ಕೊನೆಗೂ ತಾನು ಮತ್ತು ಪತ್ನಿ ಅಮೃತ ರವರು ಯಾಕೆ ರಾಜ-ರಾಣಿ 2 ನಲ್ಲಿ ಭಾಗಿಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿರ ಯುವರಾಣಿ ಸಾಕು. ಯಾಕಂತೆ ಗೊತ್ತೇ??
ಈ ಹಿಂದೆ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ ಧಾರವಾಹಿ ಬಹಳ ಜನಪ್ರಿಯತೆ ಗಳಿಸಿತ್ತು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾಯಕನನ್ನು ಮದುವೆ ಆಗುವ ಸಿಟಿ ಹುಡುಗಿ, ಯಾವ ರೀತಿ ಅವನ ಕುಟುಂಬದ ಸಮಸ್ಯೆಗಳನ್ನ ಸರಿ ಮಾಡುತ್ತಾಳೆ ಎಂಬುದೇ ಈ ಧಾರವಾಹಿಯಲ್ಲಿ ಜೊತೆಯಾಗಿ ನಟಿಸಿದ ಕಲಾವಿದರು ರಘು ಮತ್ತು ಅಮೃತಾ ಮೂರ್ತಿ. ಧಾರವಾಹಿಯಲ್ಲಿ ನಾಯಕ ನಾಯಕಿಯಾಗಿ ನಟಿಸಿದ ಈ ಜೋಡಿ ನಿಜ ಜೀವನದಲ್ಲಿ ಸಹ ಪ್ರೀತಿಸಿ ಮದುವೆಯಾದರು.
ರಂಗೇಗೌಡ ನಂತರ ರಘು ಅವರು ರಂಗೇಗೌಡ ನಂತರ ಜೀವನಚೈತ್ರ ಧಾರವಾಹಿಯಲ್ಲಿ ನಟಿಸಿದರು. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಸಾಕೇತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆ ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಅಮೃತಾ ಅವರು ಕುಲವಧು ಧಾರವಾಹಿಯಲ್ಲಿ ನಟಿಸುತ್ತಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುವ ಕಸ್ತೂರಿ ನಿವಾಸ ಧಾರವಾಹಿಯಲ್ಲಿ ಸಹ ನಟಿಸುತ್ತಿದ್ದರು. ಆದರೆ ಈಗ ಅಮೃತಾ ಅವರು ತಮ್ಮ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಅಮೃತಾ ಮೂರ್ತಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು. ತಮ್ಮ ಮುದ್ದಿನ ಮಗಳಿಗೆ ಧೃತಿ ಎಂದು ಈ ಜೋಡಿ ಹೆಸರಿಟ್ಟಿದ್ದಾರೆ..
ಇನ್ನು ಈ ಜೋಡಿಯ ಬಗ್ಗೆ ಹೊಸ ಮಾತೊಂದು ಕೇಳಿ ಬಂದಿತ್ತು, ಅದೇನೆಂದರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜ ರಾಣಿ ಶೋನಲ್ಲಿ ಈ ಜೋಡಿ ಸಹ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು, ಆದರೆ ರಘು ಅಮೃತಾ ದಂಪತಿ ರಾಜ ರಾಣಿ ಶೋಗೆ ಬರಲಿಲ್ಲ, ಇದರ ಬಗ್ಗೆ ರಘು ಅವರಿಗೆ ಅಭಿಮಾನಿಗಳು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರ ನೀಡಿದ್ದಾರೆ ರಘು, “ತುಂಬಾ ಜನ ಇದೇ ಪ್ರಶ್ನೆ ಕೇಳಿದ್ದೀರಿ. ನಾವು ರಾಜ ರಾಣಿ ಶೋಗೆ ಹೋಗಲು ಇದು ಸರಿಯಾದ ಸಮಯ ಅಲ್ಲ ಎಂದು ಅನ್ನಿಸಿತು, ಅದಕ್ಕೆ ಹೋಗಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ ರಾಜ ರಾಣಿ ಶೋಗೆ ಬರುತ್ತೇವೆ..” ಎಂದು ಹೇಳಿದ್ದಾರೆ ರಘು. ಈ ಮೂಲಕ ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ.
Comments are closed.