ಈಗ ಐಪಿಎಲ್ ನಲ್ಲಿ 10 ತಂಡಗಳಿವೆ. ಇದೀಗ 10 ತಂಡಗಳಿಗೂ ಶಾ ಭರ್ಜರಿಯಾದ ಮೊತ್ತ ಸಿಗಲಿದೆ.
2022ರ ಐಪಿಎಲ್ ನಲ್ಲಿ ಪ್ರತಿ ಫ್ರಾಂಚೈಸಿಗು 201.65 ಕೋಟಿ ರೂಪಾಯಿ ಬಿಸಿಸಿಐ ಮೂಲಕ ಸಿಕ್ಕಿದೆ, 2023-24ರಲ್ಲಿ ಬಿಸಿಸಿಐ ಮೂಲಕ ಪ್ರತಿ ಫ್ರಾಂಚೈಸಿಗು 463.6 ಕೋಟಿ ರೂಪಾಯಿ ಸಿಗಲಿದೆ. 2025-26ರಲ್ಲಿ ಪ್ರತಿ ಫ್ರಾಂಚೈಸಿಗೆ 495.6 ಕೋಟಿ ರೂಪಾಯಿ ಸಿಗಲಿದೆ. 2027ರಲ್ಲಿ ಪ್ರತಿ ಫ್ರಾಂಚೈಸಿಗು 554.6 ಕೋಟಿ ರೂಪಾಯಿ ಸಿಗಲಿದೆ. ಒಟ್ಟಾರೆ ಹೇಳುವುದಾದರೆ, ಇನ್ನು ಕೆಲವು ವರ್ಷಗಳಲ್ಲಿ ಬಿಸಿಸಿಐ ಶೇರ್ ಗಳಿಂದಲೇ ಐಪಿಎಲ್ ಫ್ರಾಂಚೈಸಿಗಳಿಗೆ 1000 ಕೋಟಿ ಸಿಗುವುದು ಖಚಿತ ಎನ್ನಲಾಗುತ್ತಿದೆ. ಇಷ್ಟೇ ಅಲ್ಲದೆ, ಬೇರೆ ಜಾಹೀರಾತುಗಳು, ಪ್ರಾಯೋಜಕರುಗಳ ಕಡೆಯಿಂದ ಬರುವ ಹಣ, ಟಿಕೆಟ್ ಹಣ ಹೀಗೆ ಇನ್ನಷ್ಟು ಮೂಲಗಳಿಂದ ಫ್ರಾಂಚೈಸಿಗಳಿಗೆ ಹಣ ಬರಲಿದೆ. ಇದಷ್ಟೇ ಅಲ್ಲದೆ ಬೇರೆ ಪ್ರಾಯೋಜಕರಿಂದ ಸಿಗುವುದರಲ್ಲಿ ಸಹ ಶೇ.50 ರಷ್ಟು ಹಣವನ್ನು ಬಿಸಿಸಿಐ ಫ್ರಾಂಚೈಸಿಗಳಿಗೆ ನೀಡುತ್ತದೆ.
Comments are closed.