ಸರಳವಾಗಿ ಕೆಲವು ಕೋಟಿಗಳನ್ನು ಮಾತ್ರ ಖರ್ಚು ಮಾಡಿ ಮದುವೆಯಾಗಿದ್ದ ನಿಖಿಲ್, ಲಗ್ನ ಪತ್ರಿಕೆಯನ್ನು ಏನು ಬರೆದಿದ್ದರು ಗೊತ್ತೇ??
ಚಂದನವನದಲ್ಲಿ ನಟನಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಹ ಗುರುತಿಸಿಕೊಂಡು ಒಳ್ಳೆಯ ಹೆಸರನ್ನು ಪಡೆದುಕೊಂಡಿರುವವರು ನಟ ನಿಖಿಲ್ ಕುಮಾರಸ್ವಾಮಿ. ಮಾಜಿ ಪ್ರಧಾನಿಗಳ ಮೊಮ್ಮಗ, ಹಾಗೂ ಮಾಜಿ ಮುಖ್ಯಮಂತ್ರಿಗಳ ಮಗ ಆಗಿದ್ದಾರೆ ನಿಖಿಲ್. ಜಾಗ್ವಾರ್, ಸೀತಾರಾಮ ಕಲ್ಯಾಣ ಹಾಗೂ ರೈಡರ್ ಸಿನಿಮಾ ಮೂಲಕ ಚಂದನವನದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ನಿಖಿಲ್. ಇವರಿಗೆ ದೊಡ್ಡ ಅಭಿಮಾನಿ ಬಳಗ ಇದೆ, ಜೊತೆಗೆ ಯುವ ರಾಜಕೀಯ ನಾಯಕನಾಗಿ ಸಹ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಭರವಸೆಯ ನಟ ಆಗಿದ್ದಾರೆ ನಿಖಿಲ್ ಕುಮಾರಸ್ವಾಮಿ. ಮುಂದಿನ ಸಿನಿಮಾದ ಕೆಲಸಗಳು ಈಗಾಗಲೇ ನಡೆಯುತ್ತಿದೆ.
2020ರ ಲಾಕ್ ಡೌನ್ ಸಮಯದಲ್ಲಿ ನಿಖಿಲ್ ಅವರು ರೇವತಿ ಅವರೊಡಬೆ ಸರಳವಾಗಿ ಮದುವೆಯಾದರು. ಇವರಿಬ್ಬರು ಕ್ಯೂಟ್ ಎಂದೇ ಫೇಮಸ್ ಆಗಿದ್ದರು, ಇಬ್ಬರು ಜೊತೆಯಾಗಿ ಯೋಗ ಮಾಡುವ, ವಾರ್ಕೌಟ್ ಮಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನಿಖಿಲ್ ರೇವತಿ ದಂಪತಿ, ಕಳೆದ ವರ್ಷ ಮಗುವಿನ ತಂದೆ ತಾಯಿಯಾದರು. 2021ರ ಸೆಪ್ಟೆಂಬರ್ 21ರಂದು ರೇವತಿ ಅವರು ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದರು. ಮಗುವಿಗೆ 9 ತಿಂಗಳು ತುಂಬಿದ ಮಗುವಿನ ನಾಮಕರಣ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ದೇವಸ್ಥಾನದಲ್ಲಿ ನಡೆಸಲಾಯಿತು. ನಾಮಕರಣ ಮತ್ತು ಕನಕಾಭಿಷೇಕವನ್ನು ಮಾಡಿಸಲಾಯಿತು. ಈ ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು, ಅವರ ಪತ್ನಿ, ಕುಮಾರಸ್ವಾಮಿ ಅವರು ಮತ್ತು ಅವರ ಪತ್ನಿ. ಹಾಗೂ ನಿಖಿಲ್ ಅವರ ಇಡೀ ಕುಟುಂಬ ಭಾಗಿಯಾಗಿತ್ತು.
ಮಗನಿಗೆ ನಿಖಿಲ್ ಅವರು ವಿಶೇಷವಾದ ಹೆಸರನ್ನು ಹುಡುಕಿ ಇಟ್ಟಿದ್ದಾರೆ. ಅವ್ಯಾನ್ ದೇವ್ ಎಂದು ಮಗನಿಗೆ ನಾಮಕರಣ ಮಾಡಿದ್ದಾರೆ ನಿಖಿಲ್ ಕುಮಾರಸ್ವಾಮಿ. ಇನ್ನು ಮಗನನ್ನು ಚೆನ್ನಾಗಿ ಬೆಳೆಸಬೇಕು, ಮಗ ಸಾಮಾನ್ಯರ ಹಾಗೆಯೇ ಬೆಳೆಯಬೇಕು ಎನ್ನುವುದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಯ ಆಸೆ. ಇನ್ನು ನಿಖಿಲ್ ಅವರು ದೊಡ್ಡ ಮನೆತನದಲ್ಲಿ ಹುಟ್ಟಿ ಬೆಳೆದರು , ರೇವತಿ ಅವರು ಸಹ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದವರು, ಆದರೆ ಈ ಜೋಡಿ ವ್ಯವಸಾಯ ಮಾಡಿ, ಕೆಲಸಮಯ ಹಳ್ಳಿಯಲ್ಲೇ ಉಳಿದು ಎಲ್ಲರ ಗಮನ ಸೆಳೆದಿದ್ದರು. ಇನ್ನು ಈ ಜೋಡಿಯ ಮದುವೆ ಸಹ ಸರಳವಾಗಿಯೇ ನಡೆದಿತ್ತು. ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಎಷ್ಟು ಸರಳವಾಗಿದೆ ಎಂದು ನೋಡಿ..
Comments are closed.