ಸಿನಿ ಪಯಣದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಸಲು ತಯಾರಾದ ಎಡವಟ್ಟು ಲೀಲಾ ಖ್ಯಾತಿ ಮಲೈಕಾ ವಸುಪಾಲ್, ಏನು ಗೊತ್ತೇ?
ಕನ್ನಡ ಕಿರುತೆರೆ ವೀಕ್ಷಕರಿಗೆ ಎಡವಟ್ಟು ಲೀಲಾ ಅಂದ್ರೆ ಗೊತ್ತಿಲ್ಲದೇ ಇರಲು ಸಾಧ್ಯವೇ ಇಲ್ಲ. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಡವಟ್ಟು ಲೀಲಾ ಮಾತನಾಡುವ ಮುದ್ದು ಮಾತುಗಳು, ತುಂಟತನ ಎಡವಟ್ಟುಗಳು ಇದೆಲ್ಲವನ್ನು ಕಿರುತೆರೆ ವೀಕ್ಷಕರು ಎಂಜಾಯ್ ಮಾಡುತ್ತಾರೆ. ಎಜೆ ಮತ್ತು ಲೀಲಾ ಮದುವೆ ಏನೋ ಆಗಿದೆ, ಆದರೆ ಇವರಿಬ್ಬರ ನಡುವೆ ಇನ್ನು ಪ್ರೀತಿ ಶುರುವಾಗಿಲ್ಲ. ಆಗಾಗ ಕಣ್ಣು ಸನ್ನೆಗಳು ನಡೆದರು ಸಹ, ಇಬ್ಬರು ಪ್ರೀತಿಯನ್ನು ಎಕ್ಸ್ಪ್ರೆಸ್ ಮಾಡಿಲ್ಲ. ಇವರಿಬ್ಬರ ನಡುವೆ ಪ್ರೀತಿ ಯಾವಾಗ ಮೂಡುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದು ಧಾರಾವಾಹಿ ಬಗ್ಗೆ ಯಾದರೆ, ಇದೀಗ ಮಲೈಕಾ ಅವರು ಚಿತ್ರರಂಗಕ್ಕೆ ಬರುವಕನಸನ್ನು ಇಟ್ಟುಕೊಂಡಿದ್ದು, ಇದೀಗ ಆ ಕನಸು ನನಸಾಗಲಿದೆ.
ನಟಿ ಮಲೈಕಾ ಮೂಲತಃ ದಾವಣಗೆರೆಯವರು, ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಇವರಿಗೆ ಆಸಕ್ತಿ ಇತ್ತು. ಸಾಕಷ್ಟು ಆಡಿಶನ್ ಗಳನ್ನು ಕೊಟ್ಟಿದ್ದ ಮಲೈಕಾ, ಸೆಲೆಕ್ಟ್ ಆಗಿದ್ದು ಮಾತ್ರ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ. ಹಿಟ್ಲರ್ ಕಲ್ಯಾಣ ಇವರ ಮೊದಲ ಧಾರಾವಾಹಿ ಎಂದು ಅನ್ನಿಸುವುದಿಲ್ಲ, ಅಷ್ಟರ ಮಟ್ಟಿಗೆ ಅಭಿನಯ ಮಾಡುತ್ತಿದ್ದಾರೆ ಮಲೈಕಾ. ಮೊದಲ ಧಾರವಾಹಿಯಲ್ಲೇ ಎಲ್ಲಾ ವೀಕ್ಷಕರ ಫೇವರೆಟ್ ಆಗಿದ್ದಾರೆ. ಮಲೈಕಾ ಅವರ ಜನಪ್ರಿಯತೆ ಹೇಗಿದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಅವರ ಹೆಸರಿನಲ್ಲಿ ಇರುವ ಫ್ಯಾನ್ ಪೇಜ್ ಗಳನ್ನು ನೋಡಿದರೆ ಗೊತ್ತಾಗುತ್ತದೆ. ಅಭಿಮಾನಿಗಳ ಪ್ರೀತಿಯಿಂದ ಮಲೈಕಾ ಅವರಿಗೆ ಬಹಳ ಸಂತೋಷವಾಗಿದೆ ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ ಮಲೈಕಾ.
ಇಂದು ಕಿರುತೆರೆಯಲ್ಲಿ ಫೇಮಸ್ ಆಗಿರುವ ಮಲೈಕಾ ಅವರಿಗೆ ಮುಂದಿನ ದಿನಗಳಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುವ ಆಸೆ ಬಹು ದಿನಗಳಿಂದ ಇತ್ತು, ಅದೇ ರೀತಿ ಈಗ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ, ಅದು ಮೊದಲ ಸಿನಿಮಾದಲ್ಲೇ ದೊಡ್ಡ ಪ್ರೊಡಕ್ಷನ್ ಕಂಪನಿಯಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿದೆ, ಅದು ಹಾಸ್ಯನಟ ಚಿಕ್ಕಣ್ಣ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಮಲೈಕಾ ವಸುಪಾಲ್ ಅವರಿಗೆ ಸಿಕ್ಕಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುವ ಅವಕಾಶ ಮಲೈಕಾ ಅವರಿಗೆ ಸಿಕ್ಕಿದೆ.
Comments are closed.