ಮಗಳು ಬೀದಿಗೆ ಬಂದು, ಕಣ್ಣೀರು ಹಾಕುತ್ತ ಟಾಯ್ಲೆಟ್ ತೊಳೆಯುವುದಕ್ಕೂ ಸಿದ್ದ ಎಂದ ಎಂದರು ತಾಯಿ ಲಕ್ಷ್ಮಿ ಸುಮ್ಮನಿರುವುದು ಯಾಕೆ ಗೊತ್ತೇ??
ಭಾರತ ಚಿತ್ರರಂಗ ಕಂಡ ಅದ್ವಿತೀಯ ನಟಿ ಲಕ್ಷ್ಮೀ ಅವರು. ಲಕ್ಷ್ಮಿ ಅವರು ಕನ್ನಡದಲ್ಲಿ ನಟಿಸಿರುವ ಸಿನಿಮಾಗಳನ್ನು ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ. ಅವರ ಅಭಿನಯವನ್ನು ನೋಡಿ ಮರುಳಾಗದೆ ಹೋಗದವರು ಇರಲು ಸಾಧ್ಯವಿಲ್ಲ. ನಟಿ ಲಕ್ಷ್ಮೀ ಈಗ ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಾರೆ. ನಟಿ ಲಕ್ಷ್ಮೀ ಅವರ ತಂದೆ ತಾಯಿ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದವರು. ಹಾಗಾಗಿ ಲಕ್ಷ್ಮಿ ಅವರಿಗೆ ಚಿತ್ರರಂಗ ಹೊಸದೇನೂ ಆಗಿರಲಿಲ್ಲ. ನಟಿ ಲಕ್ಷ್ಮೀ ಭಾಸ್ಕರ್ ದಂಪತಿಯ ಮಗಳಾಗಿ ಜನಿಸಿದವರು ಐಶ್ವರ್ಯ. ಇವರ ನಿಜವಾದ ಹೆಸರು ಶಾಂತಿ.
ನಟಿ ಐಶ್ವರ್ಯ ಭಾಸ್ಕರನ್ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಕನ್ನಡದಲ್ಲಿ ಮಿ.ಗರಗಸ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 90ರ ದಶಕದಲ್ಲಿ ಬಹಳ ಫೇಮಸ್ ಸ್ಟಾರ್ ನಟರ ಜೊತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು ಐಶ್ವರ್ಯ. ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿ ಇರುವಾಗಲೇ ಮದುವೆಯಾದರು, ನಟಿ ಐಶ್ವರ್ಯ ಅವರ ದಾಂಪತ್ಯ ಜೀವನ ಕೂಡ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರಲಿಲ್ಲ. ಗಂಡನಿಂದ ಬೇರೆಯಾದ ಐಶ್ವರ್ಯ ಮಗಳನ್ನು ನೋಡಿಕೊಳ್ಳುತ್ತಿದ್ದರು. ಸ್ಟಾರ್ ನಟಿಯಾಗಿದ್ದರು, ದೊಡ್ಡ ನಟಿಯ ಮಗಳಾಗಿದ್ದರು ಇಂದು ಐಶ್ವರ್ಯ ಅವರು ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಇದರ ಬಗ್ಗೆ ತಮಿಳು ಸಂದರ್ಶನ ಒಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ ಐಶ್ವರ್ಯ.
ನನಗೆ ಈಗ ಸಿನಿಮಾ ಅಥವಾ ಕಿರುತೆರೆ ಅವಕಾಶಗಳು ಹೆಚ್ಚಾಗಿ ಸಿಗುತ್ತಿಲ್ಲ. ಆರ್ಥಿಕವಾಗಿ ತೊಂದರೆ ಅನುಭವಿಸುತ್ತಾ ಇದ್ದೀನಿ. ಈಗ ನಾನು ಮನೆಮನೆಗೆ ಹೋಗಿ ಸೋಪ್ ಮಾರುತ್ತಾ ಇದ್ದೀನಿ. ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಾ ಇದ್ದೀನಿ. ಅದರ ಜೊತೆಗೆ ಸೋಪ್ ಗಳನ್ನು ಮಾರುತ್ತಾ ಇದ್ದೀನಿ. ಒಬ್ಬ ಮಗಳು ಇದ್ದಳು, ಅವಳಿಗೆ ಮದುವೆ ಆಯಿತು, ಈಗ ನನ್ನ ಸಂಸಾರದಲ್ಲಿ ನಾನೊಬ್ಬಳೇ ಇದ್ದೀನಿ. ಒಳ್ಳೆಯ ಸಂಭಾವನೆ ಸಿಗುವ ಯಾವುದೇ ಪಾತ್ರ ಆದರೂ ಮಾಡಲು ತಯಾರಾಗಿದ್ದೀನಿ. ಅವಶ್ಯಕತೆ ಇದ್ದರೆ ಶೌಚಾಲಯ ಶುಚಿ ಮಾಡಲು ಸಹ ಸಿದ್ದ.. ಎನ್ನುವ ಮಾತುಗಳನ್ನು ಐಶ್ವರ್ಯ ಅವರು ಹೇಳಿದ್ದು, ನಟಿಯ ಈ ಹೇಳಿಕೆ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಶಾಕ್ ನೀಡಿದೆ. ಇವರ ಪರಿಸ್ಥಿತಿ ನೋಡಿ ಸ್ಟಾರ್ ನಟರು ಅವಕಾಶ ಕೊಡುತ್ತಾರ ಎಂದು ಕಾದು ನೋಡಬೇಕಿದೆ.
Comments are closed.