ನಿಖಿಲ್ ಮಗನ ನಾಮಕರಣವನ್ನು ಹೆಚ್ಚೇನೂ ಜೋರಾಗಿ ಮಾಡದೆ ಇದ್ದರೂ, ಸಿಂಪಲ್ ಆಗಿ ಮುಗಿಸಿದರು ಖರ್ಚಾದ ಹಣವೆಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ರಾಜಕಾರಣ ಹಾಗೂ ಸಿನಿಮಾರಂಗದಲ್ಲಿ ಎರಡರಲ್ಲೂ ಕೂಡ ನಿಖಿಲ್ ಕುಮಾರ್ ಅವರು ಈಗ ಸಕ್ರಿಯರಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿಗಷ್ಟೇ ಅವರ ರೈಡರ್ ಸಿನಿಮಾ ಕೂಡ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಇನ್ನು ಇವರ ಲಾಕ್ಡೌನ್ ಸಂದರ್ಭದಲ್ಲಿ ರೇವತಿ ರವರನ್ನು ಮದುವೆಯಾಗಿರುವುದು ನಮಗೆಲ್ಲರಿಗೂ ಗೊತ್ತಿದೆ. ಅದ್ದೂರಿಯಾಗಿ ಮದುವೆಯಾಗಬೇಕು ಎಂದುಕೊಂಡಿದ್ದ ಇವರು ಲವ್ ಕಾರಣದಿಂದಾಗಿ ಬಿಡದಿಯ ತೋಟದಲ್ಲಿಯೇ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗುತ್ತಾರೆ.
ನಂತರ ಲಾಕ್ಡೌನ್ ದಿನಗಳಲ್ಲಿ ಕೂಡ ಅಲ್ಲಿಯೇ ನೆಲೆಸುತ್ತಾರೆ. ಕಳೆದ ವರ್ಷವಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ರೇವತಿ ಅವರು ಗರ್ಭಿಣಿಯಾಗಿದ್ದಾರೆ ಎಂಬುದಾಗಿ ತಿಳಿಸಿದರು ಅದಾದ ಕೆಲವೇ ತಿಂಗಳುಗಳಲ್ಲಿ ಗಂಡುಮಗುವಿಗೆ ಕೂಡ ಜನ್ಮವನ್ನು ನೀಡುತ್ತಾರೆ. ಇತ್ತೀಚಿಗಷ್ಟೇ ಗಂಡು ಮಗುವಿಗೆ ಒಂಬತ್ತು ತಿಂಗಳು ಆದ ಹಿನ್ನೆಲೆಯಲ್ಲಿ ನಾಮಕರಣ ಕಾರ್ಯಕ್ರಮವನ್ನು ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಜೆಪಿ ನಗರದಲ್ಲಿ ನಿಖಿಲ್ ಕುಮಾರ್ ರವರು ಮಾಡಿದ್ದಾರೆ. ಹೌದು ಗೆಳೆಯರೆ ಶಾಸ್ತ್ರೋಕ್ತವಾಗಿ ನಡೆದಂತಹ ಈ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರ್ ಹಾಗೂ ದೇವತೆ ದಂಪತಿಗಳು ಮಗನಿಗೆ ಅವ್ಯಾನ್ ದೇವ್ ಎನ್ನುವ ಹೆಸರನ್ನು ಇಡುತ್ತಾರೆ.
ಇಷ್ಟೊಂದು ಸರಳವಾಗಿ ನಡೆದಿರುವ ಕಾರ್ಯಕ್ರಮಕ್ಕೂ ಕೂಡ ನಿಖಿಲ್ ಕುಮಾರ್ ಅವರು ಖರ್ಚು ಮಾಡಿರುವ ಹಣವನ್ನು ನೋಡಿದರೆ ನಿಜಕ್ಕೂ ಕೂಡ ನೀವು ಬೆಚ್ಚಿಬೀಳ್ತಿರಾ. ಹೌದು ಗೆಳೆಯರೆ ಚಿಕ್ಕಮಗುವಿನ ನಾಮಕರಣ ಸಮಾರಂಭದಲ್ಲಿ ಬಂದಿದ್ದು ಕೇವಲ ಆಪ್ತೇಷ್ಟರು ಹಾಗೂ ಕುಟುಂಬಸ್ಥರು ಮಾತ್ರ. ಹಾಗಿದ್ದರೂ ಕೂಡ ಈ ನಾಮಕರಣ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರ್ ಬರೋಬ್ಬರಿ 1.8 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ನಿಜಕ್ಕೂ ಕೂಡ ಇದು ಎಲ್ಲರೂ ಆಶ್ಚರ್ಯ ಪಡುವ ವಿಚಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಖರ್ಚಿನ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.
Comments are closed.