ಹೆಂಡತಿಗೆ ಸುಳ್ಳು ಹೇಳೋರು ಅಥವಾ ಮೋಸ ಮಾಡೋರು ಮುಂದಿನ ಜನ್ಮದಲ್ಲಿ ಏನಾಗುತ್ತಾರೆ ಗೊತ್ತೇ??
ನಮ್ಮ ಹಿಂದೂ ಧರ್ಮ ಶಾಸ್ತ್ರಗಳು ಹೇಳುವ ಪ್ರಕಾರ, ಯಾವ ವ್ಯಕ್ತಿ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನೇ, ಪುಣ್ಯದ ಕೆಲಸಗಳನ್ನೇ ಮಾಡುತ್ತಾ ಬರುತ್ತಾನೋ, ಅವನು ಸತ್ತ ನಂತರ ಸ್ವರ್ಗಕ್ಕೆ ಹೋಗುತ್ತಾನೆ. ಯಾವ ವ್ಯಕ್ತಿ ಪಾಪದ ಕೆಟ್ಟ ಕೆಲಸಗಳನ್ನು ಮಾಡುತ್ತಾನೋ, ಆ ವ್ಯಕ್ತಿ ಸತ್ತ ನಂತರ ನರಕಕ್ಕೆ ಹೋಗುತ್ತಾನೆ ಎಂದು ಹೇಳುತ್ತಾರೆ. ನಮ್ಮ ಗರುಡ ಪುರಾಣದಲ್ಲಿ ಇದೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ. ಮನುಷ್ಯನ ಹುಟ್ಟಿನಿಂದ ಹಿಡಿದು, ಸತ್ತ ನಂತರ ಏನಾಗುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಗರುಡ ಪುರಾಣದಲ್ಲಿ ವಿವರಿಸಿದ್ದಾರೆ. ಮನುಷ್ಯ ಮಾಡುವ ಕೆಲಸದಿಂದ ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟಬಹುದು ಎನ್ನುವುದನ್ನು ತಿಳಿಸಿದ್ದಾರೆ. ಹಾಗಿದ್ರೆ ಎಂತಹ ಕೆಲಸ ಮಾಡಿದ ವ್ಯಕ್ತಿ ಮುಂದಿನ ಜನ್ಮದಲ್ಲಿ ಏನಾಗುತ್ತಾನೆ ಎಂದು ತಿಳಿಸುತ್ತೇವೆ ನೋಡಿ..
ಕೊಲೆ ಮಾಡುವ ವ್ಯಕ್ತಿ :- ಯಾವ ವ್ಯಕ್ತಿ ಮತ್ತೊಬ್ಬ ಮನುಷ್ಯನ ಅಥವಾ ಪ್ರಾಣಿಯ ಕೊಲೆ ಮಾಡಿ, ಅದರಿಂದ ಬಂದ ಹಣದಲ್ಲಿ ತನ್ನ ಮತ್ತು ತನ್ನ ಕುಟುಂಬದ ಜೀವನ ಸಾಗಿಸುತ್ತಾನೋ, ಅಂತಹ ವ್ಯಕ್ತಿ ಮುಂದಿನ ಜನ್ಮದಲ್ಲಿ ಕಸಾಯಿಖಾನೆಯಲ್ಲಿ ಕುರಿಯಾಗಿ ಹುಟ್ಟುತ್ತಾನೆ ಎಂದು ಗರುಡಪುರಾಣದಲ್ಲಿ ಹೇಳಿದ್ದಾರೆ.
ಹೆಣ್ಣಿಗೆ ಹಿಂಸೆ ನೀಡುವ ವ್ಯಕ್ತಿ :- ಯಾವ ಮನುಷ್ಯ ಒಂದು ಹೆಣ್ಣಿಗೆ ಹಿಂಸೆ ನೀಡಿ, ಅಥವಾ ಹೆಣ್ಣಿಗೆ ಹಿಂಸೆ ನೀಡುವಂತೆ ಬೇರೆಯವರಿಗೆ ಹೇಳುತ್ತಾನೋ, ಆ ವ್ಯಕ್ತಿ ಮುಂದಿನ ಜನ್ಮದಲ್ಲಿ ಭಯಂಕರ ಬಳಲುತ್ತಾನೆ. ಬೇರೆ ಮಹಿಳೆಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವ ವ್ಯಕ್ತಿ ಮುಂದಿನ ಜನ್ಮದಲ್ಲಿ ನಪುಂಸಕನಾಗಿ ಜನಿಸುತ್ತಾನೆ. ಗುರುವಿನ ಪತ್ನಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವ, ಅಥವಾ ಅವರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ವ್ಯಕ್ತಿ, ಮುಂದಿನ ಜನ್ಮದಲ್ಲಿ ಕುಷ್ಠರೋಗದಿಂದ ಬಳಲುತ್ತಾನೆ.
