Neer Dose Karnataka
Take a fresh look at your lifestyle.

ದಿನೇಶ್ ಹಾಗೂ ರಿಷಬ್ ರವರ ನಡುವೆ ಬಾರಿ ಪೈಪೋಟಿ, ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಎಂದರೇ ವಯಸ್ಸು ಸೇರಿದಂತೆ ಉಳಿದೆಲ್ಲ ಲೆಕ್ಕಾಚಾರದ ಪ್ರಕಾರ ಯಾರು ಬೆಸ್ಟ್ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿ ಮುಗಿದಿದ್ದು ಮುಂದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಅನುಭವಿ ಆಟಗಾರರು ವಿಶ್ರಾಂತಿಯಿಂದ ಮತ್ತೆ ಮರಳಿ ಬರಲಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ. ಈಗಾಗಲೇ ನೀವು ಐಪಿಎಲ್ ಮುಗಿದ ನಂತರ ಭಾರತೀಯ ಕ್ರಿಕೆಟ್ ತಂಡ ಎದುರಿಸಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೂರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳು ತಂಡದಲ್ಲಿದ್ದರು. ಹೌದು ಗೆಳೆಯರೇ ಅವರು ದಿನೇಶ್ ಕಾರ್ತಿಕ್ ರಿಷಬ್ ಪಂತ್ ಹಾಗೂ ಯುವ ಆಟಗಾರ ಇಶಾನ್ ಕಿಶನ್ ಆಗಿದ್ದಾರೆ.

ಹೌದು ಗೆಳೆಯರೇ ಇವರು ಮೂರು ಜನ ಕೂಡ ಈಗಾಗಲೇ ಒಂದೇ ತಂಡದಲ್ಲಿ ಪ್ಲೇಯಿಂಗ್ 11ರಲ್ಲಿ ಕೂಡ ಜೊತೆಯಾಗಿ ಈ ಸರಣಿಯಲ್ಲಿ ಆಡಿದ್ದಾರೆ. ಇಲ್ಲಿನವರೆಗೂ ಇದು ಸುಲಭವಾಗಿ ಇರಬಹುದು ಮುಂದಿನ ಕೆಲವೊಂದು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕೂಡ ಇವರು ಆಡುವಂತಹ ಅವಕಾಶವನ್ನು ಪಡೆಯಬಹುದು ಆದರೆ, ಇನ್ನು ಮುಂದೆ ತಂಡದಲ್ಲಿ ರೋಹಿತ್ ಶರ್ಮ ಕೆ ಎಲ್ ರಾಹುಲ್ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ರವರು ತಂಡದಲ್ಲಿ ಖಾಯಂ ಸ್ಥಾನ ಪಡೆದ ನಂತರ ಈ ಬಾರಿಯ ತಂಡದ ನಾಯಕತ್ವವನ್ನು ವಹಿಸಿಕೊಂಡಿರುವ ರಿಷಬ್ ಪಂತ್ ಹಾಗೂ ತಂಡದ ಫಿನಿಶರ್ ಆಗಿ ಜವಾಬ್ದಾರಿಯನ್ನು ನಿರ್ವಹಿಸಿರುವ ದಿನೇಶ್ ಕಾರ್ತಿಕ್ ಇವರಿಬ್ಬರಲ್ಲಿ ಯಾರನ್ನು ತಂಡದಲ್ಲಿ ಆಯ್ಕೆ ಮಾಡಬಹುದು ಎನ್ನುವುದಾಗಿ ಗೊಂದಲಗಳು ಏರ್ಪಟ್ಟಿದೆ.

ಎಲ್ಲಾ ವಿಚಾರಗಳನ್ನು ಲೆಕ್ಕಹಾಕಿ ನೋಡಿದ ನಂತರ ಮಾಜಿ ಕ್ರಿಕೆಟಿಗ ಆಗಿರುವ ಡೇಲ್ ಸ್ಟೈನ್ ಅವರು ತಮ್ಮದೇ ಆದಂತಹ ಅಭಿಪ್ರಾಯವನ್ನು ನೀಡಿದ್ದಾರೆ. ಹೌದು ಗೆಳೆಯರೆ ಸೌತ್ ಆಫ್ರಿಕಾ ವಿರುದ್ಧ ಆಡಿರುವ ನಾಲ್ಕು ಪಂದ್ಯಗಳನ್ನು ನೋಡಿದರೆ ರಿಷಬ್ ಪಂತ್ ಅವರ ನಾಯಕತ್ವ ಹಾಗೂ ಬ್ಯಾಟಿಂಗ್ ಪ್ರದರ್ಶನಕ್ಕಿಂತ ಹೆಚ್ಚಾಗಿ ದಿನೇಶ್ ಕಾರ್ತಿಕ್ ರವರ ಬ್ಯಾಟಿಂಗ್ ಪ್ರದರ್ಶನ ನಿಜಕ್ಕೂ ಕೂಡ ಎಲ್ಲರೂ ಮೆಚ್ಚುವಂತದ್ದು ವಿಶ್ವಕಪ್ ಗೆಲ್ಲುವ ಆಸೆಯನ್ನು ಭಾರತೀಯ ಕ್ರಿಕೆಟ್ ತಂಡ ಹೊಂದಿದ್ದರೆ ದಿನೇಶ್ ಕಾರ್ತಿಕ್ ಅವರಂತಹ ಎಲ್ಲಾ ಪಾತ್ರಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಆಯ್ಕೆ ಮಾಡಬೇಕು ಎನ್ನುವುದಾಗಿ ದಿನೇಶ್ ಕಾರ್ತಿಕ್ ರವರ ಪರವಾಗಿ ಸ್ಟೈನ್ ಬ್ಯಾಟ್ ಮಾಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಯನ್ನು ಗಮನಿಸಿದರೆ ರಿಷಬ್ ಪಂತ್ ರವರ ಕಳಸ ಪ್ರದರ್ಶನ ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಹಾಗೂ ಆಯ್ಕೆಗಾರರಿಗೆ ಚಿಂತೆಯನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.