ಒಂದು ಕಾಲದ ಟಾಪ್ ನಟಿ, ಕಾಜಲ್ ಅಗರ್ವಾಲ್ ರವರು ರಿಜೆಕ್ಟ್ ಮಾಡಿರುವ ಟಾಪ್ ಚಿತ್ರಗಳು ಯಾವ್ಯಾವು ಗೊತ್ತೇ??
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ಸಿನಿಮಾರಂಗಕ್ಕೆ ಕಾಲಿಟ್ಟು 15 ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಚಿತ್ರರಂಗದಲ್ಲಿದ್ದಾಗ ಕಾಜಲ್ ಅಗರ್ವಾಲ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದು ಅವುಗಳಲ್ಲಿ ಬಹುತೇಕ ಎಲ್ಲವೂ ಸೂಪರ್ ಹಿಟ್ ಆಗಿದೆ. ಆದರೆ ತಮ್ಮ ಸಿನಿ ಕೆರಿಯರ್ ಕಾಜಲ್ ಅವರು ಹಲವು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಆ ರೀತಿ ಕಾಜಲ್ ಅವರು ರಿಜೆಕ್ಟ್ ಮಾಡಿರುವ ಸಿನಿಮಾಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ನಟಿ ಕಾಜಲ್ ಅಗರ್ವಾಲ್ ಅವರು ತಾವು ನಟಿಸಿದ ಮೊದಲ ಸಿನಿಮಾ ನಿರ್ದೇಶನ ಮಾಡಿದವರಿಗೂ ಸಹ ಒಂದು ಸಾರಿ ನೋ ಎಂದು ಹೇಳಿದ್ದಾರೆ. ಅಲಿವೇಲು ಮಂಗಳ ವೆಂಕಟರಮಣ ಸಿನಿಮಾದಲ್ಲಿ ನಟಿಸಲು ಕಾಜಲ್ ಅಗರ್ವಾಲ್ ನೋ ಹೇಳಿದ್ದರು. ಪ್ರಭಾಸ್ ಅವರು ನಾಯಕನಾದ ಸಾಹೋ ಸಿನಿಮಾದಲ್ಲಿ ಜಾಕ್ವೆಲಿನ್ ಅವರು ಸ್ಟೆಪ್ ಹಾಕಿದ್ದ ಹಾಡಿಗೆ ಮೊದಲು ಕಾಜಲ್ ಅವರನ್ನು ಕರೆತರುವ ಪ್ರಯತ್ನ ನಡೆದಿತ್ತು, ಆದರೆ ಕಾಜಲ್ ಅವರು ನೋ ಎಂದಿದ್ದರು. ಪ್ರಭಾಸ್ ಅವರೊಡನೆ ಅದಾಗಲೇ ಎರಡು ಸಿನಿಮಾಗಳಲ್ಲು ನಟಿಸಿದ್ದರು ಕಾಜಲ್.
ತೆಲುಗು ಚಿತ್ರರಂಗದ ಖ್ಯಾತ ನಟ ವಿಕ್ಟರಿ ವೆಂಕಟೇಶ್ ಅವರೊಡನೆ ನಟಿಸುವ ಅವಕಾಶ ಬಂದಾಗಲೂ ಸಹ ಕಾಜಲ್ ಅವರು ನಿರಾಕರಿಸಿದ್ದರು, ಆ ಸಿನಿಮಾ ಶುರುವಾಗದೆ ನಿಂತು ಹೋಯಿತು. ಇನ್ನು, ನಟ ಕಮಲ್ ಹಾಸನ್ ಅವರೊಡನೆ ತೂಂಗಾವನಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು, ಆದರೆ ಕಾಜಲ್ ಅವರು ದುಬಾರಿ ಸಂಭಾವನೆ ಕೇಳಿದ ಕಾರಣ, ಆ ಸಿನಿಮಾ ಮತ್ತೊಬ್ಬ ನಟಿಯ ಪಾಲಾಯಿತು. ಇದೀಗ ಕಮಲ್ ಹಾಸನ್ ಅವರೊಡನೆ ಇಂಡಿಯನ್2 ಸಿನಿಮಾದಲ್ಲಿ ಕಾಜಲ್ ಅವರು ನಟಿಸುತ್ತಿದ್ದಾರೆ.
ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ ಕಾಜಲ್ ಅಗರ್ವಾಲ್, ಒಂದು ತೆಲುಗು ಸಿನಿಮಾ ಒಪ್ಪಿಕೊಂಡ ಬಳಿಕ, ಕಾಜಲ್ ಅವರಿಗೆ ತಮಿಳಿನಲ್ಲಿ ಉದಯನಿಧಿ ಸ್ಟಾಲಿನ್ ಅವರೊಡನೆ ನಟಿಸುವ ಅವಕಾಶ ಸಿಕ್ಕಿತ್ತು, ಆದರೆ ಅದನ್ನು ನಯವಾಗಿ ನಿರಾಕರಿಸಿದ್ದರು ಕಾಜಲ್. ತೆಲುಗಿನ ಮತ್ತೊಬ್ಬ ಖ್ಯಾತ ನಟ ಬಾಲಯ್ಯ ಅವರ ಎರಡು ಸಿನಿಮಾಗಳನ್ನು ಸಹ ಕಾಜಲ್ ಅವರು ರಿಜೆಕ್ಟ್ ಮಾಡಿದ್ದರು, ಬಾಲಯ್ಯ ಅವರು ಸ್ಟಾರ್ ಹೀರೋಯಿನ್ ಗಳ ಜೊತೆ ನಟಿಸುವುದು ಕಡಿಮೆ, ಆದರೂ ಗೌತಮಿ ಪುತ್ರ ಶಾತಕರ್ಣಿ ಸಿನಿಮಾಗೆ ಕಾಜಲ್ ಅವರನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ಆದರೆ ಕಾಜಲ್ ಅವರು ಸಿನಿಮಾ ರಿಜೆಕ್ಟ್ ಮಾಡಿದ್ದರು, ಅದಕ್ಕಿಂತ ಮೊದಲು ಪೈಸಾ ವಸೂಲ್ ಸಿನಿಮಾವನ್ನು ಸಹ ಕಾಜಲ್ ಅವರು ರಿಜೆಕ್ಟ್ ಮಾಡಿದ್ದರು.
ನಾಗಾರ್ಜುನ ಅವರಿಗೆ ನಾಯಕಿಯಾಗುವ ಅವಕಾಶ ಸಹ ಕಾಜಲ್ ಅವರಿಗೆ ಮಿಸ್ ಆಯಿತು. ವೈಲ್ಡ್ ಡಾಗ್ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಅವರು ನಟಿಸಬೇಕಿತ್ತು, ಆದರೆ ಆ ಸಮಯದಲ್ಲಿ ಮದುವೆಯಲ್ಲಿ ಬ್ಯುಸಿ ಇದ್ದ ಕಾರಣ, ಆ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ. ಹಾಗೆಯೇ ತಮಿಳು ಸಿನಿಮಾದಲ್ಲಿ ಸಹ ನಟಿಸುವ ಅವಕಾಶ ಸಿಕ್ಕಿತ್ತು, ಈಗೆಲ್ಲಾ ವಯಸ್ಸು 30 ದಾಟಿದರೆ, ನಾಯಕಿಗಿಂತ ಸಪೋರ್ಟಿಂಗ್ ಪಾತ್ರಗಳಲ್ಲಿ ನಟಿಸುತ್ತಾರೆ, ಆದರೆ ಕಾಜಲ್ ಅಗರ್ವಾಲ್ ಅವರಿಗೆ ತಮಗೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕಥೆ ಇಷ್ಟವಾದರು ಸಹ, ಅದರಲ್ಲಿ 5 ನಿಮಿಷಗಳು ಮಗುವಿನ ತಾಯಿಯಾಗಿ ನಟಿಸಬೇಕು ಎಂದು ರಿಜೆಕ್ಟ್ ಮಾಡಿದ್ದರು.
ಖ್ಯಾತ ನಟ ರವಿತೇಜ ಅವರೊಡನೆ ಅಮರ್ ಅಕ್ಬರ್ ಆಂಟೋನಿ ಸಿನಿಮಾದಲ್ಲಿ ನಟಿಸುವ ಅವಕಾಶ ಕಾಜಲ್ ಅಗರ್ವಾಲ್ ಅವರಿಗೆ ಸಿಕ್ಕಿತ್ತು. ಆದರೆ ಅವರು ಆ ಸಿನಿಮಾವನ್ನು ನಿರಾಕರಿಸಿದ್ದರು. ಹೀಗೆ ಸಾಕಷ್ಟು ಸಿನಿಮಾಗಳನ್ನು ಕಾಜಲ್ ಅಗರ್ವಾಲ್ ಅವರು ನಿರಾಕರಿಸಿದ್ದರು. ಇಂದು ಪತಿ ಮತ್ತು ಮಗುವಿನ ಜೊತೆಗೆ ಬಹಳ ಸಂತೋಷದ ಜೀವನ ನಡೆಸುತ್ತಿದ್ದಾರೆ.
Comments are closed.