ಪುರುಷರ ವರ್ತನೆ :- ಈ ಜನ್ಮದಲ್ಲಿ ಮಹಿಳೆಯರ ಹಾಗೆ ವರ್ತಿಸುವ ವ್ಯಕ್ತಿ, ಮಹಿಳೆಯರ ಸ್ವಭಾವ ಹೊಂದಿರುವ ವ್ಯಕ್ತಿ, ಮುಂದಿನ ಜನ್ಮದಲ್ಲಿ ಮಹಿಳೆಯಾಗಿಯೇ ಜನಿಸುತ್ತಾರೆ.
ಗರ್ಭಪಾತ :- ಗರ್ಭಪಾತ ಮಾಡುವ ವ್ಯಕ್ತಿ ಅಥವಾ ಅದನ್ನು ಮಾಡಲು ಪ್ರೇರೇಪಿಸುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಬೆಕ್ಕಾಗಿ ಜನಿಸುತ್ತಾನೆ. ಮುಂದಿನ ಜನ್ಮದ ಮೊದಲು, ನರಕವನ್ನು ಅನುಭವಿಸುತ್ತಾರೆ.
ಕೊನೆಕ್ಷಣದಲ್ಲಿ ದೇವರ ಸ್ಮರಣೆ :- ಸಾಯುವ ಮುನ್ನ, ಕೊನೆಯ ಕ್ಷಣದಲ್ಲಿ ದೇವರ ಸ್ಮರಣೆ ಮಾಡುವ ವ್ಯಕ್ತಿ, ಸಾವಿನ ನಂತರ ಸ್ವರ್ಗದ ಹಾದಿಯಲ್ಲಿ ಸಾಗುತ್ತಾರೆ.
ತಂದೆ ತಾಯಿ ಹಾಗೂ ಮಕ್ಕಳಿಗೆ ಹಿಂಸೆ ನೀಡುವವರು :- ಈ ಜನ್ಮದಲ್ಲಿ ತಂದೆ, ತಾಯಿ ಅಥವಾ ಮಕ್ಕಳಿಗೆ ಹಿಂಸೆ ಕೊಡುವ ವ್ಯಕ್ತಿಗಳು, ಮುಂದಿನ ಜನ್ಮದಲ್ಲಿ ಜನಿಸುವುದಿಲ್ಲ, ತಾಯಿಯ ಗರ್ಭದಲ್ಲಿ ಸಾವನ್ನಪ್ಪುತ್ತಾನೆ, ಮುಂದಿನ ಜನ್ಮದಲ್ಲಿ ಆತ ಜನಿಸುವುದಿಲ್ಲ.
ಗುರುವಿಗೆ ಅಗೌರವ ನೀಡುವ ವ್ಯಕ್ತಿ :- ಯಾವ ವ್ಯಕ್ತಿ ತನ್ನ ಗುರುವಿಗೆ ನಿಂದಿಸಿ, ಅಗೌರವ ನೀಡುತ್ತಾನೋ ಆ ವ್ಯಕ್ತಿ ಮುಂದಿನ ಜನ್ಮದಲ್ಲಿ ನರಕಕ್ಕೆ ಹೋಗುತ್ತಾನೆ. ಈ ರೀತಿ ಮಾಡುವುದು, ದೇವರಿಗೆ ಅವಮಾನ ಮಾಡಿದಂತೆ. ಅಂತಹ ವ್ಯಕ್ತಿಗಳು ಬ್ರಹ್ಮರಾಕ್ಷಸನ ಹಾಗೆ ಜನಿಸುತ್ತಾರೆ.
ಸುಳ್ಳು ಹೇಳಿ ಮೋಸ ಮಾಡುವವರು :-ಸುಳ್ಳು ಹೇಳಿ ಮೋಸ ಮಾಡುವವರ ಬಗ್ಗೆಯೂ ಗರುಡಪುರಾಣದಲ್ಲಿ ಹೇಳಿದ್ದಾರೆ, ಸುಳ್ಳು ಹೇಳುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಗೂಬೆಯಾಗಿ ಜನಿಸುತ್ತಾರೆ, ಸುಳ್ಳಿಗೆ ಸಾಕ್ಷಿಯಾಗುವ ವ್ಯಕ್ತಿ ಕುರುಡನಾಗಿ ಜನಿಸುತ್ತಾನೆ.
Comments are closed.